Advertisement
ಹೌದು! ರಾಷ್ಟ್ರೀಯ ಜಲಮಾರ್ಗ ವಿಧೇಯಕ-2016ರಲ್ಲಿ ಗುರುತಿಸಲಾಗಿದ್ದ ರಾಜ್ಯದ 11 ನದಿಗಳ ಪೈಕಿ ವಿಧೇಯಕದ ಕ್ಲಸ್ಟರ್ 6ರಲ್ಲಿರುವ ಗುರುಪುರ, ಕಬಿನಿ, ಕಾಳಿ, ನೇತ್ರಾವತಿ, ಮತ್ತು ಶರಾವತಿಗಳ ಜೊತೆಗೆ ಇತರ ರಾಜ್ಯಗಳ ನದಿಗಳಲ್ಲಿ ನೌಕಾ ಚಟುವಟಿಕೆಗಳು ಹಾಗೂ ಒಳನಾಡು ಜಲಸಾರಿಗೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಗುರುಗಾಂವ್‌ನ “ಟ್ರ್ಯಾಕ್ಟೇಬಲ್ ಇಂಜಿನಿಯರಿಂಗ್ ಪ್ರೈ.ಲಿ. ಸಂಸ್ಥೆಯು ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರಕ್ಕೆ ಸಲ್ಲಿಸಿದ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕಿದೆ.
Related Articles
Advertisement
ರಾಜ್ಯದ ಜಲಮಾರ್ಗಗಳ ವಿಸ್ತೀರ್ಣರಾಜ್ಯದ ಭೀಮಾ, ಘಟಪ್ರಭಾ, ಕಬಿನಿ, ಮಲಪ್ರಭಾ, ನೇತ್ರಾವತಿ, ಶರಾವತಿ ನದಿಗಳು ಒಟ್ಟು 11 ನದಿಗಳನ್ನು ರಾಷ್ಟ್ರೀಯ ಜಲಮಾರ್ಗ ವಿಧೇಯಕದಲ್ಲಿ ಸೇರಿಸಲಾಗಿದೆ. ಅದರ ಒಟ್ಟು ವಿಸ್ತೀರ್ಣ ಅಂದಾಜು 3 ಸಾವಿರ ಕಿ.ಮೀ ಆಗಬಹುದು. ರಾಷ್ಟ್ರೀಯ ಜಲಮಾರ್ಗ 4, 21 ಹಾಗೂ 104 ನೆರೆಯ ಆಂಧ್ರ, ತೆಲಂಗಾಣ, ಕೇರಳ, ಮಹಾರಾಷ್ಟ್ರಕ್ಕೆ ಸಂಪರ್ಕ ಹೊಂದಿವೆ. ಉಳಿದಂತೆ, ಅನುಮೋದನೆ ಸಿಕ್ಕಿರುವ ಗುರುಪುರ, ಕಬಿನಿ, ಕಾಳಿ, ನೇತ್ರಾವತಿ, ಮತ್ತು ಶರಾವತಿ ನದಿಗಳು ರಾಜ್ಯದ ವ್ಯಾಪ್ತಿ ಮಾತ್ರ ಹೊಂದಿದ್ದು, ಇದರ ಒಟ್ಟು ವಿಸ್ತೀರ್ಣ ಅಂದಾಜು 200 ಕಿ.ಮೀ ಆಗಲಿದೆ ಎಂದು ಮೂಲಗಳು ತಿಳಿಸಿವೆ. ರಾಜ್ಯದ ರಾಷ್ಟ್ರೀಯ ಜಲಮಾರ್ಗಗಳು
*ರಾಷ್ಟ್ರೀಯ ಜಲಮಾರ್ಗ 4-ಗೋದಾವರಿ, ಕೃಷ್ಣಾನದಿ-2,890 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 21-ಭೀಮಾ ನದಿ-139 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 41-ಘಟಪ್ರಭಾ ನದಿ- 112 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 43-ಗುರುಪುರ ನದಿ-10 ಕಿಮೀ
*ರಾಷ್ಟ್ರೀಯ ಜಲಮಾರ್ಗ 51-ಕಬಿನಿ ನದಿ-23 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 52-ಕಾಳಿ ನದಿ-54 ಕಿ.ಮೀ
*ರಾಷ್ಟ್ರೀಯ ಜಲಮಾರ್ಗಮ 67-ಮಲಪ್ರಭಾ ನದಿ-94 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 74-ನೇತ್ರಾವತಿ ನದಿ-78 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 76-ಪಂಚಗಂಗೋಳಿ ನದಿ-23 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 90-ಶರಾವತಿ ನದಿ-29 ಕಿ.ಮೀ
*ರಾಷ್ಟ್ರೀಯ ಜಲಮಾರ್ಗ 104-ತುಂಗಾಭದ್ರನದಿ-230 ಕಿ.ಮೀ ಏನಿದು ರಾಷ್ಟ್ರೀಯ ಜಲಮಾರ್ಗ
ಒಳನಾಡು ಜಲಸಾರಿಗೆ ಮೂಲಕ ನದಿಗಳಲ್ಲಿ ನೌಕಾ ಸೇವೆ ಮೂಲಕ ಸಂಚಾರ ಮತ್ತು ಸಾಗಾಟ ಉತ್ತೇಜಿಸಲು ರಾಷ್ಟ್ರೀಯ ಜಲಮಾರ್ಗ ಕಲ್ಪನೆ ಹುಟ್ಟಿಕೊಂಡಿದ್ದು. ಈವರೆಗೆ ನಮ್ಮ ದೇಶದಲ್ಲಿ ಇದ್ದದ್ದು ಕೇವಲ 5 ರಾಷ್ಟ್ರೀಯ ಜಲಮಾರ್ಗಗಳು. ಮೊಟ್ಟ ಮೊದಲ ರಾಷ್ಟ್ರೀಯ ಜಲಮಾರ್ಗ ಎಂದು ಘೋಷಿಸಿದ್ದು 1986ರಲ್ಲಿ ಗಂಗಾ-ಭಗೀರಥಿ-ಹೊಗ್ಲಿ ನದಿ ಮೂಲಕ ಅಹ್ಮದಾಬಾದನಿಂದ ಹಾಲ್ದಿಯಾಗೆ ಸಂಪರ್ಕ ಕಲ್ಪಿಸುವ 1,620 ಕಿ.ಮೀ ವಿಸ್ತೀರ್ಣ ಹೊಂದಿದೆ. ನಂತರ 1988, 93 ಹಾಗೂ 2008ರಲ್ಲಿ ಉಳಿದ ನಾಲ್ಕು ರಾಷ್ಟ್ರೀಯ ಜಲಮಾರ್ಗಗಳ ಘೋಷಣೆ ಆಯಿತು. ಆದರೆ, ಮೊದಲ ಎರಡು ಜಲಮಾರ್ಗಗಳು ಒಂದಿಷ್ಟು ಅಭಿವೃದ್ದಿಗೊಂಡಿದ್ದು ಬಿಟ್ಟರೆ, ಉಳಿದ ಮೂರರಲ್ಲಿ ಯಾವ ಪ್ರಗತಿಯೂ ಈವರೆಗೆ ಆಗಿಲ್ಲ. 2016ರಲ್ಲಿ ರಾಷ್ಟ್ರೀಯ ಜಲಮಾರ್ಗ ವಿಧೇಯಕದಲ್ಲಿ 106 ನದಿಗಳನ್ನು ಕೇಂದ್ರ ಸರ್ಕಾರ ಸೇರಿಸಿತು. ಆಗ ದೇಶದ ಒಟ್ಟು ರಾಷ್ಟ್ರೀಯ ಜಲಮಾರ್ಗಗಳ ಸಂಖ್ಯೆ 111 ಆಯಿತು. ಅದರಲ್ಲಿ ಕರ್ನಾಟಕದ 11 ರಾಷ್ಟ್ರೀಯ ಜಲಮಾರ್ಗಗಳಿವೆ. ಆ ಪೈಕಿ ಏಳು ಜಲಮಾರ್ಗಗಳ ಡಿಪಿಆರ್‌ಗೆ ಕೇಂದ್ರದ ಅನುಮೋದನೆ ಸಿಕ್ಕಿದೆ. ರಾಜ್ಯದಲ್ಲಿ ರಾಷ್ಟ್ರೀಯ ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಭಾರತೀಯ ಒಳನಾಡು ಜಲಮಾರ್ಗ ಪ್ರಾಧಿಕಾರ ಟೆಂಡರ್ ಕರೆಯಬೇಕಿದ್ದು, ಅದಾದ ಬಳಿಕ ಮುಂದಿನ ಪ್ರಕ್ರಿಯೆಗಳು ಪ್ರಾರಂಭಗೊಳ್ಳುತ್ತವೆ.
- ಎಂ. ಲಕ್ಷ್ಮೀನಾರಾಯಣ, ಪ್ರಧಾನ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ. – ರಫೀಕ್ ಅಹ್ಮದ್