ಹಾವೇರಿ: ಯಾರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರು ತ್ತಾರೋ ಅವರಿಗೆ ಮಾತ್ರ ಬಿಜೆಪಿಯಲ್ಲಿ ಸ್ಥಾನಮಾನ ಸಿಗುತ್ತದೆ. ಈ ನಿಯಮದಲ್ಲಿ ಯಾವುದೇ ಕಾರಣಕ್ಕೂ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶ ನೀಡಿದರು.
ಹಾವೇರಿ ವಿಧಾನಸಭೆ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ಮಾತನಾಡಿ, ಯಾರು ಪಕ್ಷದಲ್ಲಿ ಸಕ್ರಿಯರಾಗಿರುತ್ತಾರೋ ಅವರಿಗಷ್ಟೇ ಪಕ್ಷದ ಪದಾಧಿ ಕಾರಿ, ಇತರ ಸ್ಥಾನಮಾನ ಸಿಗುತ್ತದೆ. ಅದನ್ನು ಬಿಟ್ಟು ಮಧ್ಯದಲ್ಲಿ ಕಲ್ಲು ಹೊಡೆದು, ಟಯರ್ ಸುಟ್ಟು, ಪ್ರತಿಭಟನೆ ಮಾಡಿ ಸ್ಥಾನಮಾನ ಪಡೆಯಲು ಬಿಜೆಪಿಯಲ್ಲಿ ಸಾಧ್ಯವಿಲ್ಲ. ಇದು ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಾಗಿದ್ದು, ಬಿಜೆಪಿಯಲ್ಲಿ ಇದೇ ನಿಯಮ ಅನ್ವಯಿಸುತ್ತದೆ ಎಂದರು.
ಯಡಿಯೂರಪ್ಪ ಕೇಳಿದ್ದನ್ನು ಕೊಡುವ ಕಲ್ಪವೃಕ್ಷ. ರಾಜ್ಯಕ್ಕೆ ಮೊದಲ ಕೃಷಿ ಬಜೆಟ್ ಕೊಟ್ಟರು. ರೈತರ ಸಾಲದ ಬಡ್ಡಿ ಮನ್ನಾ ಮಾಡಿದರು. ಸಂಧ್ಯಾ ಸುರûಾ, ಭಾಗ್ಯಲಕ್ಷಿ ¾à ಬಾಂಡ್, ಶಾಲಾ ಮಕ್ಕಳಿಗೆ ಸೈಕಲ್, ಹಾಲಿಗೆ ಪ್ರೋತ್ಸಾಹಧನ ಕೊಟ್ಟರು. ಹೀಗಾಗಿ, ಅವರು ಕೇಳಿದ್ದನ್ನು ಕೊಡುವ ಕಲ್ಪವೃಕ್ಷ.
-ನಳಿನ್‌ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ