Advertisement
ಕೊರಟಗೆರೆ ಪಟ್ಟಣದ ಕಂದಾಯ ಇಲಾಖೆಯಲ್ಲಿ ಶನಿವಾರ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದ ನಂತರ ಕೊರಟಗೆರೆ ಜೆಡಿಎಸ್ ಪಕ್ಷದ ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.
Related Articles
Advertisement
ಮೆರವಣಿಗೆಯಲ್ಲಿ30 ಸಾವಿರ ಕಾರ್ಯಕರ್ತರು
ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ 30 ಸಾವಿರಕ್ಕೂ ಅಧಿಕ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮತ್ತು ಅಭಿಮಾನಿಗಳ ಜೊತೆ ಗೂಡಿ ಕಂದಾಯ ಇಲಾಖೆಯ ಕಚೇರಿ ಆವರಣದವರೆಗೂ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಬೃಹತ್ ಮೆರವಣಿಗೆ ನಡೆಸಿದರು. ಸುಡುವ ಬಿಸಿಲಿನಲ್ಲೂ ಸಾವಿರಾರು ಕಾರ್ಯಕರ್ತರು ಕುಣಿಯುತ್ತಾ ತಮ್ಮ ನಾಯಕನ ಪರವಾಗಿ ಜೈಘೋಷ ಹಾಕಿ ಜೆಡಿಎಸ್ ಪಕ್ಷದ ಪರವಾಗಿ ಭರ್ಜರಿ ಪ್ರಚಾರ ನಡೆಸಿದರು.
ಕಟ್ಟೆಗಣಪತಿಗೆ ವಿಶೇಷ ಪೂಜೆ ಸಲ್ಲಿಕೆ
ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನಾ ಕ್ಯಾಮೇನಹಳ್ಳಿಯ ಶ್ರೀಆಂಜನೇಯ ಸ್ವಾಮಿ, ಕೊರಟಗೆರೆ ಪಟ್ಟಣದ ಶ್ರೀಕಟ್ಟೆಗಣಪತಿ ಸ್ವಾಮಿ ಮತ್ತು ಶ್ರೀಶಿರಡಿ ಸಾಯಿಬಾಬಾ ದೇವಾಲಯಕ್ಕೆ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ತಮ್ಮ ಜೆಡಿಎಸ್ ಪಕ್ಷದ ಮುಖಂಡರ ಜೊತೆ ಗೂಡಿ ಎ 15ರ ಶನಿವಾರ ಮಧ್ಯಾಹ್ನ ೧೨.೩೦ಕ್ಕೆ ನಾಮಪತ್ರ ಸಲ್ಲಿಸಿದರು.
ನಮ್ಮ ಪೋನ್ ಕರೆಗೆ ನೇರವಾಗಿ ಸಿಗುವ ವ್ಯಕ್ತಿ ಲಾಲ್ ಮಾತ್ರ. ನಾವು ಹೇಳಿದ ಕಡೆಯಲ್ಲಿ ನೇರವಾಗಿ ಬರ್ತಾರೇ ನಮ್ಮ ಕಷ್ಟ ಸುಖದಲ್ಲಿ ಬಾಗಿ ಆಗ್ತಾರೇ. ನಮ್ಮ ಕೊರಟಗೆರೆ ಕ್ಷೇತ್ರದ ಜನರ ಆರೋಗ್ಯ ರಕ್ಷಣೆಗೆ 24 ಗಂಟೆಯು ಕಾವಲು ಕಾಯ್ತಾರೇ. ೨೫ವರ್ಷ ಕೊರಟಗೆರೆ ಕ್ಷೇತ್ರದಲ್ಲಿ ಜನಸೇವೆ ಮಾಡಿ ೩೫ ಸಾವಿರ ಜನರ ಆರೋಗ್ಯ ರಕ್ಷಣೆ ಮಾಡಿದ್ದಾರೆ. ನಾವು 2018 ರಲ್ಲಿ ಕಳೆದು ಕೊಂಡಿದ್ದೇವೆ. ಈಗ2023 ಕ್ಕೆ ಮತ್ತೇ ಮಾಜಿ ಶಾಸಕ ಸುಧಾಕರಲಾಲ್ ಗೆಲುವು ಖಚಿತ- ಗೋವಿಂದಪ್ಪ. ಜೆಡಿಎಸ್ ಕಾರ್ಯಕರ್ತ, ಪುರವಾರ
25 ವರ್ಷದಿಂದ ನನಗೆ ನಿಮ್ಮ ಆರ್ಶಿವಾದ ದೊರೆತಿದೆ. ನಿಮ್ಮ ಋಣವನ್ನು ತೀರಿಸಲು ನನಗೆ ಒಂದು ಅವಕಾಶ ನೀಡಿ. ನಿಮ್ಮ ಅಣ್ಣ, ತಮ್ಮ ಮತ್ತು ಮನೆಯ ಮಗನಾಗಿ ನಾನು ಸದಾ ಇರ್ತೀನಿ. 2023ರ ಚುನಾವಣೆಯ ಹೋರಾಟದ ನನ್ನ ಬಲವಾದ ಶಕ್ತಿಯೇ ನೀವು. ನನಗೇ ತೋರಿದ ಪ್ರೀತಿಗೆ ನಾನು ಎಂದಿಗೂ ಚಿರಋಣಿ. ಕೊರಟಗೆರೆ ವಿಧಾನಸಭಾ ಕ್ಷೇತ್ರ ಮತ್ತೆ ಜೆಡಿಎಸ್ ಭದ್ರಕೋಟೆ ಆಗುವುದು ಖಚಿತ. ಕುಮಾರಸ್ವಾಮಿ ಕನಸಿನ ಪಂಚರತ್ನ ಯೋಜನೆಯು ಕೊರಟಗೆರೆ ಕ್ಷೇತ್ರದ ಅಭಿವೃದ್ದಿಗೆ ಸಹಕಾರಿ ಆಗಲಿದೆ.–ಪಿ.ಆರ್.ಸುಧಾಕರಲಾಲ್