ಬೆಂಗಳೂರು: ರಾಜ್ಯ ಈಜು ಸಂಸ್ಥೆ ಆಶ್ರಯದಲ್ಲಿ ಉದ್ಯಾನನಗರಿಯಲ್ಲಿ ನಡೆಯುತ್ತಿರುವ ರಾಜ್ಯ ಹಿರಿಯರ ಈಜು ಚಾಂಪಿಯನ್ ಶಿಪ್‌ನಲ್ಲಿ 2ನೇ ದಿನ ಶ್ರೀಹರಿ ನಟರಾಜನ್ ರಾಷ್ಟ್ರೀಯ ಕೂಟ ದಾಖಲೆ ನಿರ್ಮಿಸಿದ್ದಾರೆ.
ಗುರುವಾರ ರಾಮಕೃಷ್ಣ ಹೆಗ್ಡೆ ಸ್ವೀಮ್ಮಿಂಗ್ ಪೂಲ್‌ನಲ್ಲಿ ನಡೆದ ಈಜು ಕೂಟದ 100 ಮೀ. ಬ್ರೆಸ್ಟ್‌ಸ್ಟ್ರೋಕ್‌ನ ಹೀಟ್ ಎರಡರಲ್ಲಿ ಗ್ಲೋಬಲ್ ಸ್ವಿಮ್ಮಿಂಗ್ ಸೆಂಟರ್‌ನ ಶ್ರೀಹರಿ ನಟರಾಜ್ 1 ನಿಮಿಷ 57.75 ಸೆಕೆಂಡ್ಸ್ ಗಳಲ್ಲಿ ಗುರಿ ತಲುಪಿದರು. 2014ರಲ್ಲಿ ತಮಿಳುನಾಡಿನ ಪಿ.ಎಸ್.ಮಧು 1 ನಿಮಿಷ
57.85 ಸಕೆಂಡ್ಸ್‌ಗಳಲ್ಲಿ ಬರೆದಿದ್ದ ದಾಖಲೆ ಅಳಿಸಿ ಹಾಕಿದರು. ಇದು ಶ್ರೀಹರಿ ರಾಜ್ಯ ದಾಖಲೆಯೂ ಆಯಿತು ಎನ್ನುವುದು ವಿಶೇಷ.
ಇನ್ನು 50 ಮೀ. ಬ್ರೆಸ್ಟ್‌ಸ್ಟ್ರೋಕ್‌ನ ಹೀಟ್ಸ್ ನಲ್ಲಿ ವೈಷ್ಣವ್ ಹೆಗ್ಡೆ 29.61 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದರೆ ಮಹಿಳಾ ವಿಭಾಗದ 50 ಮೀ. ಬ್ರೆಸ್ಟ್‌ಸ್ಟ್ರೋಕ್ ನಲ್ಲಿ ಬಸವನ ಗುಡಿ ಈಜು ಕೇಂದ್ರದ ಸಲೋನಿ ದಲಾಲ್ 35.77 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಕೂಟ ದಾಖಲೆ ನಿರ್ಮಿಸಿದರು. ಹಾಗೂ 200 ಮೀ. ಬ್ರೆಸ್ಟ್‌ಸ್ಟ್ರೋಕ್ ನಲ್ಲೂ ಸಲೋನಿ ದಲಾಲ್ 2 ನಿಮಿಷ 47.02 ಸೆಕೆಂಡ್ಸ್‌ಗಳಲ್ಲಿ ಗುರಿ ತಲುಪಿ ಕೂಟ ದಾಖಲೆಯೊಂದಿಗೆ ಮಿಂಚಿದರು.