ನವದೆಹಲಿ : ಯಾವುದೇ ರಾಜ್ಯದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಇದ್ದಲ್ಲಿ ಆಯಾಯ ರಾಜ್ಯಗಳು ನೇರ ಹೊಣೆಯಾಗಲಿದೆ. ಲಸಿಕೆಯ ವಿತರಣೆಯನ್ನು ಸೂಕ್ತ ಕ್ರಮದಲ್ಲಿ ಯೋಜಿಸಬೇಕೆಂದು ಕೋವಿಡ್ 19 ಲಸಿಕೆಗಳ ಕುರಿತಾಗಿ ಕೆಲವು ರಾಜ್ಯಗಳ ನಾಯಕರು ನೀಡಿರುವ ಬೇಜವಾಬ್ದಾರಿ ಹೇಳಿಕೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಗುಡುಗಿದ್ದಾರೆ.
ಇದನ್ನೂ ಓದಿ : ಲಸಿಕೀಕರಣ ಮುಗಿಯುತ್ತಿದ್ದಂತೆ ಕಾಲೇಜು ಆರಂಭ ಕುರಿತು ನಿರ್ಧಾರ: ಡಿಸಿಎಂ ಅಶ್ವಥ್ ನಾರಾಯಣ
ಈ ಕುರಿತಾಗಿ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ಟ್ವೀಟ್ ಮಾಡಿದ ಹರ್ಷವರ್ಧನ್, ಲಸಿಕೆ ಪೂರೈಕೆಯ ವಿಚಾರದಲ್ಲಿ ಯಾವುದೇ ರಾಜ್ಯದಲ್ಲಿ ಸಮಸ್ಯೆಗಳು ಕಂಡು ಬಂದಿದ್ದರೇ, ಅದು ಆಯಾಯ ರಾಜ್ಯಗಳ ನಿರ್ವಹಣೆಯ ದೋಷ. ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಸುಸೂತ್ರವಾಗಿ ಯೋಜಿಸುವ ಹಾಗೂ ವಿತರಣೆ ಮಾಡುವ ಜವಾಬ್ದಾರಿ ಆಯಾಯ ರಾಜ್ಯಗಳಿಗೆ ಇದೆ ಎಂದು ಅವರು ಹೇಳಿದ್ದಾರೆ.
ಇನ್ನು, ಲಸಿಕೆಯ ಪೂರೈಕೆಯ ಬಗ್ಗೆ ಬೇಜಾಬ್ದಾರಿಯ ಹೇಳಿಕೆ ನಡಿರುವ ಕೆಲವು ರಾಜ್ಯಗಳ ನಾಯಕರಿಗೆ ಇಂತಹ ಸಂದರ್ಭದಲ್ಲಿ ರಾಜಕೀಯ ಪ್ರವೃತ್ತಿಯಿಂದ ಹೊರಬರಬೇಕೆಂದು ವಿನಂತಿಸಿಕೊಂಡಿದ್ದಲ್ಲದೇ, ‘ಈ ವಿಷಯಗಳ ಬಗ್ಗೆ ಗೊತ್ತಾಗಿಯೂ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದಾದರೆ ಅತ್ಯಂತ ದುರದೃಷ್ಟಕರ. ಅವರಿಗೆ ಈ ಕುರಿತಾಗಿ ಅರಿವಿಲ್ಲದಿದ್ದರೆ ಆಡಳಿದತ್ತ ಗಮನ ಹರಿಸಬೇಕು. ಜನರಲ್ಲಿ ಆತಂಕ ಸೃಷ್ಟಿ ಮಾಡುವ ಬದಲಾಗಿ ಯೋಜನೆಯ ಬಗ್ಗೆ ಹೆಚ್ಚು ಗಮನ ವಹಿಸುವಂತೆ ಕೋರುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : 7 ವರ್ಷಗಳಲ್ಲಿ ದೇಶದಾದ್ಯಂತ 15 ಏಮ್ಸ್ ಆಸ್ಪತ್ರೆಗಳ ಸ್ಥಾಪನೆ : ಪ್ರಧಾನಿ ನರೇಂದ್ರ ಮೋದಿ