Advertisement
ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಜತೆ ಮಾತನಾಡುವ ವೇಳೆ ಒಕ್ಕಲಿಗರು, ಪರಿಶಿಷ್ಟ ಜಾತಿಯ ವರ ಬಗ್ಗೆ ತುತ್ಛವಾಗಿ ಮಾತನಾಡಿದ್ದು, ಸಾಲದ್ದಕ್ಕೆ ಮಹಿಳೆ ಯರ ಕುರಿತೂ ಕೇವಲವಾಗಿ ಮಾತನಾಡಿರುವ ಆಡಿಯೋ ಬಹಿರಂಗವಾಗಿದ್ದು, ನಿಂದನೆಗೊಳಗಾದ ಚಲುವರಾಜು ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಲ್ಲದೆ ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮುನಿರತ್ನ ಬಳಸಿರುವ ಭಾಷೆ ಅತ್ಯಂತ ಕೀಳುಮಟ್ಟದ್ದಾಗಿದ್ದು, ಕೊಲೆ ಬೆದರಿಕೆ ಸಹ ಹಾಕಲಾ ಗಿದೆ. ಯಾವ ನಾಗರಿಕ ಸಮಾಜವೂ ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದಿರುವ ಕಾಂಗ್ರೆಸ್ ನಾಯಕರು, ಮುನಿರತ್ನ ಶಾಸಕತ್ವ ರದ್ದುಪಡಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಬಾಯ್ತೆ ಗೆದರೆ ಸಂಸ್ಕಾರ, ಸಂಸ್ಕೃತಿಯ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರೇ ಮೊದಲು ಗಬ್ಬೆದ್ದು ನಾರುತ್ತಿರುವ ನಿಮ್ಮ ಶಾಸಕ ಮುನಿರತ್ನ ಅವರ ಬಾಯಿಯನ್ನು ಶುದ್ಧ ಮಾಡಿ ಅನಂತರ ಊರಿಗೆ ಬುದ್ಧಿ ಹೇಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿಯವರ “ಹಿಂದೂ ನಾವೆಲ್ಲ ಒಂದು’ ಎಂಬ ಘೋಷವಾಕ್ಯ ಚುನಾವಣೆ ಕಾಲಕ್ಕಷ್ಟೇ ಸೀಮಿತ. ಚುನಾವಣೆ ಮುಗಿದರೆ ಈ ನಾಡಿನ ದಲಿತರು, ಶೋಷಿತರನ್ನು ಅವರು ಹಿಂದೂವಾಗಿ, ತಮ್ಮಲ್ಲಿ ಒಬ್ಬನಾಗಿ ಕಾಣರು. ಈ ಸಮುದಾಯಗಳ ಬಗ್ಗೆ ಬಿಜೆಪಿ ನಾಯಕರ ಮನಸ್ಸಿನಲ್ಲಿ ತುಂಬಿರುವ ದ್ವೇಷ, ಅಸೂಯೆ, ಅಸಹನೆಗೆ ಮುನಿರತ್ನ ಬಾಯಿಂದ ಉದುರಿದ ಅಣಿಮುತ್ತುಗಳು ಸಾಕ್ಷಿ. ವೈರಲ್ ಆಗಿರುವ ಆಡಿಯೋದಲ್ಲಿ ಮುನಿರತ್ನ ಅವರು ದಲಿತ ಮತ್ತು ಒಕ್ಕಲಿಗ ಸಮುದಾಯವನ್ನು ಅತ್ಯಂತ ಅಶ್ಲೀಲವಾಗಿ, ಮನಸೋ ಇಚ್ಛೆ ನಿಂದಿಸಿದ್ದಾರೆ, ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರೆ, ಕೊನೆಗೆ ಹಣ ನೀಡದಿದ್ದರೆ ಕೊಲೆ ಬೆದರಿಕೆ ಹಾಕಿದ್ದಾರೆ. ಇವೆಲ್ಲವೂ ಅತ್ಯಂತ ಗಂಭೀರ ಸ್ವರೂಪದ ಅಪರಾಧಗಳಾಗಿವೆ ಎಂದಿದ್ದಾರೆ.
Related Articles
ಬೆಂಗಳೂರು: ನನ್ನನ್ನು ಜೈಲಿಗೆ ಕಳುಹಿಸಲು ಇಬ್ಬರು ವ್ಯಕ್ತಿಗಳು ಜಂಟಿ ಆಪರೇಷನ್ ಮಾಡಿದ್ದರು ಎಂದು ಪರೋಕ್ಷವಾಗಿ ಮಾಜಿ ಸಂಸದ ಡಿ.ಕೆ. ಸುರೇಶ್ ಮತ್ತು ಕಾಂಗ್ರೆಸ್ ನಾಯಕಿ ಕುಸುಮಾ ಹನುಮಂತರಾಯಪ್ಪ ಅವರ ವಿರುದ್ಧ ಶಾಸಕ ಮುನಿರತ್ನ ವಾಗ್ಧಾಳಿ ನಡೆಸಿದ್ದಾರೆ.
Advertisement
ನಿಂದನೆ ಪ್ರಕರಣ ಸಂಬಂಧ ಪೊಲೀಸರು ಬಂಧಿಸುವುದಕ್ಕೂ ಮೊದಲೇ ಅವರು ಅಜ್ಞಾತ ಸ್ಥಳದಿಂದ ವೀಡಿಯೋ ಮಾಡಿ ಬಿಡುಗಡೆ ಮಾಡಿ ತಮ್ಮ ಸಂಚಿನ ಕುರಿತ ಅನೇಕ ವಿಚಾರಗಳನ್ನು ಹೇಳಿದ್ದಾರೆ. ಸಂಸತ್ ಚುನಾವಣೆಯಲ್ಲಿ ಸೋತ ವ್ಯಕ್ತಿ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಸೋತವರು ಸೇರಿ ಜಂಟಿ ಆಪರೇಷನ್ ಮಾಡಿ ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದ್ದಾರೆ.
15 ವರ್ಷಗಳಿಂದ ನನ್ನ ಮೇಲೆ ಯಾವುದೇ ಗುತ್ತಿಗೆದಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ದೂರು ನೀಡಿಲ್ಲ. ಲೋಕಸಭಾ ಚುನಾವಣೆ ಫಲಿತಾಂಶದ ಅನಂತರ ನನ್ನ ವಿರುದ್ಧ ಸಂಚು ರೂಪಿಸಲಾಗಿದೆ. ದೂರುದಾರ ವ್ಯಕ್ತಿ 7-8 ವರ್ಷಗಳಿಂದ ನಮ್ಮ ಜತೆ ಕೆಲಸ ಮಾಡುತ್ತಿದ್ದ. ಯಾವತ್ತೂ ತೊಂದರೆ ಕೊಡದವರು ಇವತ್ತು ಕೊಟ್ಟಾರೇ ಎಂದು ಪ್ರಶ್ನಿಸಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಲೇ ಇದೆ ಎಂದಿದ್ದಾರೆ. ಇದು ಜಾಯಿಂಟ್ ಆಪರೇಷನ್ ಎಂದು ಮುನಿರತ್ನ ವೀಡಿಯೋದಲ್ಲಿ ಆರೋಪಿಸಿದ್ದಾರೆ.
ಲೋಕಸಭಾ ಫಲಿತಾಂಶದ ಬಳಿಕ ನನಗೆ ಕೆಟ್ಟ ದಿನಗಳು ಇವೆ ಅಂತ ಗೊತ್ತಿತ್ತು. ಏನಾದರೂ ಮಾಡಿ ಮುನಿರತ್ನನನ್ನು ಜೈಲಿಗೆ ಕಳುಹಿಸಬೇಕು ಎಂದು ಶಪಥ ಮಾಡಿದ್ದರು. ಎಂಎಲ್‌ಎ ಚುನಾವಣೆಯಲ್ಲಿ ನಾನು ಗೆದ್ದಾಗಲೇ ಸೂಚನೆ ಸಿಕ್ಕಿತ್ತು. ವಿಧಾನಸಭೆ ಚುನಾವಣೆಯಲ್ಲೂ ಸೋತ ಆ ಮಹಿಳೆ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಸೇರಿ ಕಾರ್ಯಾಚರಣೆ ಮಾಡಿದ್ದಾರೆ ಎಂದಿದ್ದಾರೆ.
ಶಾಸಕತ್ವ ಅನರ್ಹ ಮಾಡಿ: ಡಿಕೆಸು ಆಗ್ರಹಬೆಂಗಳೂರು: ಒಕ್ಕಲಿಗ ಹಾಗೂ ದಲಿತ ಜಾತಿಗಳ ನಿಂದನೆ ಮೂಲಕ ಜಾತಿ ಸಂಘರ್ಷಕ್ಕೆ ಕಾರಣರಾದ, ಮಹಿಳಾ ಕುಲಕ್ಕೆ ಅವಮಾನ ಮಾಡುವ ಮೂಲಕ ಸಮಾಜ ಸ್ವಾಸ್ಥ್ಯ ಹಾಳು ಮಾಡಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು. ಒಂದೆಡೆ ಜಾತಿ ನಿಂದನೆ, ಮತ್ತೂಂದೆಡೆ ಮಹಿಳೆಯರಿಗೆ ಅವಮಾನ, ಒಕ್ಕಲಿಗ-ದಲಿತರಿಗೆ ಅಪಮಾನ, ಜಾತಿ ಸಂಘರ್ಷಕ್ಕೆ ಪ್ರಚೋದನೆ ಕೊಟ್ಟಿರುವ ಮುನಿರತ್ನ ವಿರುದ್ಧ ಲಂಚದ ಆರೋಪದ ಜತೆಗೆ ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪಗಳೂ ಇವೆ. ಇಷ್ಟಾದರೂ ಬಿಜೆಪಿ ನಾಯಕರು ಸುಮ್ಮನಿ ದ್ದಾರೆಂದರೆ ಎಲ್ಲವನ್ನೂ ಸಹಿಸಿಕೊಂಡಿದ್ದಾರೆ ಎಂದೇ ಅರ್ಥ. ಬಿಜೆಪಿಯವರು ಸಾರ್ವಜನಿಕವಾಗಿ ಬೇಷರತ್ ಕ್ಷಮೆ ಯಾಚಿಸಬೇಕು ಎಂದರು. ಮುನಿರತ್ನ ಬಳಸಿರುವ ಭಾಷೆ ಖಂಡನೀಯ. ಈ ಪದಗಳು ಅವರದ್ದೇ ಆಗಿದ್ದರೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ರಾದ ಆರ್. ಅಶೋಕ, ಛಲವಾದಿ ನಾರಾಯಣ ಸ್ವಾಮಿ ಏನು ಹೇಳುತ್ತಾರೆ? ಮನುವಾದದ ಮನಸ್ಸುಗಳ ವಿರುದ್ಧ ಕ್ರಮ ಆಗಬೇಕಲ್ಲವೇ? – ಡಾ| ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವ ಮುನಿರತ್ನ ಬಂಧನವು ದ್ವೇಷದ ರಾಜಕಾರಣದ ಅತಿರೇಕ. ಇದು ಗಾಂಧಿ ನಗರದ ಸೃಷ್ಟಿ ಎಂದು ಮುನಿರತ್ನ ಹೇಳಿದ್ದಾರೆ. ಆದರೂ ಪೊಲೀಸರು ಆತುರದಲ್ಲಿ ಬಂಧಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ಸಾಬೀತಾಗಿದೆಯೇ? – ಆರ್. ಅಶೋಕ್,ವಿಧಾನಸಭೆಯ ವಿಪಕ್ಷ ನಾಯಕ ಬಿಜೆಪಿ ಶಾಸಕ ಮುನಿರತ್ನ ಅವರು ಜಾತಿ ನಿಂದನೆ ಮಾಡಿದ್ದಾರೆ ಎನ್ನುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಬೆಳಗ್ಗೆಯಿಂದ ನಾನು ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರು, ಸಾರ್ವಜನಿಕರ ಅಹವಾಲು ಆಲಿಸುತ್ತಿದ್ದೇನೆ. ಹೀಗಾಗಿ ನನಗೆ ಏನೂ ಗೊತ್ತಿಲ್ಲ, ಯಾವುದೇ ಮಾಹಿತಿ ಇಲ್ಲ.- ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ದಲಿತರ ಜಾತಿ ನಿಂದನೆಯಂತಹ ವಿಷಯಗಳಲ್ಲಿ ಯಾರನ್ನು ಸಮರ್ಥನೆ ಮಾಡಿಕೊಳ್ಳುವ ಪ್ರಶ್ನೆಯಿಲ್ಲ. ಆಡಿಯೋ ನೈಜತೆ ಕುರಿತು ತನಿಖೆಯಾಗಲಿ. ಅದು ಸತ್ಯವಾಗಿದ್ದಲ್ಲಿ ಅವರ ವಿರುದ್ಧ ಪಕ್ಷವೂ ಉಚ್ಚಾಟನೆ ಅಥವಾ ಶಿಸ್ತು ಕ್ರಮ ಕ್ರಮಕೈಗೊಳ್ಳಲಿದೆ.- ಛಲವಾದಿ ನಾರಾಯಣಸ್ವಾಮಿ, ಮೇಲ್ಮನೆ ವಿಪಕ್ಷ ನಾಯಕ ಯಾರೂ ಕೂಡ ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವುದು ಸರಿಯಲ್ಲ. ಮುನಿರತ್ನ ಆಡಿರುವ ಮಾತುಗಳ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡುತ್ತೇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಮಹಿಳೆಯರು, ಜಾತಿಯ ವಿಚಾರವಾಗಿ ಈ ರೀತಿ ಕೀಳಾಗಿ ಮಾತನಾಡಬಾರದು.
– ಸೌಮ್ಯಾ ರೆಡ್ಡಿ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ