Advertisement
ರಾಜ್ಯಾದಲ್ಲಿ 18ವರ್ಷ ಮೇಲ್ಪಟ್ಟವರಿಗೆ 4.89ಕೋಟಿ ಡೋಸ್ ಲಸಿಕೆ ವಿತರಣೆ ಗುರಿಯನ್ನು ಹೊಂದಿದ್ದು, ಅದರಲ್ಲಿ 4.94ಕೋಟಿ ಡೋಸ್ ಲಸಿಕೆ ವಿತರಣೆ ಮೂಲಕ ಗುರಿ ಮೀರಿದ ಸಾಧನೆಯನ್ನು ಮಾಡಿದೆ. ಉಳಿದಂತೆ ಎರಡನೇ ಡೋಸ್ ವಿತರಣೆಯಲ್ಲಿ ಇದುವರೆಗೆ 4.37ಕೋಟಿ ಮಂದಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ.
ರಾಜ್ಯದಲ್ಲಿ ಮೊದಲ ಡೋಸ್ ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಬಳ್ಳಾರಿ, ಚಾಮರಾಜನಗರ, ಚಿತ್ರದುರ್ಗ, ಬೀದರ್, ಹಾವೇರಿ, ಕೊಪ್ಪಳ, ಯಾದಗಿರಿ, ದಾವಣಗೆರೆ, ತುಮಕೂರು, ಧಾರವಾಡ, ಬೆಳಗಾವಿ, ರಾಮನಗರ, ಬಾಗಲಕೋಟೆ, ಮೈಸೂರು, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಮಂಡ್ಯ, ಗದಗ, ಕೊಡಗು, ಬೆಂಗಳೂರು ನಗರ ಹಾಗೂ ವಿಜಯ ಪುರ ಜಿಲ್ಲೆಗಳು ಶೇ.100 ಗುರಿ ಮೀರಿ ಸಾಧನೆ ಮಾಡಿವೆ. ಉಳಿದಂತೆ ಉ.ಕ., ಉಡುಪಿ, ಚಿಕ್ಕಮಗಳೂರು, ದ.ಕ., ರಾಯಚೂರು, ಕಲಬುರಗಿ ಜಿಲ್ಲೆಯಲ್ಲಿ ತಲಾ ಶೇ.99ರಷ್ಟು ಸಾಧನೆ ಮಾಡಿದೆ. ಎರಡು ಜಿಲ್ಲೆ ಶೇ.100
ಎರಡನೇ ಡೋಸ್ ವಿತರಣೆಯಲ್ಲಿ ಬೆಂಗಳೂರು ಗ್ರಾಮಾಂತರ, ವಿಜಯಪುರ ಜಿಲ್ಲೆಗಳು ಶೇ.100ರಷ್ಟು ಗುರಿ ಸಾಧನೆ ಮಾಡಿವೆ. ಉಳಿದಂತೆ ಕೊಡಗು, ಗದಗ, ಮಂಡ್ಯ, ಚಿಕ್ಕಬಳ್ಳಾಪುರ, ಹಾಸ,, ಕೋಲಾರ, ಮೈಸೂರು, ಬಾಗಲಕೋಟೆ, ರಾಮನಗರ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳು ನೀಡಲಾದ ಗುರಿಯಲ್ಲಿ ಶೇ.90ಕ್ಕಿಂತ ಅಧಿಕ ಮಂದಿಗೆ ಲಸಿಕೆ ನೀಡಿದೆ. ಉಳಿದ ಜಿಲ್ಲೆಗಳು 16 ಜಿಲ್ಲೆಗಳು ನೀಡಲಾದ ಗುರಿಯಲ್ಲಿ ಶೇ.80ಕ್ಕಿಂತ ಅಧಿಕ ಮಂದಿಗೆ ಲಸಿಕೆ ನೀಡಿದೆ.