Advertisement
ನವಿಲಗದ್ದೆ ಗುಡ್ಡವು ಹುಬ್ಬಳ್ಳಿಯಿಂದ 40 ಕಿ.ಮೀ. ಮತ್ತು ಮುಂಡಗೋಡದಿಂದ 10 ಕಿ.ಮೀ. ಅಂತರದಲ್ಲಿದೆ. ದೇಶದ ಕೆಲವು ರಾಜ್ಯಗಳಲ್ಲಿ ಖಗೋಳ ವೀಕ್ಷಣೆಗೆ ವಾರಕ್ಕೊಮ್ಮೆ ಸಾರ್ವಜನಿಕವಾಗಿ ಅವಕಾಶವಿರುವ ತಾಣಗಳು ಬೆರಳೆಣಿಕೆಯಷ್ಟು ಸಿಗುತ್ತವೆ ಹಾಗೂ ವೈಯಕ್ತಿಕ ಸಂಸ್ಥೆಗಳ ಸಂಶೋಧನ ಕೇಂದ್ರದಲ್ಲಿ ಇವೆ. ಆದರೆ ಪ್ರತಿದಿನ ಸಾರ್ವಜನಿಕರಿಗೆ ಖಗೋಳ ವೀಕ್ಷಣೆ ಸ್ಥಳಗಳು ಯಾವುದು ಇರಲಿಲ್ಲ. ಹಳ್ಳಿ ಹುಡುಗನ ಸತತ ಪ್ರಯತ್ನದಿಂದ ಕರ್ನಾಟಕದ ಏಕೈಕ ಖಗೋಳ ವೀಕ್ಷಣಾ ತಾಣವಾಗಿದ್ದು, ಇದುವರೆಗೂ ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಇಲ್ಲಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ.
Related Articles
Advertisement
ಅರಣ್ಯ ಮತ್ತು ಸ್ವಚ್ಛ ಪರಿಸರವುಳ್ಳ ನವಿಲಗದ್ದೆಯು ಬಾರ್ಟಲ್ -2 ವಲಯದಲ್ಲಿ ಬರುತ್ತದೆ. ರಾತ್ರಿ ವೇಳೆ ಆಕಾಶ ವೀಕ್ಷಣೆಗೆ ಪ್ರಶಸ್ತ ಸ್ಥಳ. ದೂರದರ್ಶಕ ಯಂತ್ರಗಳ ಮೂಲಕ ತಾರಾ ಮಂಡಲ, ಗ್ರಹಗಳು, ಚಂದ್ರ, ಕ್ಷುದ್ರಗ್ರಹಗಳು, ಧೂಮಕೇತು, ನಿಹಾರಿಕೆಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಯುವ ವಿಜ್ಞಾನಿಗಳ ಸಂಶೋಧನೆಗೆ ಸೂಕ್ತ ಸ್ಥಳವಾಗಿದೆ.
ಇಲ್ಲಿ ನಕ್ಷತ್ರಪುಂಜಗಳು, ಚಂದ್ರನ ಹಂತಗಳು, ಅರೋರಾಗಳು, ಗ್ಯಾಲಕ್ಸಿ, ನೆಬ್ಯುಲಾ, ಗ್ರಹಗಳು ಮತ್ತು ಉಪಗ್ರಹಗಳನ್ನು ನೋಡುವದರ ಜತೆಗೆ ಬ್ರಹ್ಮಾಂಡದ ಆಚೆಗೆ ಏನಾಗುತ್ತದೆ ಎನ್ನುವುದನ್ನು ತಿಳಿದುಕೊಂಡು ಯುವ ವಿಜ್ಞಾನಿಗಳ ಸಂಶೋಧನೆಗೆ ಸಹಕಾರಿಯಾಗಿದೆ. ರಾಜ್ಯದಲ್ಲಿ ಖಗೋಳ ಪ್ರವಾಸೋದ್ಯಮ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನನ್ನ ಕನಸು. ಆಸ್ಟ್ರೋ ಫಾರ್ಮ್ ನಲ್ಲಿ ಇನ್ನಷ್ಟು ಉನ್ನತ ಮಟ್ಟದ ಟೆಲಿಸ್ಕೋಪ್ ಮತ್ತು ಮೌಂಟ್ಸ್‌ಗಳನ್ನು ಹಂತ ಹಂತವಾಗಿ ಅಳವಡಿಸುವ ಉದ್ದೇಶವಿದೆ ಎಂದು ಆಸ್ಟ್ರೋ ಫಾರ್ಮ್ ನಿರ್ಮಿಸಿದ ಯುವಕ ನಿರಂಜನ ಗೌಡ ಖಾನಗೌಡ್ರ ಹೇಳುತ್ತಾರೆ.
-ಶಿವಾನಂದ ಎನ್. ದೊಡ್ಡಮನಿ
ಕರ್ನಾಟಕ ಜಾನಪದ ವಿಶ್ವವಿದ್ಯಾಲಯ