Advertisement
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ. 15ರಂದು ಬೆಳಗ್ಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು ಧ್ವಜಾಹೋಹಣ ಮಾಡಲಿದ್ಧಾರೆ. ಸ್ವಾತಂತ್ರ್ಯ ಸೇನಾನಿಗಳ ಭಾವಚಿತ್ರಗಳಿಗೆ ಪುಷ್ಪಾರ್ಚನೆ ನೆರವೇರಲಿದ್ದಾರೆ. ಜಿಲ್ಲೆ, ಮಂಡಲಗಳಲ್ಲಿ ಶಾಸಕರು, ಸಂಸದರು, ಪದಾಧಿಕಾರಿಗಳು ಪಾಲ್ಗೊಳ್ಳುವರು ಎಂದರು.
ಆ.14ರ ರಾತ್ರಿ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಖುಷಿ, ಸಂತಸದ ಜತೆಗೇ ಅಷ್ಟೇ ಪ್ರಮಾಣದಲ್ಲಿ ದುಃಖ ಆಗಿತ್ತು. ಭಾರತ ವಿಭಜನೆ ಮೂಲಕ ದೇಶ ಎರಡು ತುಂಡಾದ ಆ ದಿನವನ್ನು, ಭಾರತ ವಿಭಜನೆಯ ದುರಂತ ಕಥೆಯನ್ನು ತಿಳಿಸುವ ಉದ್ದೇಶದಿಂದ ಎಲ್ಲ ಜಿಲ್ಲೆ ಕೇಂದ್ರಗಳಲ್ಲಿ ವಿಭಜನೆಯ ದುರಂತ ಕಥೆ ಸಾರುವ ಪ್ರದರ್ಶಿನಿಯನ್ನು ಆಯೋಜಿಸಲಾಗಿದೆ. ಬೆಂಗಳೂರಿನ ಪಕ್ಷದ ಕಾರ್ಯಾಲಯದಲ್ಲಿ ಮಾಜಿ ಸಚಿವ ಆರ್.ಆಶೋಕ್ ಉದ್ಘಾಟಿಸುವರು. ಸಂಸದ ಪಿ.ಸಿ.ಮೋಹನ್, ಪದ್ಮಶ್ರೀ ಪುರಸ್ಕೃತ ಮಂಗಳೂರಿನ ಹಾಜಬ್ಬ ಅವರು ಭಾಗವಹಿಸುವರು. ಮನೆ ಮನೆಯಲ್ಲೂ ತ್ರಿವರ್ಣಧ್ವಜದ (ಹರ್ ಘರ್ ತಿರಂಗ) ಮೂಲಕ ದೇಶಭಕ್ತಿಯ ಜ್ವಾಲೆ ಮೂಡಿಸುವ ಕಾರ್ಯಕ್ರಮವನ್ನು ಬಿಜೆಪಿ ಯೋಜಿಸಿದೆ. ದೇಶ, ರಾಜ್ಯದಲ್ಲಿ ಲಕ್ಷಾಂತರ ಕಾರ್ಯಕರ್ತರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸಲಿ¨ªಾರೆ ಎಂದರು.
Related Articles
ಆ. 14ರ ಸಂಜೆ ಪಂಜಿನ ಮೌನ ಮೆರವಣಿಗೆ ನಡೆಸಲಾಗುವುದು. ವಿಭಜನೆಯ ಕಥನ ಕೇಳುವ ವ್ಯವಸ್ಥೆ, ಭಾಷಣ ಏರ್ಪಡಿಸಲಾಗಿದೆ. ನಾವು ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಸಂದರ್ಭದಲ್ಲಿದ್ದೇವೆ. 6 ಲಕ್ಷ ಪಂಚಾಯತ್‌ಗಳಿಂದ ಹಾಗೂ ಕಿತ್ತೂರು, ಮೈಸೂರು, ಬೆಂಗಳೂರು ಸೇರಿ 7,500 ಐತಿಹಾಸಿಕ ಸ್ಥಳಗಳಿಂದ ಮಣ್ಣು ಸಂಗ್ರಹಿಸಲಾಗುತ್ತದೆ. ಅದನ್ನು ಅಮೃತ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ದಿಲ್ಲಿ ಕರ್ತವ್ಯ ಪಥದ ವಾಟಿಕಾ ಪಾರ್ಕ್‌ನಲ್ಲಿ ಹಾಕಿ ಉದ್ಯಾನ ನಿರ್ಮಿಸಲಾಗುತ್ತದೆ. ಆ.30ರಂದು ಪ್ರಧಾನಿಯವರು ಈ ಕಾರ್ಯಕ್ರಮ ನೆರವೇರಿಸಲಿ¨ªಾರೆ ಎಂದು ವಿವರಿಸಿದರು.
Advertisement