Advertisement
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರತೀ ತಿಂಗಳು 10 ಸಾವಿರ ಟನ್‌ಗಳಿಗೂ ಅಧಿಕ ಉಕ್ಕು ನಿರ್ಮಾಣ ಕ್ಷೇತ್ರಕ್ಕೆ ಸರಬರಾಜು ಆಗುತ್ತದೆ. ನಾಲ್ಕು ತಿಂಗಳ ಹಿಂದೆ ಕಿಲೋ ಉಕ್ಕಿಗೆ 42 ರೂ. ಇದ್ದುದು ಈಗ ಶೇ. 35ರಷ್ಟು ಏರಿದ್ದು, 60 ರೂ. ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಿಲೋಗೆ 40ರಿಂದ 42 ರೂ. ವರೆಗೆ ಇತ್ತು. ಬೆಲೆಯೇರಿಕೆ ಮತ್ತಿತರ ಕಾರಣಗಳಿಂದ ಪೂರೈಕೆ ಕೊರತೆಯೂ ತಲೆದೋರಿದೆ. ಇದೇ ಪರಿಸ್ಥಿತಿ ಇನ್ನಷ್ಟು ಸಮಯ ಮುಂದುವರಿಯಲಿದ್ದು, ಬೆಲೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ವರ್ತಕರು ಹೇಳಿದ್ದಾರೆ.
Related Articles
Advertisement
ಕಬ್ಬಿಣದ ಅದಿರು ಸಹಿತ ಕಚ್ಚಾ ಸಾಮಗ್ರಿಗಳ ಕೊರತೆ ಇದ್ದು, ಅವುಗಳ ಬೆಲೆ ಭಾರೀ ಏರಿಕೆಯಾಗಿದೆ. ಇದರಿಂದ ಉತ್ಪಾದನ ವೆಚ್ಚದಲ್ಲೂ ಹೆಚ್ಚಳವಾಗಿದ್ದು, ದರ ಏರಿಕೆ ಅನಿವಾರ್ಯವಾಗಿದೆ ಎಂಬುದಾಗಿ ಇಂಡಿಯನ್ ಅಸೋಸಿಯೇಶನ್ ಹೇಳಿದೆ.
ಉಕ್ಕಿನ ಬೆಲೆ ನಿರಂತರ ಏರುತ್ತಿದೆ. ಪೂರೈಕೆಯೂ ಸಾಕಷ್ಟು ಪ್ರಮಾಣದಲ್ಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಲೆ ಸುಮಾರು ಶೇ. 35ರಷ್ಟು ಏರಿದ್ದು, ಇನ್ನಷ್ಟು ಏರುವ ಸಾಧ್ಯತೆಗಳಿವೆ. ರಿಯಲ್‌ಎಸ್ಟೇಟ್ ಸಹಿತ ಸೇರಿದಂತೆ ಉಕ್ಕು ಅಧಾರಿತ ಉದ್ಯಮಗಗಳಿಗೆ ಇದರಿಂದ ತೀವ್ರ ಸಮಸ್ಯೆಗಳು ಎದುರಾಗಿದೆ.– ಮನ್ಸೂರು ಅಹಮ್ಮದ್ ಅಜಾದ್,
ಅಧ್ಯಕ್ಷರು ದ. ಕನ್ನಡ, ಉಡುಪಿ ಸ್ಟೀಲ್ ಟ್ರೇಡರ್ ಅಸೋಸಿಯೇಶನ್ ಕೊರೊನಾ ಬಳಿಕ ಚೇತರಿಕೆಯತ್ತ ಸಾಗುತ್ತಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಉಕ್ಕಿನ ಬೆಲೆ ಏರಿಕೆ ಮತ್ತಷ್ಟು ಹೊಡೆತ ನೀಡಿದೆ. ಕ್ಷೇತ್ರ ಈಗಾಗಲೇ ಸಿಮೆಂಟ್ ಸೇರಿದಂತೆ ಕೆಲವು ಸಾಮಗ್ರಿಗಳ ಬೆಲೆಯೇರಿಕೆ, ಕೆಂಪುಕಲ್ಲಿನ ಕೊರತೆ ಎದುರಿಸುತ್ತಿದೆ. ಉಕ್ಕು ದರ ಏರಿಕೆ ಇನ್ನಷ್ಟು ಹೊಡೆತ ನೀಡಲಿದೆ.– ನವೀನ್ ಕಾರ್ಡೊಜಾ, ಅಧ್ಯಕ್ಷರು ಕ್ರೆಡೈ ಮಂಗಳೂರು