Advertisement

State Politics: ಬಿಜೆಪಿ,ಕಾಂಗ್ರೆಸ್ ಪಕ್ಷದಲ್ಲಿ ನಡೆದ ಭ್ರಷ್ಟಾಚಾರಗಳು ಹೊರಬರಲಿ:ಈಶ್ವರಪ್ಪ

04:10 PM Jul 24, 2024 | Team Udayavani |

ಶಿವಮೊಗ್ಗ: ಆಶ್ರಯ ಮನೆಗಳನ್ನು ಕಟ್ಟಿ ಹಾಗೆಯೇ ಬಿಡಲಾಗಿದೆ, ಕಟ್ಟಡ ಕಾರ್ಮಿಕರಿಗೆ ಬರಬೇಕಾದ ಸೌಲಭ್ಯಗಳು ಬಂದಿಲ್ಲ ಈ ಕುರಿತು 27ರಂದು ಬೆಂಗಳೂರಿನಲ್ಲಿ ಮಂತ್ರಿಗಳನ್ನು ಭೇಟಿ ಮಾಡುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದರು.

Advertisement

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯಕೀಯ ಧನಸಹಾಯ, ಮರಣ ಧನ ಸಹಾಯ 2 ವರ್ಷದಿಂದ ಬಂದಿಲ್ಲ. ಸಂತೋಷ್ ಲಾಡ್ ಜೊತೆ ಮಾತಾಡಿದ್ದೇನೆ, ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದು ಹೇಳಿದರು.

ಪ್ರತಿದಿನ ವಿಧಾನ ಸಭೆಯಲ್ಲಿ ಭ್ರಷ್ಟಾಚಾರದ ಚರ್ಚೆಯಾಗುತ್ತಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣದಲ್ಲಿ ಸಿಎಂ ಭಾಗಿ ಆಗಿದ್ದಾರೆ ಎನ್ನಲಾಗುತ್ತಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿ ನಡೆದ ಭ್ರಷ್ಟಾಚಾರ ಹೊರಬರಲಿ, ಜೊತೆಗೆ ಪ್ರಕರಣವನ್ನು ಸಿಬಿಐಗೆ ಕೊಡಲಿ ಎಂದರು.

ಹಿಂದುಳಿದವರಿಗೆ ತಲುಪಬೇಕಾದ ಹಣದಲ್ಲಿ ಭ್ರಷ್ಟಾಚಾರ ಆಗಿದೆ. ವಾಲ್ಮೀಕಿ ಹಗರಣ- ನಮ್ಮ ರಾಜ್ಯಕ್ಕೆ ಇದೊಂದು ಕಪ್ಪು ಚುಕ್ಕೆಯಾಗಿದೆ. ಮುಡಾ ಹಗರಣದಲ್ಲಿ ಸಿಎಂ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಬಿಜೆಪಿ ಆಡಳಿತದಲ್ಲಿ ಹಗರಣ ಆಗಿದ್ದರೆ ತನಿಖೆಯನ್ನು ಸಿಬಿಐಗೆ ನೀಡಲಿ ಎಂದ ಅವರು ಭೋವಿ ಅಭಿವೃದ್ಧಿ ನಿಗಮದಲ್ಲೂ ಭ್ರಷ್ಟಾಚಾರ ಆಗಿದೆ ಎನ್ನಲಾಗಿದ್ದು, ಎರಡು ಪಕ್ಷದಲ್ಲಿ ನಡೆದಿರುವ ಎಲ್ಲಾ ಹಗರಣವನ್ನು ಸಿಬಿಐಗೆ ನೀಡಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next