Advertisement

ರಾಜ್ಯ ವಿವಿ ಮತ್ತು ಇತರೆ ಕಾಯ್ದೆಗಳ ತಿದ್ದುಪಡಿ ಸುಗ್ರೀವಾಜ್ಞೆಗೆ ಅಂಕಿತ

05:47 AM Jun 20, 2020 | Lakshmi GovindaRaj |

ಬೆಂಗಳೂರು: ಇತ್ತೀಚೆಗಷ್ಟೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿದ್ದ ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಇತರೆ ಕಾನೂನು(ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ವಿ.ಆರ್‌.ವಾಲಾ ಸಮ್ಮಿತಿ ಸೂಚಿಸಿದ್ದಾರೆ. ಮೈಸೂರಿನಲ್ಲಿರುವ ರಾಜ್ಯ  ಮುಕ್ತ ವಿಶ್ವವಿದ್ಯಾಲಯವೇ ದೂರ ಶಿಕ್ಷಣದ ಕೋರ್ಸ್‌ ನೀಡಬೇಕು. ಬೇರೆ ಯಾವ ವಿಶ್ವವಿದ್ಯಾಲಯವೂ ದೂರ ಶಿಕ್ಷಣದ ಕೋರ್ಸ್‌ ನೀಡು ವಂತಿಲ್ಲ.

Advertisement

ಬೆಂಗಳೂರಿನಲ್ಲಿರುವ ಗೃಹ ವಿಜ್ಞಾನ ಕಾಲೇಜಿಗೆ ಸ್ವಯತ್ತ ಸ್ಥಾನಮಾನ ನೀಡಿ, ನೃಪತುಂಗ  ವಿಶ್ವವಿದ್ಯಾಲಯ ರೂಪಿಸುವ ಬಗ್ಗೆಯೂ ಈ ಕಾಯ್ದೆಯಲ್ಲಿದೆ. ಅಲ್ಲೆದೆ, ರಾಜ್ಯದಲ್ಲಿ ಹೊಸ ವಿವಿಗಳು ರಚನೆ ಸಂದರ್ಭದಲ್ಲಿ ವಿಶೇಷಾಧಿಕಾರಿ ನೇಮಕ, ಮೊದಲ ಕುಲಪತಿ ನೇಮಕದ ಅಧಿಕಾರ ರಾಜ್ಯ ಸರ್ಕಾರಕ್ಕೆ ಇರಲಿದೆ. ಮಹಾರಾಣಿ  ಕ್ಲಸ್ಟರ್‌ ವಿವಿ ಮತ್ತು ಮಂಡ್ಯ ವಿವಿಗೆ ಮೊದಲ ಕುಲಪತಿಯನ್ನು ಸರ್ಕಾರವೇ ನೇಮಿಸಲಿದೆ.

ಹಾಗೆಯೇ ಐಎಎಸ್‌ ಅಥವಾ ರಾಜ್ಯ ಸರ್ಕಾರದ ಗ್ರೂಪ್‌ ಎ ಹುದ್ದೆಯ ಹಿರಿಯ ಅಧಿಕಾರಿಯನ್ನು ಕುಲ ಸಚಿವರನ್ನಾಗಿ ನೇಮಿಸಲಿದೆ. ವಿಶ್ವವಿದ್ಯಾಲಯಕ್ಕೆ ಉಪ ಪ್ರಧಾನ ಲೆಕ್ಕಾಧಿಕಾರಿ ದರ್ಜೆ  ಅಧಿಕಾರಿಯನ್ನು ನೇಮಿಸಬಹುದು ಅಥವಾ ವಿವಿ ಕುಲಾಧಿಪತಿಗಳು ತತ್ಸಮಾನ ಅರ್ಹತೆ ಹಣಕಾಸು ಅಧಿಕಾರಿಯನ್ನು ನೇಮಿಸಬಹುದು.

ಹಾಗೆಯೇ ಸಿಂಡಿಕೇಟ್‌ ಸದಸ್ಯರ ನೇಮಕ,  ಡೀನ್‌ಗಳ ಅವಧಿ ಸಹಿತವಾಗಿ ಹಲವು ಅಂಶಗಳನ್ನು ಈ ಕಾಯ್ದೆಯಲ್ಲಿ ಉಲ್ಲೇಖೀಸಲಾಗಿದೆ. ಬೆಂಗಳೂರು ಕೇಂದ್ರ ವಿವಿ ಹೆಸರನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯ ಎಂದು ಬದಲಿಸಲಾಗಿದೆ. ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ  ದೊರೆತಿರುವುದರಿಂದ ತಿದ್ದುಪಡಿ ಕಾಯ್ದೆಯಲ್ಲಿ ಸರ್ಕಾರ ಪ್ರತಿಪಾದಿಸಿರುವ ಎಲ್ಲಾ ಅಂಶಗಳು ಅನುಷ್ಠಾನಕ್ಕೆ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next