Advertisement

Cauvery ವಿಚಾರ ಮಾತನಾಡುವ ಧೈರ್ಯ ರಾಜ್ಯದ ಸಂಸದರಿಗಿಲ್ಲ: ಸಚಿವ ಮಧು ಬಂಗಾರಪ್ಪ

09:11 PM Oct 01, 2023 | Team Udayavani |

ಹುಣಸೂರು: ಕಾವೇರಿ ವಿಚಾರವಾಗಿ ಪ್ರಧಾನಿ ಮೋದಿ ಎದುರು ಲೋಕಸಭೆಯಲ್ಲಿ ಮೇಜುಕುಟ್ಟಿ ಮಾತನಾಡುವ ಧೈರ್ಯ ನಮ್ಮ ಸಂಸದರಲ್ಲಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಛೇಡಿಸಿದರು.

Advertisement

ಹುಣಸೂರಿನ ಮಾಜಿ ಶಾಸಕ ಎಚ್.ಪಿ.ಮಂಜುನಾಥ್‌ರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಒಂದೇ ಸಾಕು ಎರಡೂ ಪಕ್ಷಗಳನ್ನು ಸೋಲಿಸಲು. ಗ್ಯಾರಂಟಿ ಯೋಜನೆಯ ಪಡೆಯಲು ಮೊದಲು ಕ್ಯೂ ನಿಂತವರು ಇವರೇ, ಇವರು ಏನೇ ಹೇಳಲಿ ಮತದಾರರನ್ನು ಇವರು ಸರಿಯಾಗಿ ನಡೆಸಿಕೊಂಡಿಲ್ಲ. ಆ ಪಾರ್ಟಿಗೆ ಮತಹಾಕಿದವರು ಬದಲಾವಣೆಯಾಗ್ತಾರೆ. ಎಲ್ಲರಿಗೂ ಭಾಗ್ಯಕೊಟ್ಟಿದ್ದೇವೆ. ಹೀಗಾಗಿ ಅವರು ಏನೇ ಒಂದಾದರೂ ಮತದಾರ ನಂಬುವ ಸ್ಥಿತಿಯಲ್ಲಿಲ್ಲ. ನಾವು ನೀಡಿದ್ದ ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದೇವೆ. ಮತದಾರ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ, ಬಿಜೆಪಿ-ಜೆಡಿಎಸ್ ಒಂದಾದರೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೋದಿ ಎದುರು ಮಾತನಾಡುವ ತಾಕತ್ತು ಸಂಸದರಿಗಿಲ್ಲ
ಕಾವೇರಿ ವಿಚಾರವಾಗಿ ರಾಜ್ಯದ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ಹಾಕುತ್ತಿಲ್ಲ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲವೆAಬುದು ಸಬೂಬಷ್ಟೆ, ಮತ್ತವರ ಜವಾಬ್ದಾರಿ ಇನ್ನೇನು ಎಂದು ಪ್ರಶ್ನಿಸಿ. ಮೊದಿ ಪ್ರಚಾರದಿಂದ ಗೆದ್ದ ಸಂಸದರು ಮೋದಿ ಎದುರು ಮಾತನಾಡುವ ದೈರ್ಯ ತೋರುತ್ತಿಲ್ಲ. ಮೋದಿ ಪ್ರಚಾರದಿಂದ ಗೆದ್ದಿದ್ದ ಶಾಸಕರು ಮನೆಯತ್ತ ಮುಖಮಾಡಿದ್ದಾರೆ, ಲೋಕಸಭೆ ಚುನಾವಣೆಯಲ್ಲೂ ಇದು ಮರುಕಳಿಸಲಿದೆ ಎಂಟು ಕಾವೇರಿ ವಿಚಾರದಲ್ಲಿ ಆರೋಪಿಸುತ್ತಿರುವ ವಿರೋಧ ಪಕ್ಷಗಳವರಿಗೆ ಟಾಂಗ್ ನೀಡಿದರು. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ನಾಯಕರು. ಇದನ್ನು ಪರಿಹರಿಸುವ ಛಾತಿ ಇವರಲ್ಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಂದೆ ಬಗ್ಗೆ ಹಗುರ ಮಾತು ಸಲ್ಲ
ಇತ್ತೀಚೆಗೆ ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ತಂದೆ ಬಂಗಾರಪ್ಪಾಜಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅವರ ಅವಧಿಯ ಕಾವೇರಿ ಹೋರಾಟದಲ್ಲಿ ಹಲವಾರು ಮಂದಿ ಸಾವನ್ನಪ್ಪಿದ್ದರೆಂದು ಆರೋಪಿಸಿದ್ದಾರೆ. ಹೋರಾಟವೆಂದರೆ ಪುಕ್ಸಟ್ಟೆ ಬರಲ್ಲ. ಹೋರಾಟಗಾರರು ರಕ್ತ ಕೊಟ್ಟೇವು ನೀರು ಕೊಡಲ್ಲವೆಂಬುದು ಸುಳ್ಳೇ, ಆ ಸಂದರ್ಭದಲ್ಲಿ ತಂದೆಯವರು ದಿಟ್ಟತನ ಪ್ರದರ್ಶಿಸಿದರು. ಬಂಗಾರಪ್ಪಜಿ ವಿರುದ್ದ ಆರೋಪ ಮಾಡಿದರೆ ಜನರ ಹೃದಯದಿಂದ ಹೋಗಲ್ಲವೆಂದು ತಿರುಗೇಟು ನೀಡಿದರು. ಮುಖ್ಯಮಂತ್ರಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ದರೆೆಂದು ಸ್ಪಷ್ಟಪಡಿಸಿದರು.

ಪ್ರಶ್ನಿಸುವ ಅಧಿಕಾರ ಎಲ್ಲರಿಗೂ ಸಿಗಬೇಕು
ನಿಮ್ಮ ಪಕ್ಷದ ಹಿರಿಯ ಶಾಸಕ ಶ್ಯಾಮನೂರು ಶಿವಶಂಕರಪ್ಪರಂತಹ ಮರ‍್ನಾಲ್ಕು ಹಿರಿಯ ಶಾಸಕರು ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ನಮ್ಮಲ್ಲಿ ಯಾರು ಬೇಕಾದರೂ ಪ್ರಶ್ನಿಸಬಹುದು, ಅದನ್ನ ಪರಾಮರ್ಶಿಸುವ ಹೈಕಮಾಂಡ್ ಇದೆ. ಆದರೆ ಆ ಪಕ್ಷಗಳಲ್ಲಿ ಹೈಕಮಾಂಡ್ ಎದುರು ನಿಂತು ಮಾತನಾಡುವ ಧೈರ್ಯ ಒಬ್ಬರಲ್ಲೂ ಇಲ್ಲವೆಂದರು.

Advertisement

ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಅಮರ್‌ನಾಥ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next