Advertisement
ನ್ಯಾಯಮೂರ್ತಿ ಸಚಿನ್ ದತ್ತಾ ಏಕಸದಸ್ಯ ಪೀಠವು, ಅರ್ಜಿಯು ವಿಚಾ ರ ಣೆಗೆ ಯೋಗ್ಯವಾಗಿಲ್ಲ. ಯಾವುದೇ ತಕರಾರು ಅರ್ಜಿಯ ಕುರಿತು ನಿರ್ದಿಷ್ಟ ವಾದವನ್ನು ಪರಿಗಣಿಸುವಂತೆ ಚುನಾ ವಣ ಆಯೋಗಕ್ಕೆ ನ್ಯಾಯಾಲಯವು ಸೂಚಿಸಲು ಸಾಧ್ಯವಿಲ್ಲ. ಅಲ್ಲದೇ ಅರ್ಜಿದಾರರು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಆಯೋಗದ ಮೊರೆ ಹೋಗಿದ್ದಾರೆ. ಈ ಕುರಿತು ಆಯೋಗವು ಸ್ವತಂತ್ರ ನಿರ್ಧಾರವನ್ನು ಕೈಗೊಳ್ಳಲಿದೆ ಎಂದು ಪೀಠ ಹೇಳಿತು.ವಕೀಲರಾಗಿರುವ ಅರ್ಜಿದಾರ ಆನಂದ್ ಎಸ್.ಜೋಂಧಾಲೆ ಅವರು, ಪ್ರಧಾನಿ ಮೋದಿ ಅವರು ದೇವರು ಮತ್ತು ಮಂದಿರಗಳ ಹೆಸರಿನಲ್ಲಿ ಮತ ಯಾಚನೆ ಮಾಡುತ್ತಿದ್ದು, ಚುನಾವಣ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಯಾಗುತ್ತದೆ. ಐಪಿಸಿ ಹಾಗೂ ಪ್ರಜಾ ಪ್ರತನಿಧಿ ಕಾಯ್ದೆಯಡಿ ಅಪರಾಧ ಎನಿಸಿಕೊಳ್ಳುತ್ತದೆ ಎಂದು ಹೇಳಿದ್ದರು.