Advertisement
ಕಳೆದ ಬಾರಿ 108 ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆಯಲ್ಲಿ ಈ ಬಾರಿ ಶಾಲಾರಂಭದ ಪ್ರಥಮ ದಿನದಂದು 130 ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುವ ಮೂಲಕ ಹೋಬಳಿಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದ ಶಾಲೆಯೆಂದೇ ಹೆಗ್ಗಳಿಕೆಯನ್ನು ಪಡೆದಿದೆ. ಸರಕಾರ ನಾಲ್ಕು ವರ್ಷಗಳ ಹಿಂದೆ ಆಂಗ್ಲ ಮಾಧ್ಯಮ ವಿಭಾಗ ಆರಂಭಿಸಿದ ಬಳಿಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದು , 1ರಿಂದ 4ನೇ ತರಗತಿ ಮತ್ತು 6ರಿಂದ 8ನೇ ತರಗತಿವರೆಗೆ ಸುಮಾರು 600 ವಿದ್ಯಾರ್ಥಿಗಳಿದ್ದಾರೆ.
Related Articles
Advertisement
ಶಿಕ್ಷಕರ ಕೊರತೆ
ಶಾಲೆಯಲ್ಲಿ ಐದು ಮಂದಿ ಖಾಯಂ ಶಿಕ್ಷಕರಿದ್ದು, ಈ ಬಾರಿ ಆರಂಭದಿಂದಲೇ 3 ಅತಿಥಿ ಶಿಕ್ಷಕರನ್ನು ಇಲಾಖೆ ನೀಡಿದೆ. ಆದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪ್ರಾ.ಶಾಲೆಗೆ ಮೂವರು ಶಿಕ್ಷಕರ ಅಗತ್ಯ ಇದ್ದು ಒಬ್ಬರು ಮಾತ್ರ ಇದ್ದಾರೆ. ಒಂದನೇಯಿಂದ 4ನೇ ತರಗತಿಯವರೆಗೆ 14 ಶಿಕ್ಷಕರ ಅಗತ್ಯತೆಯಿದ್ದು, ಪ್ರಸ್ತುತ 7 ಶಿಕ್ಷಕರಿದ್ದಾರೆ. ಒಟ್ಟು ಈ ಶಾಲೆಗೆ 9 ಶಿಕ್ಷಕ ಕೊರತೆಯಿದೆ. ಒಟ್ಟು 13 ವಿದ್ಯಾರ್ಥಿಗಳು ಕೊಣಾಜೆ ಕುಂಟಲಗುಳಿಯಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು ಇರುವ ವಿದ್ಯಾರ್ಥಿಗಳ ಸಂಖ್ಯೆ 13. ಆದರೆ ಪ್ರಥಮ ದಿನ ಶಾಲೆಗೆ ಬಂದವರು ನಾಲ್ವರು ಮಾತ್ರ. ಓರ್ವ ಶಿಕ್ಷಕರನ್ನು ಹೊಂದಿರುವ ಈ ಶಾಲೆಯಲ್ಲಿ ಐದು ತರಗತಿಯನ್ನು ಒಂದೇ ಕೊಠಡಿಯಲ್ಲಿ ನಿರ್ವಹಿಸಲಾಗುತ್ತಿದೆ. ಶಾಲಾರಂಭವನ್ನು ಆಚರಣೆ ಮಾಡಿದರೂ ವಿದ್ಯಾರ್ಥಿಗಳ ಕಲರವ ಇಲ್ಲದ ಈ ಶಾಲೆಗೆ ಇಬ್ಬರು ವಿದ್ಯಾರ್ಥಿಗಳು ಸೇರ್ಪಡೆಯಾಗುವ ಭರವಸೆ ನೀಡಿದ್ದು, ಒಂದೆರಡು ದಿನಗಳಲ್ಲಿ ಒಂದನೇ ತರಗತಿಗೆ ವಿದ್ಯಾರ್ಥಿಗಳು ದಾಖಲಾತಿ ಪಡೆಯಲಿದ್ದಾರೆ ಎನ್ನುತ್ತಾರೆ ಶಾಲಾ ಶಿಕ್ಷಕಿ. ಕೆಲವು ವರ್ಷಗಳಿಂದ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಕೂಲಿ ಕಾರ್ಮಿಕರ ವಿದ್ಯಾರ್ಥಿಗಳು ಕೋವಿಡ್ ಸಂದರ್ಭದಲ್ಲಿ ತಮ್ಮ ಊರಿಗೆ ತೆರಳಿದ್ದರಿಂದ ಸಂಖ್ಯೆ ಇನ್ನಷ್ಟು ಕಡಿಮೆಯಾಗಿದೆ. ಆದರೆ ಇಲ್ಲಿ ಅಗತ್ಯ ಬೇಕಾದ ಎಲ್ಲ ಸೌಲಭ್ಯ ಇದೆ.
ಕಲಿಕಾ ವಿಧಾನದಿಂದ ಆಕರ್ಷಣೆ
ಎರಡು ವರ್ಷಗಳಿಂದ ಈ ಶಾಲೆಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ವಿದ್ಯಾರ್ಥಿಗಳ ಹೆತ್ತವರಿಗೆ ಬೇರೆ ಶಾಲೆಗಳಿಗೆ ತೆರಳುವಂತೆ ಮನವೊಲಿಸಲಾಗುತ್ತಿದೆ. ಇಲ್ಲಿನ ಶಿಕ್ಷಕರ ಕಲಿಕಾ ವಿಧಾನ ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ಶಿಕ್ಷಕರ ಕೊರತೆ ನೀಗಿಸಿದರೆ ಇನ್ನಷ್ಟು ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. – ಆಲಿಸ್ ವಿಮಲಾ, ಮುಖ್ಯ ಶಿಕ್ಷಕಿ ದೇರಳಕಟ್ಟೆ ಹಿ.ಪ್ರಾ. ಶಾಲೆ
ಶಾಸಕರಿಗೆ ಮನವಿ
ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಮೂಲ ಸೌಕರ್ಯಕೆ ಹೆಚ್ಚಿನ ಆದ್ಯತೆ ನೀಡಲು ಶಾಸಕ ಯು.ಟಿ.ಖಾದರ್ ಅವರಿಗೆ ಮನವಿ ಮಾಡಿದ್ದು, ಶಾಸಕರು ಒಪ್ಪಿಕೊಂಡಿದ್ದಾರೆ. ಈ ಬಾರಿ ಶಿಕ್ಷಕರ ಕೊರತೆ ನೀಗಿಸಲು ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗುವುದು. – ಅಬ್ದುಲ್ ಸತ್ತಾರ್, ಬೆಳ್ಮ ಗ್ರಾ.ಪಂ. ಅಧ್ಯಕ್ಷ
ವಸಂತ್ ಎನ್. ಕೊಣಾಜೆ