Advertisement

ಕಲ್ಲಡ್ಕ ವಿರುದ್ಧ ಹೇಳಿಕೆ: ಸಚಿವ ರೈ ಪ್ರತಿಕೃತಿ ದಹನ

03:26 PM Jun 20, 2017 | Team Udayavani |

ಕಲಬುರಗಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಪ್ರಭಾಕರ ಭಟ್‌ ಕಲ್ಲಡ್ಕರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಬಂಧಿಸಲು ಜಿಲ್ಲಾ ಎಸ್‌ಪಿಗೆ ಸೂಚಿಸಿದ್ದಾರೆನ್ನಲಾದ ಅರಣ್ಯ ಸಚಿವ ಖಾತೆ ರಮಾನಾಥ ರೈ ಅವರ ಪ್ರತಿಕೃತಿ ದಹಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 

Advertisement

ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಸಚಿವ ರಮಾನಾಥ ರೈ ಅವರು ರಾಜಕೀಯ ದುರುದ್ದೇಶಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್‌ ಅವರ ವಿರುದ್ಧ ಪೊಲೀಸ್‌ ಇಲಾಖೆ ಬಳಸಿ ಬಂಧಿಸುವಂತೆ ಎಸ್‌ ಪಿಗೆ ಒತ್ತಡ ಹೇರಿದ್ದು ಖಂಡನೀಯ ಎಂದರು. 

ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅರಣ್ಯ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದರು. 

ಸಂಚಾಲಕ ಸಂತೋಷ ಬೆನಕನಳ್ಳಿ, ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜನಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್‌. ಪಾಟೀಲ ನರಿಬೋಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಿರಣ ಈಳಗಾಂವಕರ, ಮಹೇಶ ಚವ್ಹಾಣ, ಮನೋಹರ ಗೌಳಿ,

-ಗುರುರಾಜ ಸಾಗರೆ, ವಿಷ್ಣು ಮಡಿವಾಳ, ಸಂತೋಷ ಮದಾನೆ, ಶಿವರಾಜ ಸಂಗೋಳಗಿ, ಶ್ರೀಧರ ಸಲಗರ, ಚಿದಾನಂದ ಹಿರೇಮಠ, ಶ್ರೀಶೈಲ ಮೂಲಗೆ, ಹುಲಿಕಂಠ ಹೇರೂರ, ಗುರುರಾಜ ಟೆಂಗಳಿ, ಅಮರೇಶ ಬಿರಾದಾರ, ಶಾಂತಕುಮಾರ ಬಿರಾದಾರ ಹಾಗೂ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next