ನವದೆಹಲಿ : ಕೋವಿಡ್ ಸೋಂಕಿನ ಹೆಚ್ಚಳ ದಿನೇ ದಿನೇ ಜಾಸ್ತಿ ಆಗ್ತಾನೆ ಇದೆ. ಇಂದು ಭಾರತದಲ್ಲಿ ಸೋಂಕಿತರ ಸಂಖ್ಯೆ ಬರೋಬ್ಬರಿ 4 ಲಕ್ಷವನ್ನು ದಾಟಿದೆ. ಈ ಸಂದರ್ಭದಲ್ಲಿ ವೈದ್ಯರ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಲೂ ಕಷ್ಟ. ಪ್ರತಿ ನಿತ್ಯ ಕೋವಿಡ್ ಸೋಂಕಿತರ ಸಂಪರ್ಕದಲ್ಲಿ ಇರುವ ಅವರ ಸ್ಥಿತಿ ತುಂಬಾ ಶೋಚನೀಯವಾಗಿದೆ.
ಇನ್ನು ಪ್ರತಿ ದಿನ ಬೆಳಗ್ಗೆ ಇಂದು ರಾತ್ರಿಯತನಕ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಧರಿಸಿ ಬೇಸತ್ತು ಹೋಗಿದ್ದಾರೆ. ಬೆಳಗ್ಗೆಯಿಂದ ಪಿಪಿಇ ಕಿಟ್ ಧರಿಸಿ ಸೆಕೆಯಲ್ಲಿ ವೈದ್ಯರು ತುಂಬಾ ಕಷ್ಟ ಪಡುತ್ತಿದ್ದಾರೆ.
ಇತ್ತೀಚೆಗೆ ಪಿಪಿಇ ಕಿಟ್ ಧರಿಸಿ ಬೆವರಿ ಬಸವಳಿದ ಒಬ್ಬ ವೈದ್ಯನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ. ವೈರಲ್ ಆಗುತ್ತಿರುವ ಫೋಟೋದಲ್ಲಿರುವ ವೈದ್ಯನ ಹೆಸರು ಸೋಹಿಲ್. ಇವರು ಪ್ರತಿದಿನ ವೈದ್ಯರು ಹೇಗೆಲ್ಲ ಕಷ್ಟ ಪಡುತ್ತಾರೆ ಎಂಬುದರ ಬಗ್ಗೆ ಟ್ವೀಟ್ ಮೂಲಕ ನೋವಿನ ನುಡಿಗಳನ್ನು ಹಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವೈದ್ಯ ಸೋಹಿಲ್, ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಪರವಾಗಿ ನಾನು ಹೇಳುತ್ತಿದ್ದೇನೆ. ನಾವು ನಮ್ಮ ಕುಟುಂಬಗಳಿಂದ ದೂರವಿದ್ದು ಕೆಲಸ ಮಾಡುತ್ತಿದ್ದೇವೆ. ಕೆಲವು ಸಲ ಕೋವಿಡ್ ರೋಗಿಗಳಿಂದ ಒಂದು ಅಡಿ ಅಂತರದಲ್ಲೇ ಇರುತ್ತೇವೆ, ಇನ್ನೂ ಕೆಲವು ಬಾರಿ ಗಂಭೀರ ಸ್ಥಿತಿಯಲ್ಲಿರೋ ವೈದ್ಧರಿಂದ ಒಂದಿಂಚು ದೂರ ನಿಂತು ಕಾರ್ಯನಿರ್ವಹಿಸುತ್ತೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಅಂತ ನಾನು ಮನವಿ ಮಾಡುತ್ತೇನೆ ಎಂದು ವೈದ್ಯರು ಮನವಿ ಮಾಡಿದ್ದಾರೆ.