Advertisement

ಮೂಡುಬಿದಿರೆ : ರಾಜ್ಯಮಟ್ಟದ ಕವಿಕಾವ್ಯ ಸಂಗಮ; ಪ್ರಶಸ್ತಿ ಪ್ರದಾನ

10:51 PM Sep 25, 2021 | Team Udayavani |

ಮೂಡುಬಿದಿರೆ: ಜಗತ್ತನ್ನು ಕಾಡಿದ ಕೊರೊನಾದಿಂದಾಗಿ ಹೇರಲಾದ ಲಾಕ್‌ಡೌನ್‌ ಸಂದರ್ಭ ಅನಿವಾರ್ಯ ವಾಗಿ ಸ್ತಬ್ಧವಾದ ನಮ್ಮ ಜೀವನಕ್ರಮವು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮತ್ತೆ ಚೈತನ್ಯವನ್ನು ಪಡೆಯು ವಂತಾಗಲಿ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಆಶಿಸಿದರು.

Advertisement

“ನವಪರ್ವ ಫೌಂಡೇಶನ್‌ ಬೆಂಗಳೂರು’ ಇದರ ಮಂಗಳೂರು ಘಟಕದ ವತಿ ಯಿಂದ ಸಮಾಜ ಮಂದಿರದಲ್ಲಿ ಬುಧ ವಾರ ನಡೆದ ರಾಜ್ಯಮಟ್ಟದ ಕವಿಕಾವ್ಯ ಸಂಗಮ 2021 ಹಾಗೂ ಕವಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ “ಪತಂಗ ಪರ್ವ’ ಪುಸ್ತಕವನ್ನು ಬಿಡುಗಡೆ ಗೊಳಿಸಿ ಮಾತನಾಡಿದ ಅವರು, ಕಸಾಪ ಮೂಲಕ ಸರಕಾರಿ ಮಟ್ಟದಲ್ಲಿ ಸಾಹಿತ್ಯದ ಕೆಲಸವಾಗುತ್ತಿರುವಂತೆಯೇ ಮಾದರಿ ಸಾಹಿತ್ಯ ಸೇವೆ ಮಾಡುತ್ತಿರುವ ಖಾಸಗಿ ಸಂಘ ಸಂಸ್ಥೆಗಳನ್ನೂ ಗುರುತಿಸಿ ಪ್ರೋತ್ಸಾಹಿ ಸುವ ಕಾರ್ಯನಡೆಯ ಬೇಕಾಗಿದೆ ಎಂದು ಹೇಳಿದರು.

ನವಪರ್ವ ಫೌಂಡೇಶನ್‌ ಸಂಸ್ಥಾಪಕ ಅಧ್ಯಕ್ಷ ಮುರಳೀಧರ್‌ ಕೆ.ಎಸ್‌. ಅಧ್ಯಕ್ಷತೆ ವಹಿಸಿದ್ದರು. ಡಾ| ಎಂ. ಮೋಹನ ಆಳ್ವ, ಮರುಳೀಧರ್‌ ಅವರನ್ನು “ನವಪರ್ವ ಮಂಗಳೂರು’ ಘಟಕದ ವತಿಯಿಂದ ಸಮ್ಮಾನಿಸಲಾಯಿತು. ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಕವಿಗೋಷ್ಠಿಯ ಅಧ್ಯಕ್ಷ ಪಿ.ವಿ. ಪ್ರದೀಪ್‌ ಕುಮಾರ್‌ ಮುಖ್ಯ ಅತಿಥಿಗಳಾಗಿದ್ದರು.

ಇದನ್ನೂ ಓದಿ :ದಲಿತ ಬಾಲಕ ದೇವಸ್ಥಾನ ಪ್ರವೇಶ ಪ್ರಕರಣ |ಅಸ್ಪೃಶ್ಯತೆ ಮುಕ್ತ ಗ್ರಾಮಕ್ಕಾಗಿ ಜನತೆ ಪ್ರತಿಜ್ಞೆ 

“ನವಪರ್ವ ಫೌಂಡೇಶನ್‌’ ಮಂಗಳೂರು ಘಟಕದ ಉಪಾಧ್ಯಕ್ಷೆ ಮಾನಸಾ ಪ್ರವೀಣ್‌ ಭಟ್‌ ಅವರಿಗೆ “ನವಪರ್ವ ನಕ್ಷತ್ರ 2021 ಪ್ರಶಸ್ತಿ’, ನಿರ್ಣಾಯಕರಾದ ಹರೀಶ್‌ ಕಜೆ ಅವರಿಗೆ “ಕುವೆಂಪು ಪ್ರಶಸ್ತಿ, ಸಂಭ್ರಮ ಕಾರ್ತಿಕ್‌ ಭಟ್‌, ಸೌಮ್ಯಾ ಕುಗ್ವೆ ಅವರಿಗೆ “ತ್ರಿವೇಣಿ ಪ್ರಶಸ್ತಿ’ ನೀಡಲಾಯಿತು. ಅನಂತಕೃಷ್ಣ ಕಲ್ಲೂರಾಯ ಅವರನ್ನು ಗೌರವಿಸಲಾಯಿತು. 20 ಮಂದಿಗೆ “ನವಪರ್ವ ಸವ್ಯಸಾಚಿ ಪ್ರಶಸ್ತಿ’ ಹಾಗೂ ಎಂಟು ಮಂದಿ ಕವಿಗಳಿಗೆ “ನವಪರ್ವ ಕವಿ ಕಾವ್ಯ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕವಿಗಳಾದ ಡಾ| ಸುರೇಶ್‌ ನೆಗಳಗುಳಿ, ರೇಮಂಡ್‌ ಡಿ’ಕುನ್ಹಾ, ಸುಮಾ ಕಿರಣ್‌, ಸದಾನಂದ ನಾರಾವಿ, ನವೀನ್‌ ಕುಲಾಲ್‌, ರಶ್ಮಿ ಸನಿಲ್‌, ರೇಖಾ ಸುದೇಶ್‌ ರಾವ್‌, ಪರಿಮಳಾ ಮಹೇಶ್‌ ರಾವ್‌, ಶರಣ್ಯಾ ಬೆಳುವಾಯಿ, ವಿದ್ಯಾಶ್ರೀ ಆಡೂರು, ಆಶಾ ಆಡೂರು, ಸಮ್ಯಕ್‌ ಜೈನ್‌, ಡಾ| ಬದರಿನಾಥ ಜಹಗೀರದಾರ ಕವಿ ಗೋಷ್ಠಿಯಲ್ಲಿ ಭಾಗವಹಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next