ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳುವ ಮೂಲಕ ರಾಜಕೀಯದಲ್ಲಿ ಹೊಸ ಕುತೂಹಲ
ಮೂಡಿಸಿದ್ದಾರೆ. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “”ಸಮ್ಮಿಶ್ರ ಸರ್ಕಾರ ಅವಧಿ ಪೂರ್ಣ
ಮಾಡುವುದರ ಬಗ್ಗೆ ಅನುಮಾನ ಇದೆ. ಮುಂದೆ ಏನಾಗುತ್ತೆ ಎಂದು ಇನ್ನು 15 ದಿನ ಕಾದು ನೋಡಿ. 104 ಶಾಸಕರಿರುವ ಬಿಜೆಪಿಯಿಂದ ಸರ್ಕಾರ ರಚಿಸುವ ಜವಾಬ್ದಾರಿ ನಾನು ವಹಿಸಿಕೊಳ್ಳುತ್ತೇನೆ.
Advertisement
ಅದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು” ಎಂದರು. “”ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಶ್ರೀರಾಮುಲು ಹಾಗೂಉಮೇಶ ಕತ್ತಿ ಹೇಳಿಕೆ ನೀಡುತ್ತಿದ್ದಾರೆಯೇ ಹೊರತು ಪ್ರತ್ಯೇಕ ರಾಜ್ಯದ ಉದ್ದೇಶ ಅವರಿಗಿಲ್ಲ. ಮತ್ತೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಮುಂದೆಯೂ ಈ ರೀತಿ ಹೇಳಿಕೆ ನೀಡಬಹುದು. ಹೀಗಾಗಿ ಪ್ರತ್ಯೇಕ ರಾಜ್ಯದ ಬಗ್ಗೆ ಹೇಳಿಕೆ ನೀಡದಂತೆ ಶಾಸಕರು, ಮುಖಂಡರಿಗೆ ಹೇಳಲಾಗಿದೆ. ರಾಜ್ಯ ಒಡೆಯಲು ಬಿಜೆಪಿ ಬೆಂಬಲ ಇಲ್ಲ” ಎಂದು
ಸ್ಪಷ್ಟಪಡಿಸಿದರು.