Advertisement
ಹುಮನಾಬಾದ್ ತಾಲೂಕಿನ ಚಿನಕೇರಾ ಕ್ರಾಸ್ ಬಳಿ ಶನಿವಾರ ಆಯೋಜಿಸಿದ್ದ ಬಿಜೆಪಿಯ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಡಬಲ್ ಎಂಜಿನ್ ಆಡಳಿತದಿಂದ ಪ್ರಗತಿಯ ವೇಗ ಹೆಚ್ಚುತ್ತದೆ. ಬಿಜೆಪಿ ಸರಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದ್ದು, ಇದು ನಿಲ್ಲಬಾರದು. ಅದಕ್ಕಾಗಿ ಕರುನಾಡಿನ ಜನ ಬಿಜೆಪಿಗೆ ಪೂರ್ಣ ಬಹುಮತದ ಅ ಧಿಕಾರ ನೀಡಬೇಕು ಎಂದರು.
Related Articles
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಭಗವಂತ ಖೂಬ, ರಾಜ್ಯ ಸಚಿವ ಪ್ರಭು ಚೌವ್ಹಾಣ್, ವಿಧಾನಪರಿಷತ್ ಸದಸ್ಯ ರಘುನಾಥ ರಾವ್ ಮಲ್ಕಾಪುರೆ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ರವಿಕುಮಾರ್, ಪಕ್ಷದ ಅಭ್ಯರ್ಥಿಗಳಾದ ಶರಣು ಸಲಗರ, ಸಿದ್ದು ಪಾಟೀಲ್, ಈಶ್ವರ ಸಿಂಗ್ ಠಾಕೂರ್, ಡಾ| ಶೈಲೇಂದ್ರ ಬೆಲ್ದಾಳೆ ಮತ್ತು ಪ್ರಕಾಶ ಖಂಡ್ರೆ ಭಾಗವಹಿಸಿದ್ದರು.
Advertisement
ಶಿವಾಜಿ ಪ್ರತಿಮೆ ವಿವಾದ ಪ್ರಸ್ತಾವಿಸಿದ ಮೋದಿಕುಡುಚಿ: ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ರಾಜಹಂಸಗಡ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ವಿವಾದ ಈಗ ಪ್ರಧಾನಿ ನರೇಂದ್ರ ಮೋದಿ ಅವರಿಗೂ ತಲುಪಿದ್ದು, ಕುಡಚಿಯಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಮೋದಿ ಈ ವಿಷಯವನ್ನು ಪ್ರಸ್ತಾವಿಸಿದರು. ರಾಜಹಂಸಗಡದಲ್ಲಿ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣಕ್ಕೆ ನಮಗೆ ಅವಕಾಶ ಸಿಕ್ಕಿದ್ದು ಹೆಮ್ಮೆಯ ವಿಷಯ ಎಂದು ಮೋದಿ ಹೇಳಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಟಾಳ್ಕರ್ ಅವರು ಪ್ರತಿಷ್ಠೆಯ ವಿಷಯವಾಗಿ ತೆಗೆದುಕೊಂಡು ಎರಡೆರಡು ಬಾರಿ ಉದ್ಘಾಟಿಸಿದ್ದ ಈ ಪ್ರತಿಮೆಯ ವಿಷಯವನ್ನು ಮೋದಿ ಚುನಾವಣ ಪ್ರಚಾರದಲ್ಲಿ ಬಳಸಿಕೊಂಡರು. ಸಮಾಜ ವಿಭಜನೆ-ತುಷ್ಟೀಕರಣ
ದಶಕಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಕೇವಲ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದಾಳುವ ಕೆಲಸ ಮಾಡಿದ್ದು, ಆಡಳಿತದ ಹೆಸರಿನಲ್ಲಿ ತುಷ್ಟೀಕರಣ ಮಾಡುತ್ತಾ ಬಂದಿದೆ. ಇದಕ್ಕೆ ದಶಕಗಳಿಂದ ಕಲಾ ಸೇವೆ ಮಾಡುತ್ತಿದ್ದ ಬೀದರ್‌ನ ಬಿದ್ರಿ ಕಲಾವಿದ ರಶೀದ್ ಅಹ್ಮದ್ ಖಾದ್ರಿ ಉದಾಹರಣೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.ಬಿಜೆಪಿ ಸರಕಾರ ಇತ್ತೀಚೆಗೆ ಅವರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿದೆ. ಆದರೆ ಕಾಂಗ್ರೆಸ್ ಸರಕಾರ ಅವರಿಗೆ ನಿರಾಶೆ ಮಾಡುತ್ತ ಬಂದಿತ್ತು. ಬೀದರ್‌ನ ಗೋರ್ಟಾ ಹತ್ಯಾಕಾಂಡದಲ್ಲಿ ಬಲಿದಾನಗೈದ ವೀರರನ್ನೂ ಮರೆತಿತ್ತು. ಅಲ್ಲಿನ ಹುತಾತ್ಮರ ಸ್ಮಾರಕದ ಕಲ್ಲಿನ ಮೇಲಿನ ಧೂಳನ್ನು ಒರೆಸಿದ್ದ ಬಿಜೆಪಿ, ಈಗ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದೆ ಎಂದರು. ಪ್ರತಿ ಮನೆಗೂ ನನ್ನ ನಮಸ್ಕಾರ ತಿಳಿಸಿ
ಮತದಾನಕ್ಕೂ ಮೊದಲು ಎಲ್ಲ ಮತದಾರರು ನಾನು ಹೇಳಿದ ಕೆಲಸ ಮಾಡಬೇಕು. ನನ್ನ ಹೃದಯದ ಹಾಗೂ ಭಾವನೆಯ ಕೆಲಸವನ್ನು ನಿಮಗೆ ಒಪ್ಪಿಸುತ್ತೇನೆ. ಕರ್ನಾಟಕದ ಸಹೋದರ-ಸಹೋದರಿಯರು ಮೇ 10ಕ್ಕೂ ಮೊದಲು ಪ್ರತಿಯೊಬ್ಬ ಮತದಾರರ ಬಳಿ ಹೋಗಬೇಕು. ಕುಡುಚಿಗೆ ದಿಲ್ಲಿಯಿಂದ ನಿಮ್ಮ ಸೇವಕ ಮೋದಿ ಬಂದಿದ್ದರು. ನಿಮಗೆ ನಮಸ್ಕಾರ ಹೇಳಿದ್ದಾರೆ ಅಂತ ತಿಳಿಸಬೇಕು. ನಮಸ್ಕಾರವನ್ನು ಮನೆ ಮನೆಗೆ ತಲುಪಿಸಿದರೆ ಕೆಲಸ ಮಾಡಲು ನನಗೆ ಮತ್ತಷ್ಟು ಶಕ್ತಿ ಸಿಗುತ್ತದೆ ಎಂದು ಹೇಳುವ ಮೂಲಕ ಮೋದಿ ಭಾವನಾತ್ಮಕವಾಗಿ ಜನರನ್ನು ಸೆಳೆದರು.