Advertisement
2006-07ರಲ್ಲಿ ಸವಣೂರಿನ ದ.ಕ.ಹಿ. ಪ್ರಾಥಮಿಕ ಶಾಲೆಯಲ್ಲಿ ಮೊದಲ ಬಾರಿಗೆ ನಡೆದ ತಾಲೂಕು ಮಟ್ಟದ ಕಬಡ್ಡಿ ಕ್ರೀಡಾಕೂಟದಲ್ಲಿ ನಿರ್ಮಲಾ ಆಡಿದ್ದ ತಂಡ ಪ್ರಥಮ ಸ್ಥಾನಗಳಿಸಿತು. 2008ರಲ್ಲಿ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲೂ ಪ್ರಥಮ ಸ್ಥಾನ ಒಲಿಯಿತು. ಇದರ ಬಳಿಕ ರಾಮನಗರ ಜಿಲ್ಲೆ ಚೆನ್ನಪಟ್ಟಣದಲ್ಲಿ ರಾಜ್ಯ ಮಟ್ಟದಲ್ಲೂಪ್ರಥಮ ಸ್ಥಾನ ಪಡೆದರು.
2011-12ನೇ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ
ಬಾಲಕಿಯರ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕವನ್ನು ಗಳಿಸಿದ್ದಾರೆ, ನಿರ್ಮಲಾ. ಇದೇ ರೀತಿ
ಹಲವು ಕ್ರೀಡಾಕೂಟಗಳಲ್ಲಿ ಪಾರಮ್ಯ ಮೆರೆದು ಮೆಚ್ಚುಗೆ ಗಳಿಸಿದ್ದಾರೆ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ತೀರ್ಥರಾಮ ಚಾರ್ವಾಕ, ಚಂದ್ರಶೇಖರ ಹಾಗೂ ಮನೋಹರ್ ಇವರು ಪೋ›ತ್ಸಾಹ ನೀಡಿದ್ದಾರೆ. ಅಪ್ಪ- ಅಮ್ಮ ಬಾಲ್ಯದಿಂದಲೇ ಉತ್ತೇಜನ ನೀಡಿದ್ದರಿಂದ ಕ್ರೀಡಾಪಟುವಾಗಿ ರೂಪುಗೊಳ್ಳಲು ಸಾಧ್ಯವಾಯಿತು. ಚಿಕ್ಕಂದಿನಿಂದಲೂ ಕಬಡ್ಡಿ ನನ್ನ ಮೆಚ್ಚಿನ ಆಟ. ಮುಂದೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕೆಂಬ ಹಂಬಲವಿದೆ. ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ನೂರಾರು ಕ್ರೀಡಾಪಟುಗಳನ್ನು ರೂಪಿಸುವ ಕನಸಿದೆ ಎಂದು ನಿರ್ಮಲಾ ವಿವರಿಸಿದರು.
ರಕ್ಷಿತಾ ಸಿ.ಎಚ್., ವಿವೇಕಾನಂದ
ಕಾಲೇಜು, ನೆಹರೂನಗರ ಪುತ್ತೂರು