Advertisement

Chouti: ರಾಜ್ಯಾದ್ಯಂತ “ಆಪರೇಷನ್‌ ಪಿಒಪಿ”

11:32 PM Sep 16, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರಿಸ್‌ (ಪಿಒಪಿ) ಗಣೇಶ ಮೂರ್ತಿ ಉತ್ಪಾದಿಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವಂತೆ ಸರಕಾರ ಸೂಚಿಸಿದ ಬೆನ್ನಲ್ಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧಿಕಾರಿಗಳು ರಾಜ್ಯದೆಲ್ಲೆಡೆ ಕಾರ್ಯ ಪ್ರವೃತ್ತರಾಗಿ ಹಲವೆಡೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ.

Advertisement

ಎಲ್ಲೆಲ್ಲಿ ದಾಳಿ?
ದೊಡ್ಡಬಳ್ಳಾಪುರ ರಸ್ತೆಯ ಮಾರಸಂದ್ರದಲ್ಲಿ ಕೊಲ್ಲಾಪುರದಿಂದ ತಂದು ಪೈಂಟ್‌ ಮಾಡಿ ಗಣೇಶ ಮೂರ್ತಿ ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಲಾಗಿದೆ. ಇಲ್ಲಿ ನೂರಾರು ಗಣೇಶ ಮೂರ್ತಿ ಜಪ್ತಿ ಮಾಡಲಾಗಿದೆ. ಕಾಮಾಕ್ಷಿಪಾಳ್ಯ, ಥಣಿಸಂದ್ರದ ಗೋದಾಮಿನ ಮೇಲೂ ದಾಳಿ ನಡೆಸಲಾಗಿದೆ. ಮೈಸೂರಿನಲ್ಲಿ 1 ಕಡೆ, ಕಲಬುರಗಿಯಲ್ಲಿ 2, ರಾಯಚೂರಿನಲ್ಲಿ 2 ಕಡೆ ದಾಳಿ ನಡೆಸಲಾಗಿದೆ. ಬೆಳಗಾವಿಯ ವಿವಿಧ ಕಡೆಗಳಲ್ಲಿ ಪಿಒಪಿ ಗಣೇಶ ಮೂರ್ತಿ ಜಪ್ತಿ ಮಾಡಿ 10 ಸಾವಿರ ದಂಡ ವಿಧಿಸಲಾಗಿದೆ.

ಉಡುಪಿ: ಶೇ.100ರಷ್ಟು ಪಿಒಪಿ ನಿಷೇಧ
ಉಡುಪಿ ಶೇ.100, ಮಂಗಳೂರು ಶೇ.90, ಶಿವಮೊಗ್ಗ ಶೇ.70ರಷ್ಟು ಪಿಒಪಿ ಮುಕ್ತ ಗಣೇಶ ಮೂರ್ತಿ ಬಳಸುತ್ತಿರುವುದು ಬಹಿರಂಗಗೊಂಡಿದೆ. ಕರಾವಳಿ ಭಾಗಗಳಲ್ಲಿ ಮಣ್ಣಿನ ಗಣೇಶ ಮೂರ್ತಿಗೇ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next