Advertisement

ರವಿ ಪೂಜಾರಿ ಮೊದಲು ರಾಜ್ಯ ಪೊಲೀಸ್‌ ವಶಕ್ಕೆ?

12:39 AM Feb 09, 2019 | Team Udayavani |

ಮಂಗಳೂರು: ಸೆನಗಲ್‌ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿಯನ್ನು ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳಲು ಬೇಕಾದ ಕಾನೂನು ಪ್ರಕ್ರಿಯೆಗಳು ತ್ವರಿತವಾಗಿ ಸಾಗಿವೆ. ಆತನ ವಿರುದ್ಧ ಕರಾವಳಿ ಸಹಿತ ಕರ್ನಾಟಕದಲ್ಲೇ ಅತ್ಯಧಿಕ ಪ್ರಕರಣಗಳು ದಾಖಲಾಗಿರು ವುದರಿಂದ ಮೊದಲು ರಾಜ್ಯದ ಪೊಲೀಸರು ವಿಚಾರಣೆಗೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ವಿಶ್ವಾಸಾರ್ಹ ಮೂಲಗಳು ಉದಯವಾಣಿಗೆ ತಿಳಿಸಿವೆ.

Advertisement

ಉನ್ನತ ಮೂಲಗಳ ಪ್ರಕಾರ, ರವಿ ಪೂಜಾರಿ ನಾನಾ ರೀತಿಯ ನಾಟಕವಾಡಿ ಅಲ್ಲಿಂದ ಹೇಗಾದರೂ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ. ನಾನು ರವಿ ಪೂಜಾರಿ ಅಲ್ಲ; ನನ್ನ ಹೆಸರು ಆ್ಯಂಟನಿ ಫೆರ್ನಾಂಡಿಸ್‌ ಆಗಿದ್ದು, ಹಲವು ವರ್ಷಗಳಿಂದ ಇಲ್ಲಿಯೇ ಉದ್ದಿಮೆ ನಡೆಸುತ್ತಿದ್ದೇನೆ. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ’ ಎಂದು ಅಲ್ಲಿ ನ್ಯಾಯಾಲಯವನ್ನು ನಂಬಿಸಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಬೆರಳಚ್ಚು, ಪೂರಕ ದಾಖಲೆಗಳನ್ನು ಈಗಾಗಲೇ ಸೆನಗಲ್‌ ಪೊಲೀಸರಿಗೆ ಕಳುಹಿಸಿ ಕೊಡಲಾಗಿದ್ದು, ಅವು ತಾಳೆ ಯಾಗಿರು ವುದರಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next