ಮಡಿಕೇರಿ: ಕೊಡವ ಬುಡ ಕಟ್ಟು ಕುಲವು ಕೊಡಗಿನ ಭೌಗೋಳಿಕ ಸರಹದ್ದಿಗೆ ಸೀಮಿತವಾಗಿದ್ದು, ಈ ಪ್ರದೇಶದ ಭೂ-ರಾಜಕೀಯ ಅಸ್ತಿತ್ವವು ಕೊಡವರ ಸಾಂಪ್ರದಾಯಿಕ ಆವಾಸ ಸ್ಥಾನವನ್ನು ಸ್ಥಿರೀಕರಿಸುತ್ತದೆ. ಕೊಡವರು ರಾಜ್ಯಾಂಗದ ಶೆಡ್ನೂಲ್ ಪಟ್ಟಿಯೊಳಗೆ ಭದ್ರತೆ ಪಡೆಯುವ ಎಲ್ಲಾ ಆರ್ಹತೆ ಹೊಂದಿದ್ದು, ಕೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಭದ್ರತೆಗೆ ಅವರ ಪ್ರಾಚೀನ ಜನಪದೀಯ ಅಂಶಗಳೇ ಪ್ರಧಾನ ಮಾನದಂಡವಾಗಿದೆ ಎಂದು ಖ್ಯಾತ ರಾಜಕೀಯ ವಿಜ್ಞಾನಿ, ಪ್ಯಾರಿಸ್ ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಮತ್ತು ಟುನಿಶಿಯ ದೇಶದ ನೂತನ ಸಂವಿಧಾನ ರಚನಾ ಕರಡು ಸಮಿತಿಯ ಸದಸ್ಯ, ವಿದ್ವಾಂಸ ಡಾ|| ಬಲವೀರ್ ಅರೋರ ಪ್ರತಿಪಾದಿಸಿದರು.
ವಿಶ್ವ ಜನಾಂಗೀಯ ತಾರತಮ್ಯ ನಿವಾರಣ ದಿನಾಚರಣೆ ಅಂಗವಾಗಿ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಸಂಘಟನೆ ವತಿಯಿಂದ ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್ ರೆಸಾರ್ಟ್ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಚಾರಗೋಷ್ಠಿಯಲ್ಲಿ ಅವರು ಮಾತನಾ ಡಿದರು ಕೊಡವರ ಅನನ್ಯ ಸಂಸ್ಕೃತಿ, ಬೇಟೆ, ಯುದ್ಧ, ಆಹಾರ ಪದ್ಧತಿ, ಆರಾಧನಾ ಪದ್ಧತಿ, ಬುಡಕಟ್ಟು ಜೀವನ ವಿಧಾನವನ್ನು ಹೊಂದಿದೆ ಎಂದು ಆರೋರ ಬಲವಾಗಿ ಪ್ರತಿಪಾದಿಸಿದರು.
ಕೊಡವ ಸಮುದಾಯಕ್ಕೆ ಬುಡಕಟ್ಟು ಸ್ಥಾನಮಾನ, ಕೊಡವರ ಭೂ- ರಾಜ ಕೀಯ ಹಕ್ಕೊತ್ತಾಯವನ್ನು ಸ್ಥಿರೀಕರಿಸಲು ಕೊಡವ ಲ್ಯಾಂಡ್ ಅಟೋನಮಿ ಮತ್ತು ಕೊಡವ ಹೆಗ್ಗುರುತಿನ ಪ್ರತಿಬಿಂಬವಾದ ಕೊಡವ ತಕ್ಕನ್ನು ಸಂವಿಧಾನದ 8ನೇ ಶೆಡ್ನೂಲ್‌ಗೆ ಸೇರಿಸಲೇಬೇಕು ಎಂದರು. ಡಾ|| ಅರೋರ ನೀಡಿದರು.
ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅಧ್ಯಕ್ಷತೆವಹಿಸಿದ್ದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮತ್ತು ವಕೀಲ ಎಂ.ಟಿ.ನಾಣಯ್ಯ, ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಬೊಟ್ಟೋಳಂಡ ಕಾಶಿ ಅಚ್ಚಯ್ಯ, ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಕೊಡಗು ದೇವಕಾಡ್ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ|| ನಂಜಪ್ಪ ಭಾಗವಹಿಸಿದ್ದರು.
ಮಾಹಿತಿ ಸಂಗ್ರಹ
ಬುಡಕಟ್ಟು ಕುಲವನ್ನು ಸಂವಿಧಾನದ ಶೆಡ್ನೂಲ್ ಪಟ್ಟಿಗೆ ಸೇರಿಸಬೇಕೆಂಬ ಸಿ.ಎನ್.ಸಿಯ ದೀರ್ಘಕಾಲದ ಹಕ್ಕೊತ್ತಾಯವನ್ನು ಮನ್ನಿಸಿದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮೈಸೂರು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಕೊಡವರ ಸಮಗ್ರ ಕುಲಶಾಸ್ತ್ರ ಅಧ್ಯಯನದ ಜವಾಬ್ದಾರಿ ವಹಿಸಿದ್ದು, ಈ ಸಂಬಂಧ ಆ ಸಂಸ್ಥೆಯ ವತಿಯಿಂದ ಕೊಡವರ ಕುಲಶಾಸ್ತ್ರ ಅಧ್ಯಯನ ತಂಡ ಕಳೆದ 75 ದಿನಗಳಿಂದ ಕೊಡಗಿನ ಪ್ರತಿ ನಾಡುಗಳ, ಗ್ರಾಮಗಳ ಕೊಡವರನ್ನು ಖುದ್ದು ಭೇಟಿಯಾಗಿ ಮಾಹಿತಿ ಕಲೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ೊಡವ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತರಿಯ ವಿಚಾರವಾಗಿ ವಿಶೇಷ ವಿಚಾರಗೋಷ್ಠಿ ಆಯೋಜಿಸಲಾಗಿದೆ ಎಂದು ನಾಚಪ್ಪ ತಿಳಿಸಿದರು.