ಬಹುದೇ ಎಂಬ ಕುತೂಹಲ ಈಗ ಸೃಷ್ಟಿಯಾಗಿದೆ.
Advertisement
ರವಿವಾರ ನಿಗದಿಯಾಗಿದ್ದ ಚುನಾವಣ ಸಮಿತಿ ಸಭೆ ಸೋಮವಾರಕ್ಕೆ ಮುಂದೂ ಡಿಕೆಯಾಗಿತ್ತು. ರಾಜ್ಯದ ಕ್ಷೇತ್ರಗಳ ಬಗ್ಗೆ ರಾಜ್ಯದ ಹಿರಿಯ ಮುಖಂಡರ ಜತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿ ಮಾಹಿತಿ ಸಂಗ್ರಹ ನಡೆಸಿದ್ದಾರೆ. ಆದರೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.
Related Articles
Advertisement
ದ.ಕ. ಸಂಸದ ನಳಿನ್ ಕುಮಾರ್ ಕಟೀಲು, ಉಡುಪಿ- ಚಿಕ್ಕಮಗಳೂರಿನ ಶೋಭಾ, ಬೀದರ್‌ನ ಖೂಬಾ, ಮೈಸೂರಿನ ಪ್ರತಾಪ್ ಸಿಂಹ, ಬೆಳಗಾವಿಯ ಮಂಗಲಾ, ಬೆಂಗಳೂರು ಉತ್ತರದ ಡಿ.ವಿ. ಸದಾನಂದ ಗೌಡ, ವಿಜಯಪುರದಿಂದ ರಮೇಶ್ ಜಿಗಜಿಣಗಿ, ಕೊಪ್ಪಳದಿಂದ ಕರಡಿ ಸಂಗಣ್ಣ, ಉತ್ತರ ಕನ್ನಡದಿಂದ ಅನಂತ್ ಹೆಗಡೆ ಸ್ಪರ್ಧೆ ಬಗ್ಗೆ ಚರ್ಚೆಗಳಿದ್ದು ಇದೆಲ್ಲದಕ್ಕೂ ಸೋಮವಾರ ತೆರೆ ಬೀಳುವ ನಿರೀಕ್ಷೆಯಿದೆ.
ಬಿಜೆಪಿಯ ಭದ್ರಕೋಟೆಯಾಗಿರುವ ಮಂಗಳೂರು, ಉಡುಪಿ- ಚಿಕ್ಕಮಗಳೂರು, ಉತ್ತರ ಕನ್ನಡ, ಬೆಳಗಾವಿ ಕ್ಷೇತ್ರಗಳ ಟಿಕೆಟ್ ಹಂಚಿಕೆ ಈ ಬಾರಿ ಬಿಜೆಪಿ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ಇದರ ಜತೆಗೆ ಹಾವೇರಿ, ಬೀದರ್, ತುಮಕೂರು, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಪ್ಪಳ ಕ್ಷೇತ್ರಗಳ ಕಗ್ಗಂಟನ್ನು ಬಿಡಿಸುವ ಕೆಲಸ ನಡೆಯಬೇಕಿದೆ.
ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಸೋಮವಾರ ಹತ್ತರಿಂದ ಹದಿನೈದು ಕ್ಷೇತ್ರದ ಟಿಕೆಟ್‌ಗಳು ಅಂತಿಮಗೊಳ್ಳುವ ಸಂಭವವಿದೆ. ರಾಜ್ಯದ ಬಿಜೆಪಿ ನಾಯಕರು ನೀಡಿರುವ ಪಟ್ಟಿಯ ಬಗ್ಗೆ ಈಗಾಗಲೇ ಬಿಜೆಪಿ ವರಿಷ್ಠರು ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆದರೆ ಕೇಂದ್ರದ ನಾಯಕರು ತಮ್ಮ ಬಳಿಯಿರುವ ಪಟ್ಟಿಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈಗ ಸೋಮವಾರ ನಡೆಯುವ ಸಭೆಯಲ್ಲಿ ಎರಡು ಪಟ್ಟಿಗಳನ್ನು ಪರಿಶಿಲೀಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.
ಹೆಚ್ಚಿನ ಆಯ್ಕೆಗಳಿಲ್ಲದ ಕ್ಷೇತ್ರಗಳು ಮತ್ತು ಎರಡು ಪಟ್ಟಿಯಲ್ಲಿಯೂ ಹೆಚ್ಚು ಧನಾತ್ಮಕ ಅಭಿಪ್ರಾಯ ಹೊಂದಿರುವ ಅಭ್ಯರ್ಥಿಗಳು ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆಯುವ ಸಂಭವವಿದೆ.