Advertisement

ಡಿಸೆಂಬರ್ ತಿಂಗಳಲ್ಲಿ 108 ಅಡಿ ಎತ್ತರದ ಕೆಂಪೇಗೌಡರ ಪ್ರತಿಮೆ ಅನಾವರಣ

09:55 AM Sep 01, 2022 | Team Udayavani |

ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ತಿಂಗಳಲ್ಲಿ “ಸ್ಟ್ಯಾಚು ಆಫ್ ಪ್ರಾಸ್ಪರಿಟಿ” (ಪ್ರಗತಿ ಪ್ರತಿಮೆ) ಅನಾವರಣಗೊಳ್ಳುವ ಸಾಧ್ಯತೆಯಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರವಾಗಿಸುವ ರೀತಿ ಕೆಂಪೇಗೌಡ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಕ್ಕೆ ರಾಜ್ಯ ಸರಕಾರ ಯೋಜನೆ ರೂಪಿಸಿದ್ದು, ಸಿಎಂ ಬಸವರಾಜ್ ಬೊಮ್ಮಾಯಿ ಅವರು ಇಂದು 45 ದಿನಗಳ ಉದ್ಘಾಟನಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣಗೊಳ್ಳುತ್ತಿದೆ. ಅಮೆರಿಕಾದ ಸ್ವಾತಂತ್ರ್ಯ ಪ್ರತಿಮೆ (ಸ್ಟ್ಯಾಚು ಆಫ್ ಲಿಬರ್ಟಿ), ಗುಜರಾತಿನ ಏಕತಾ ಪ್ರತಿಮೆ ಸಾಲಿಗೆ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಸೇರಿಸುವುದಕ್ಕೆ ರಾಜ್ಯ ಸರಕಾರ ಯೋಚಿಸಿದ್ದು, ಇದಕ್ಕೆ ಸ್ಟ್ಯಾಚು ಆಫ್ ಪ್ರಾಸ್ಪರಿಟಿ ಎಂದು ನಾಮಕರಣ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ನನ್ನ ಹೆಸರಿನಲ್ಲಿ ಅಕ್ರಮ ಆಸ್ತಿ ನೋಂದಣಿಯಾಗಿದ್ದರೆ ನೆಲಸಮ ಮಾಡಿ: ಅಧಿಕಾರಿಗಳಿಗೆ ಮಮತಾ ಸೂಚನೆ

ರಾಜ್ಯದ 31 ಜಿಲ್ಲೆಗಳಲ್ಲೂ ಕೆಂಪೇಗೌಡರ ಸಾಧನೆ ಬಗ್ಗೆ ಅರಿವು ಮೂಡಿಸುವುದಕ್ಕಾಗಿ 45 ದಿನಗಳ ವಿಶೇಷ ಅಭಿಯಾನಕ್ಕೆ ಇಂದು ಬೊಮ್ಮಾಯಿ ಚಾಲನೆ ನೀಡುತ್ತಾರೆ.

Advertisement

ಈ ಅವಧಿಯಲ್ಲಿ ರಾಜ್ಯದ 10 ಸಾವಿರ ದೇವಾಲಯಗಳಲ್ಲಿ ನಂದಾ ದೀಪ ಬೆಳಗಲಾಗುತ್ತದೆ. ಎಲ್ಲ ಹಳ್ಳಿಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹಿಸಲಾಗುತ್ತದೆ. ಬೃಹತ್ ಎಲ್ ಇಡಿ ಪರದೆ ಅಳವಡಿಸಿರುವ ತಲಾ ಒಂದು ವಾಹನವನ್ನು ಎಲ್ಲ ಜಿಲ್ಲೆಗಳಿಗೆ ಕಳುಹಿಸಲು ಆಯೋಜಕರು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next