Advertisement

ಅಂಧ ಯುವತಿ ಹಚ್ಚಿದ ಯುವ ಜನೋತ್ಸವ ದೀಪ

09:42 AM Dec 01, 2017 | |

ಉಡುಪಿ: ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಇಲಾಖೆ, ರಾಜ್ಯ ಮತ್ತು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಆಶ್ರಯದಲ್ಲಿ  ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ರಾಜ್ಯ ಮಟ್ಟದ ಯುವ ಜನೋತ್ಸವವನ್ನು ಇಲಾಖಾ ಸಚಿವ ಪ್ರಮೋದ್‌ ಮಧ್ವರಾಜ್‌ ದೀಪ ಬೆಳಗಿಸಿ ಉದ್ಘಾಟಿಸಿದ ಸಂದರ್ಭ ವಿಜಯಪುರದ ಅಂಧ ಯುವತಿ ಕೃತ್ತಿಕಾ ಜಂಗಿನಮಠ ಅವರು ಡಿ.ಎಸ್‌. ಕರ್ಕಿ ಅವರ “ಹಚ್ಚುವೆವು ಕನ್ನಡದ ದೀಪ…’ ಭಾವಗೀತೆಯನ್ನು ವೇಣುವಾದನದಲ್ಲಿ ನುಡಿಸಿ ಸಚಿವರೂ ಸೇರಿದಂತೆ ಸರ್ವರ ಮೆಚ್ಚುಗೆಗೆ ಪಾತ್ರರಾದರು.

Advertisement

ಕೌಶಲಾಭಿವೃದ್ಧಿಗೂ ಒತ್ತು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಯುವ ಜನೋತ್ಸವ, ಯುವ ಜನ ಮೇಳವಲ್ಲದೆ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡುತ್ತಿದೆ. ಯುವ ಸಬಲೀಕರಣ ಇಲಾಖೆಗೆ ಪ್ರತ್ಯೇಕವಾಗಿ 15 ಕೋ.ರೂ. ಅನುದಾನವನ್ನು ಮುಖ್ಯಮಂತ್ರಿಗಳು ಕೌಶಲಾಭಿವೃದ್ಧಿಗಾಗಿ ಮೀಸಲಿಟ್ಟಿದ್ದಾರೆಂದು ಸಚಿವರು ತಿಳಿಸಿದರು. 

ಪ್ರತಿಭಾ ಪ್ರದರ್ಶನ ಅಗತ್ಯ
ಹಿಂದೆ ಯುವ ಜನ ಮೇಳ, ಯುವಜನೋತ್ಸವವೆಂದರೆ ಊರಿನಲ್ಲಿ ಹಬ್ಬದ ವಾತಾವರಣವಿತ್ತು. ಈಗ ಯುವಕರು ವಾಟ್ಸಪ್‌, ಫೇಸ್‌ಬುಕ್‌ನಲ್ಲಿ ಮುಳುಗುತ್ತಿದ್ದಾರೆ. ವೇದಿಕೆ ಮೇಲೇರಿ ಪ್ರತಿಭೆಯನ್ನು ಪ್ರದರ್ಶಿಸುವ ಬದಲು ಕೋಣೆಯೊಳಗೆ ಸೇರುವ ಪ್ರವೃತ್ತಿ ಹೆಚ್ಚುತ್ತಿದೆ. ಈ ಸ್ಥಿತಿಯಿಂದ ಮತ್ತೆ ಹಿಂದಕ್ಕೆ ಬರಬೇಕು. ಜನರೊಂದಿಗೆ ಬೆರೆಯುವ ಮನೋಭಾವನೆಯನ್ನು ಬೆಳೆಸಿ ಭಾÅತೃತ್ವ, ಮಿತ್ರತ್ವ, ಒಗ್ಗಟ್ಟಿನ ಜೀವನಕ್ಕೆ ನಾಂದಿ ಹಾಡಬೇಕು ಎಂದು ಸಚಿವರು ಕರೆ ನೀಡಿದರು. 

ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹಮೂರ್ತಿ, ರಾಜ್ಯ ಒಕ್ಕೂಟದ ಅಧ್ಯಕ್ಷ ಬಾಲಾಜಿ, ಜಿಲ್ಲಾ ಸಂಘದ ಮನೋಹರ ಕುಂದರ್‌, ಎಸ್‌ಪಿ ಡಾ| ಸಂಜೀವ ಪಾಟೀಲ್‌, ಅಪರ ಜಿಲ್ಲಾಧಿಕಾರಿ ಅನುರಾಧಾ, ಅಜ್ಜರಕಾಡು ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್‌, ಜಿ.ಪಂ. ಉಪಕಾರ್ಯದರ್ಶಿ ನಾಗೇಶ್‌ ರಾಯ್ಕರ್‌, ಯುವಜನ ಸಬಲೀಕರಣ ಇಲಾಖೆ ಜಂಟಿ ನಿರ್ದೇಶಕ ಅಭಿಜಿನ್‌, ಉಪನಿರ್ದೇಶಕ ರಂಗಯ್ಯ ಮೊದಲಾದವರು ಉಪಸ್ಥಿತರಿದ್ದರು. ಸಹಾಯಕ ನಿರ್ದೇಶಕ ಡಾ| ರೋಶನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರ್ವಹಿಸಿ ಪ್ರಕಾಶ್‌ ಕ್ರಮಧಾರಿ ವಂದಿಸಿದರು. 

ಚೌರಾಶಿಯಾ ಶಿಷ್ಯೆಗೆ ಶಹಬ್ಟಾಸ್‌ಗಿರಿ
ಮೂಲತಃ ವಿಜಯಪುರದವರಾದ ಕೃತ್ತಿಕಾ ಅವರು ಪ್ರಸ್ತುತ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಮ್ಯೂಸಿಕ್‌ ಎರಡನೇ ವರ್ಷದಲ್ಲಿ ಓದುತ್ತಿದ್ದಾರೆ. ಹಿಂದೂಸ್ತಾನೀ ಗಾಯನ ಮತ್ತು ವೇಣುವಾದನದಲ್ಲಿ ಪ್ರಾವೀಣ್ಯ ಪಡೆದಿರುವ ಕೃತ್ತಿಕಾ 2016ರಲ್ಲಿ  ಆಕಾಶವಾಣಿ ಏರ್ಪಡಿಸಿದ ಅ.ಭಾ. ಮಟ್ಟದ ಸ್ಪರ್ಧೆಯಲ್ಲಿ ದೇಶಕ್ಕೆ ಪ್ರಥಮ, 2010ರಲ್ಲಿ ರಾಜ್ಯದ ಬಾಲಕಲಾಶ್ರೀ ಪ್ರಶಸ್ತಿ ಪಡೆದಿದ್ದಾರೆ. ಪ್ರಸಿದ್ಧ ವೇಣುವಾದಕ ಪಂ| ಹರಿಪ್ರಸಾದ್‌ ಚೌರಾಸಿಯಾ ಅವರ ಶಿಷ್ಯೆ. ವಿಜಯಪುರದ ಭಾರತೀಯ ಆಹಾರ ನಿಗಮದ ಉದ್ಯೋಗಿ ವೀರೇಶ್ವರ, ತಾಯಿ ಪದ್ಮಾವತಿಯವರ ಪುತ್ರಿ ಕೃತ್ತಿಕಾ ಸೋದರ, ಕಾರ್ತಿಕೇಯ ತಬ್ಲಾ ಕಲಾವಿದ, ಕಂಪ್ಯೂಟರ್‌ ವಿಜ್ಞಾನ ಡಿಪ್ಲೊಮಾ ವಿದ್ಯಾರ್ಥಿ. ವೇಣು ವಾದನಕ್ಕೆ ಸಚಿವರು ಮೆಚ್ಚಿ ಸ್ಮರಣಿಕೆ ನೀಡಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next