Advertisement

ಪರಿಸರ ಉಳಿವಿಗೆ ಒಂದಾಗಿ ಶ್ರಮಿಸಿ

05:01 PM Sep 21, 2018 | Team Udayavani |

ಧಾರವಾಡ: ಸಂಗೀತದ ಮಧುರ ನಾದವು ಗೊಂದಲವನ್ನು ನಿವಾರಿಸಿ ಮನಸ್ಸನ್ನು ಶುದ್ಧಗೊಳಿಸುವಂತಹ ದೈವೀಕಲೆಯಾಗಿದೆ ಎಂದು ಕೃಷಿ ವಿವಿ ವಿಶ್ರಾಂತ ಕುಲಪತಿ ಡಾ| ಜೆ.ಎಚ್‌. ಕುಲಕರ್ಣಿ ಹೇಳಿದರು. ಇಲ್ಲಿನ ಶ್ರೀನಗರದಲ್ಲಿರುವ ಪರಿಸರ ಭವನದಲ್ಲಿ ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನ, ಹು-ಧಾ ನಾಗರಿಕ ಪರಿಸರ ಸಮಿತಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪದ್ಮಭೂಷಣ ಡಾ| ಪುಟ್ಟರಾಜ ಗವಾಯಿಗಳ 8ನೇ ಪುಣ್ಯಸ್ಮರಣೆ ಕಾರ್ಯಕ್ರಮ, ಸಂಗೀತೋತ್ಸದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರದ ಉಳಿವಿಗೂ ನಾವೆಲ್ಲ ಜೊತೆಗೂಡಿ ಶ್ರಮಿಸಬೇಕಾಗಿದೆ ಎಂದರು.

Advertisement

ಕಾರ್ಯಕ್ರಮ ಉದ್ಘಾಟಿಸಿದ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಡಾ| ಪುಟ್ಟರಾಜ ಗವಾಯಿಗಳು ಸಾವಿರಾರು ಅಂಧ ವಿದ್ಯಾರ್ಥಿಗಳಿಗೆ ಬದುಕಲು ತೋರಿಸಿಕೊಟ್ಟಿದಲ್ಲದೆ, ಸಂಗೀತದ ಜ್ಞಾನ ಅವರಲ್ಲಿ ಬರುವಂತೆ ಪ್ರೇರಣೆ ನೀಡಿದ ಮಹಾನ್‌ ವ್ಯಕ್ತಿ. ಅಲ್ಲದೆ ಈಗ ಅವರ ಅನೇಕ ಶಿಷ್ಯರು ಪ್ರಸಿದ್ಧ ಸಂಗೀತಗಾರರಾಗಿದ್ದಾರೆ ಎಂದರು. ಕಲಾವಿದ ಸದಾಶಿವ ಗಾಯನ ಪ್ರಸ್ತುತಪಡಿಸಿದರು. ತಬಲಾದಲ್ಲಿ ಪಂ| ಸಾತಲಿಂಗಪ್ಪ ದೇಸಾಯಿ ಸಾಥ್‌ ನೀಡಿದರು. ಬಸವರಾಜ ಹಿರೇಮಠ ಸಂವಾದಿನಿ ಪ್ರಸ್ತುತಪಡಿಸಿದರೆ, ಅಕ್ಕಮಹಾದೇವಿ ಮಠ ಅವರ ವಯಲಿನ್‌ ಜುಗಲ್‌ಬಂದಿ ಗಮನ ಸೆಳೆಯಿತು.

ಡಾ| ಪುಟ್ಟರಾಜ ಗವಾಯಿ ಪ್ರತಿಷ್ಠಾನದ ಅಧ್ಯಕ್ಷ ಮಹಾಬಲೇಶ್ವರ ಹಾಸಿನಾಳ ಅಧ್ಯಕ್ಷತೆ ವಹಿಸಿದ್ದರು. ಪಂ| ಎಂ. ವೆಂಕಟೇಶಕುಮಾರ, ಡಾ| ವಿಲಾಸ ಕುಲಕರ್ಣಿ, ಪಂ|ಡಾ| ಶಾಂತಾರಾಮ ಹೆಗಡೆ, ಪಂ| ಶಿವಾನಂದ ತರರ್ಲ ಘಟ್ಟ, ಪಂ| ರಘುನಾಥ ನಾಕೋಡ, ವಿದುಷಿ ರೇಣುಕಾ ನಾಕೋಡ್‌, ಉದಯಕುಮಾರ್‌ ದೇಸಾಯಿ, ನಿಜಗುಣಿ ರಾಜಗುರು, ಶಾಂತವೀರ ಬೆಟಗೇರಿ, ಅನಿಲ ಅಂಗಡಿ, ಆರತಿ ಪಾಟೀಲ, ಡಾ| ಎ.ಎಲ್‌. ದೇಸಾಯಿ, ಗಂಗಾವತಿಯ ನಾಗನಗೌಡ ಪಾಟೀಲ, ಪ್ರತಿಷ್ಠಾನ ಸದಸ್ಯ ಬಸವರಾಜ ಹಿರೇಮಠ, ರಮೇಶ ಕೋಲಕುಂದ, ಅಯ್ಯಪ್ಪಯ್ಯ ಹಲಗಲಿಮಠ, ಡಾ| ಗುರುಬಸವ ಹಿರೇಮಠ, ಪಂ| ಬಸವರಾಜ ಎಡಿಗೊಂಡ ಇದ್ದರು. ಕಲಾವಿದರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ಉಪಾಧ್ಯಕ್ಷ ಶಂಕರ ಕುಂಬಿ ಸ್ವಾಗತಿಸಿದರು. ಡಾ| ಅರ್ಜುನ ವಠಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next