Advertisement

2365.99 ಕೋಟಿ ರೂ. ಬಂಡವಾಳ ಆಕರ್ಷಿಸಿದ ರಾಜ್ಯ; 10904 ಉದ್ಯೋಗ ಸೃಷ್ಟಿ

04:14 PM Feb 02, 2022 | Team Udayavani |

ಬೆಂಗಳೂರು: ರಾಜ್ಯಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ನಿಟ್ಟಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ರಾಜ್ಯ ಮಟ್ಟದ ಏಕಗವಾಕ್ಷಿ ಸಮಿತಿಯಡಿ ಒಟ್ಟು 2367.99 ಕೋಟಿ ರೂ. ಮೊತ್ತದ 88 ಯೋಜನೆಗಳಿಗೆ ಅನುಮೋದನೆ ನೀಡಿದೆ.

Advertisement

ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್ ನಿರಾಣಿ ಅವರ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.

ಒಟ್ಟು 88 ಯೋಜನೆಗಳಿಂದ 2367.99 ಕೋಟಿ ರೂ. ಬಂಡವಾಳ ರಾಜ್ಯದಲ್ಲಿ ಹೂಡಿಕೆಯಾಲಿದ್ದು, ಇದರಿಂದ 10904 ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ. 50 ಕೋಟಿ ರೂಪಾಯಿಗೂ ಹೆಚ್ಚು ಬಂಡವಾಳ ಹೂಡಿಕೆಯ 7 ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಸಮಿತಿ ಅನುಮೋದನೆ ನೀಡಿದ್ದು, ಒಟ್ಟು 799.1 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದ್ದು, ಅಂದಾಜು 3237 ಜನರಿಗೆ ಉದ್ಯೋಗ ಲಭಿಸಲಿವೆ.

ಇದನ್ನೂ ಓದಿ:ಗೋವಾ ಚುನಾವಣೆ: ಹೈವೋಲ್ಟೇಜ್ ಕ್ಷೇತ್ರವಾದ ಮಾಂದ್ರೆ

15 ಕೋಟಿರೂ. ಯಿಂದ 50 ಕೋಟಿ ರೂ. ಒಳಗಿನ ಬಂಡವಾಳ ಹೂಡಿಕೆಯ 78 ಯೋಜನೆಗಳಿಗೆ ಅನುಮೋದಿಸಿದ್ದು, ಒಟ್ಟು 1431.74 ಕೋಟಿ ರೂ. ಹೂಡಿಕೆ ಮಾಡಲಿದ್ದು, ಸುಮಾರು 7667 ಉದ್ಯೋಗಗಳು ಸೃಜನೆಯಾಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೆ ಏಕಗವಾಕ್ಷಿ ಸಮಿತಿಯು 137.15 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ.

Advertisement

ಅನುಮೋದನೆ ನೀಡಿರುವ ಯೋಜನೆಗಳು

ಮೆ.ಗುರುದತ್ತ ಇಂಟಿಗ್ರೇಟೆಡ್ ಟೆಕ್ಸ್ ಟೈಲ್ ಪಾರ್ಕ್ ಲಿ-₹ 357 ಕೋಟಿ

ಮೆ. ಸ್ಪಾನ್ ಸುಲ್ಸ್ ಫಾರ್ಮುಲೇಷನ್ -₹9 6 ಕೋಟಿ

ಮೆ.ರಿನಾಕ್ ಇಂಡಿಯಾ ಲಿಮಿಟೆಡ್- ₹ 80 ಕೋಟಿ

ಮೆ. ಸನ್ವಿಕ್ ಸ್ಟೀಲ್ ಲಿಮಿಟೆಡ್-₹64 ಕೋಟಿ

ಮೆ. ಹೆಚ್ ಅಂಡ್ ವಿ ಅಡ್ವಾನ್ಸಡ್ ಮೆಟೀರಿಯಲ್ ಇಂಡಿಯಾ ಪ್ರೆ,ಲಿಮಿಟೆಡ್-₹59.31 ಕೋಟಿ

ಮೆ.ಎ .ಒನ್ ಟೆಕ್ಸ್ ಟೆಕ್ ಪ್ರೆ.ಲಿಮಿಟೆಡ್ -₹ 46.50 ಕೋಟಿ

ಮೆ.ಟೆಕ್ಸ್ ಪೋರ್ಟ್ ಇಂಡಸ್ಟ್ರೀಸ್ ಪ್ರೆ.ಲಿಮಿಟೆಡ್- ₹ 44.80 ಕೋಟಿ

ಮೆ. ಕೇನಾಸ್ಸ್ ಟೆಕ್ನಾಲಜಿ ಇಂಡಿಯಾ ಪ್ರೆ.ಲಿಮಿಟೆಡ್- ₹ 35 ಕೋಟಿ.

Advertisement

Udayavani is now on Telegram. Click here to join our channel and stay updated with the latest news.

Next