Advertisement

Minister Chaluvaraya Swamy: ರಾಜ್ಯ ಬೀಜ ನಿಗಮ ಷೇರುದಾರರಿಗೆ ಶೇ. 30 ಡಿವಿಡೆಂಡ್‌

11:36 PM Oct 25, 2024 | Team Udayavani |

ಬೆಂಗಳೂರು: ರಾಜ್ಯ ಬೀಜ ನಿಗಮದಿಂದ ಕಲಬುರಗಿಯಲ್ಲಿ ಗೋದಾಮು ನಿರ್ಮಾಣಕ್ಕೆ ಅನುಮೋದನೆ ಜತೆಗೆ ಷೇರುದಾರರಿಗೆ ಶೇ. 30 ಡಿವಿಡೆಂಡ್‌ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

Advertisement

ಹೆಬ್ಟಾಳದ ಪಶು ಭವನ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಜ್ಯ ಬೀಜ ನಿಗ ಮ ದ 51ನೇ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಲೆಕ್ಕಪರಿಶೋಧನೆ ಮುಗಿಯದ ಕಾರಣ ಶೇ. 10ರಷ್ಟು ಲಾಭಾಂಶ ನೀಡಲಾಗಿತ್ತು. ಈಗ ಅಂತಿಮವಾಗಿದ್ದು 2022-23ನೇ ಸಾಲಿನಲ್ಲಿ 67 ಲಕ್ಷ ಹಾಗೂ 2023-24ನೇ ಸಾಲಿಗೆ 71 ಲಕ್ಷ ರೂ. ಡಿವಿಡೆಂಡ್‌ ನೀಡಲಾಗುವುದು. ಇದರಿಂದಾಗಿ 8,360 ಷೇರುದಾರರಿಗೆ 138 ಲಕ್ಷ ರೂ. ದೊರೆಯಲಿದೆ ಎಂದರು.

ಕೃಷಿ ಇಲಾಖೆ ಆಡಳಿತಾತ್ಮಕ ಸುಧಾರಣೆಗಾಗಿ 650 ಅಧಿಕಾರಿ ಸಿಬಂದಿಗೆ ಭಡ್ತಿ ನೀಡಿದ್ದು, ಹೊಸದಾಗಿ 950 ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿಗಳ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಸಚಿವ ಚಲುವರಾಯ ಸ್ವಾಮಿ ಹೇಳಿದರು. ರಾಜ್ಯ ಕೃಷಿ ಇಲಾಖೆ ಕೇಂದ್ರದಿಂದ ಅತಿ ಹೆಚ್ಚು ಅನುದಾನ ಪಡೆದು ರೈತರಿಗೆ ವರ್ಗಾವಣೆ ಮಾಡಿದೆ. ರೈತರು ಸಾಂಪ್ರದಾಯಿಕ ಕೃಷಿ ಜತೆಗೆ ಸಮಗ್ರ ಕೃಷಿ ಬಗ್ಗೆಯೂ ಗಮನ ಹರಿಸಬೇಕು. ಈ ಮೂಲಕ ಸರ್ಕಾರ ಸವಲತ್ತು ಸದ್ಬಳಕೆ ಮಾಡಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next