Advertisement
ಮಲೆ ಮಹದೇಶ್ವರ ಬೆಟ್ಟದ ದಕ್ಷಿಣ ದಿಕ್ಕಿನಲ್ಲಿರುವ ದೀಪದ ಒಡ್ಡು ಪ್ರದೇಶ ದಲ್ಲಿ 108 ಅಡಿ ಎತ್ತರದ ಸುಂದರ ಪ್ರತಿಮೆ ನಿರ್ಮಾಣ ಮಾಡುವ ಪರಿಕಲ್ಪನೆ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅ. ಅಲ್ಲಿ ಆಯುರ್ವೇದ ಚಿಕಿತ್ಸಾಲಯ, ಧ್ಯಾನ ಕೇಂದ್ರ, ಉದ್ಯಾನವನ ನಿರ್ಮಾಣ ಮಾಡಲು 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಅವರು ಉತ್ಸುಕತೆಯಿಂದ ಯೋಜನೆಗೆ ಅಗತ್ಯ ಅನುಮೋದನೆ ನೀಡಿ ಕಾಮಗಾರಿ ಆರಂಭಿಸಿದರು.
Related Articles
Advertisement
ಕುಸಿದ ತಡೆಗೋಡೆ, ಪ್ರವೇಶಕ್ಕೆ ನಿರ್ಬಂಧ: ಪ್ರತಿಮೆ ಲೋಕಾರ್ಪಣೆಗೊಂಡು ಭಕ್ತಾದಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆಗೆ ಸುರಿದ ಮಳೆಗೆ ಪ್ರತಿಮೆಯ ಸುತ್ತಲೂ ನಿರ್ಮಿಸಿದ್ದ ಒಂದು ಬದಿಯ ತಡೆಗೋಡೆಯು ಕುಸಿಯಿತು. ಇದರ ಪರಿಣಾಮ ಎಚ್ಚೆತ್ತ ಅಧಿಕಾರಿಗಳು ಪ್ರತಿಮೆ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದ್ದಾರೆ. ಇದಾದ ಬಳಿಕ ಪ್ರತಿಮೆಯ ಸ್ಥಳದ ಸುತ್ತಲೂ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಲು ಅಂದಾಜುಪಟ್ಟಿ ತಯಾರಿಸಿ ಸಲ್ಲಿಸಲಾಗಿದ್ದು ಆಡಳಿತಾತ್ಮಕ ಪ್ರಕ್ರಿಯೆಯ ಹಂತದಲ್ಲಿದೆ.
ಪ್ರತಿಮೆ ಸ್ಥಳಕ್ಕಿಲ್ಲ ಮೂಲಸೌಕರ್ಯ: ಮಲೆ ಮಹದೇಶ್ವರರ 108 ಅಡಿ ಪ್ರತಿಮೆ ನಿರ್ಮಾಣ ಮಾಡಿರುವ ಸ್ಥಳಕ್ಕೆ ಮಹದೇಶ್ವರಬೆಟ್ಟ – ಪಾಲಾರ್ ಮುಖ್ಯ ರಸ್ತೆಯಿಂದ 1-1.5 ಕಿ.ಮೀ ದೂರವಿದೆ. ಆದರೆ ಈ ಸ್ಥಳಕ್ಕೆ ತೆರಳಲು ಉತ್ತಮವಾದ ರಸ್ತೆ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗಿದ್ದು ಮುಖ್ಯ ರಸ್ತೆಯಿಂದ ಪ್ರತಿಮೆಯ ಸ್ಥಳದವರೆಗೂ ಕೇವಲ ಗ್ರಾವೆಲ್ ಹಾಕಿ ಸಮತಟ್ಟು ಮಾಡಿ ಕೆಲಸ ಸ್ಥಗಿತಗೊಳಿಸಲಾಗಿದೆ.
ಚರಂಡಿ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದರೂ ಅದೂ ಕೂಡ ಅರ್ಧಕ್ಕೆ ನಿಂತಿದೆ. ಇನ್ನೂ ಕೂಡ ವಾಹನಗಳ ಪಾರ್ಕಿಂಗ್‌ಗೆ , ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡಿಲ್ಲ.
ರಸ್ತೆ ನಿರ್ಮಾಣ , ಚರಂಡಿ ನಿರ್ಮಾಣ ಸೇರಿದಂತೆ ಎಲ್ಲಾ ಕಾಮ ಗಾರಿಗಳು ಆರಂಭವಾಗಿದ್ದು ಕಾಮಗಾರಿಗಳು ಪೂರ್ಣಗೊಂಡ ಕೂಡಲೇ ಭಕ್ತಾದಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಡಲಾಗುವುದು. ● ಗೀತಾ ಹುಡೇದ, ಕಾರ್ಯದರ್ಶಿ, ಮಹದೇಶ್ವರ ಪ್ರಾಧಿಕಾರ
ಪ್ರತಿಮೆ ನಿರ್ಮಾಣವಾದ ಬಳಿಕ 2 ಅಂತಸ್ತನಲ್ಲಿ ಕಲಾಕೃತಿ ಮತ್ತು ಸಂಗತಿಗಳನ್ನು ನಿರ್ಮಾಣ ಮಾಡಲು ಅನುಮತಿ ಅಗತ್ಯವಿತ್ತು. ಯಾವ ಸಂಗತಿಗಳನ್ನು ನಿರ್ಮಾಣ ಮಾಡಬೇಕು ಎಂದು ನಿರ್ಧಾರ ಮಾಡುವಲ್ಲಿ ತಡವಾದ ಪರಿಣಾಮ ಕಾಮಗಾರಿ ನಿಧಾನವಾಗಿತ್ತು. ಇದೀಗ ಎಲ್ಲಾ ಅಂತಿಮವಾಗಿದ್ದು 30 ಜನ ಕಾರ್ಮಿಕರು ತಮ್ಮ ಕೆಲಸ ಆರಂಭಿಸಿದ್ದಾರೆ. ಮುಂದಿನ 60-75 ದಿನಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ● ಮಾಲತೇಶ್ ಪಾಟೀಲ್, ಗುತ್ತಿಗೆದಾರ
-ವಿನೋದ್ ಎನ್ ಗೌಡ