Advertisement

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

12:04 AM Nov 25, 2024 | Team Udayavani |

ಬೆಂಗಳೂರು: ರಾಜ್ಯದ 3ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಯಲ್ಲಿ ಬಿಜೆಪಿ ಸೋತಿರುವುದಕ್ಕೆ ಕೇವಲ ರಾಜ್ಯಾಧ್ಯಕ್ಷರೊಬ್ಬರೇ ಹೊಣೆಯಲ್ಲ. ಪಕ್ಷವೇ ಅದರ ಜವಾಬ್ದಾರಿ ಹೊರಲಿದೆ. ಪಕ್ಷವು ಇದನ್ನು ಸವಾಲಾಗಿ ತೆಗೆದುಕೊಳ್ಳ ಲಿದ್ದು, ಸೋಲಿನ ಅವಲೋಕನ ಮಾಡಿ ಬೂತ್‌ ಮಟ್ಟದಿಂದ ಪಕ್ಷ ಸಂಘಟಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದೇವೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಸುದ್ದಿಗಾರರಿಗೆ ಹೇಳಿದರು.

Advertisement

ಅಧಿವೇಶನದಲ್ಲಿ ಕಟ್ಟಿ ಹಾಕುತ್ತೇವೆ
ಆಳಿತಾರೂಢ ಕಾಂಗ್ರೆಸ್‌ ಪಕ್ಷ ಉಪ ಚುನಾವಣೆಯಲ್ಲಿ ಗೆದ್ದಿರುವುದು ದೊಡ್ಡ ವಿಷಯವೇನಲ್ಲ. ಏಕೆಂದರೆ ಅವರು ವಾಮಮಾರ್ಗದ ಮೂಲಕ ಗೆದ್ದಿದ್ದಾರೆ. ಈ ವಿಷಯಗಳನ್ನು ಅಧಿವೇಶನದಲ್ಲಿ ಪ್ರಸ್ತಾವಿಸಿ ಸರಕಾರವನ್ನು ಕಟ್ಟಿ ಹಾಕುತ್ತೇವೆ ಎಂದು ತಿಳಿಸಿದರು.

ಪ್ರತೀ ಕ್ಷೇತ್ರಕ್ಕೆ 100 ಕೋ.ರೂ. ಖರ್ಚು
ಪಂಚಾಯತ್‌ ಮಟ್ಟದಿಂದ ಒಬ್ಬೊಬ್ಬ ಶಾಸಕರನ್ನು ನೇಮಿಸಿದ್ದ ಸರಕಾರ, ಅಷ್ಟೂ ಸಚಿವರನ್ನು ಉಪ ಚುನಾವಣೆಗೆ ಬಳಸಿದೆ. ಸಾಲದ್ದಕ್ಕೆ ನಾನು 5 ವರ್ಷ ಸಿಎಂ ಆಗಿ ಇರಬೇಕೋ ಬೇಡವೋ ಎಂದು ಬೆದರಿಕೆ ಹಾಕಿ ವಾಮಮಾರ್ಗದ ಮೂಲಕ ಉಪಚುನಾವಣೆ ಗೆದ್ದಿದೆ. ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 100 ಕೋಟಿ ರೂ. ಹರಿಸಿದ್ದಾರೆ ಎಂದು ರವಿಕುಮಾರ್‌ ಅವರು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next