Advertisement

ರಾಜ್ಯಮಟ್ಟದ ಸೈಕ್ಲಿಂಗ್‌ ಸ್ಪರ್ಧೆ: ವಿಜಯಪುರ ಕ್ರೀಡಾನಿಲಯಕ್ಕೆ ಸಮಗ್ರ

02:21 PM Oct 14, 2018 | |

ಹುಬ್ಬಳ್ಳಿ: ಇಲ್ಲಿನ ಬಿಡನಾಳ-ಗಬ್ಬೂರಿನಲ್ಲಿ ನಡೆದ 2 ದಿನಗಳ 11ನೇ ರಾಜ್ಯಮಟ್ಟದ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ವಿಜಯಪುರದ ಕ್ರೀಡಾ ನಿಲಯ ಸಮಗ್ರ ವೀರಾಗ್ರಣಿ ಪಡೆದರೆ, ವಿಜಯಪುರ ಜಿಲ್ಲೆ ರನ್ನರ್‌
ಅಪ್‌ ಆಗಿದೆ.

Advertisement

ಕರ್ನಾಟಕ ಅಮೆಚೂರ್‌ ಸೈಕ್ಲಿಂಗ್‌ ಅಸೋಶಿಯೇಷನ್‌ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ವಿಜಯಪುರ ಕ್ರೀಡಾ ನಿಲಯ 76 ಅಂಕ ಗಳಿಸಿದರೆ, ವಿಜಯಪುರ ಜಿಲ್ಲೆ 26 ಅಂಕ ಪಡೆಯಿತು. ಒಟ್ಟು 17 ಸ್ಪರ್ಧೆ ಜರುಗಿದವು. ಫಲಿತಾಂಶ: ಪುರುಷರ 10 ಕಿ.ಮೀ ಮಾಸ್ಡ್ ಸ್ಟಾರ್ಟ್‌. (ಇಂಡಿಯನ್‌ ಮೇಡ್‌): ಬೆಳಗಾವಿ ಜಿಲ್ಲೆಯ ಬಸವರಾಜ ದಳವಾಯಿ (ಪ್ರಥಮ), ಬೆಳಗಾವಿ ಜಿಲ್ಲೆಯ ಪ್ರಭು ಕಾಳತಿಪ್ಪಿ (ದ್ವಿತೀಯ), ಬಾಗಲಕೋಟೆ ಜಿಲ್ಲೆಯ ಬಸವರಾಜ ಹೊಸೂರು (ತೃತೀಯ) ಸ್ಥಾನ ಪಡೆದರು.

18 ವರ್ಷದೊಳಗಿನ ಬಾಲಕರ 50 ಕಿ.ಮೀ ಮಾಸ್ಡ್ ಸ್ಟಾರ್ಟ್‌: ವಿಜಯಪುರ ಕ್ರೀಡಾ ನಿಲಯದ ಬಸವರಾಜ ಮಡ್ಡಿ (ಪ್ರಥಮ), ವಿಜಯಪುರ ಕ್ರೀಡಾ ನಿಲಯದ ಮುತ್ತಪ್ಪ ನಲವಳ್ಳಿ (ದ್ವಿತೀಯ),ವಿಜಯಪುರ ಕ್ರೀಡಾ ನಿಲಯದ
ಸಚಿನ ರಂಜಣಗಿ (ತೃತೀಯ) ಸ್ಥಾನ ಗಳಿಸಿದರು. 18 ವರ್ಷದೊಳಗಿನ ಬಾಲಕಿಯರ 30 ಕಿ.ಮೀ ಮಾಸ್ಡ್ ಸ್ಟಾರ್ಟ್‌: ವಿಜಯಪುರ ಕ್ರೀಡಾ ನಿಲಯದ ಸೌಮ್ಯ ಅಂತಾಪುರ (ಪ್ರಥಮ), ವಿಜಯಪುರ ಕ್ರೀಡಾ ನಿಲಯದ ಕಾವೇರಿ ಮುರನಾಳ (ದ್ವಿತೀಯ) ಹಾಗೂ ವಿಜಯಪುರ ಕ್ರೀಡಾ ನಿಲಯದ ಸಾವಿತ್ರಿ ಹೆಬ್ಟಾಳಟ್ಟಿ (ತೃತೀಯ) ಸ್ಥಾನ ಪಡೆದರು.

23 ವರ್ಷದೊಳಗಿನ ಬಾಲಕರ 80 ಕಿ.ಮೀ ಮಾಸ್ಡ್ ಸ್ಟಾರ್ಟ್‌: ಬಾಗಲಕೋಟೆ ಜಿಲ್ಲೆಯ ಕರೆಪ್ಪ ಜೊಂಗನವರ (ಪ್ರಥಮ), ಚಂದರಗಿ ಕ್ರೀಡಾಶಾಲೆಯ ನಾಗಪ್ಪ ಮುರಡಿ (ದ್ವಿತೀಯ) ಹಾಗೂ ವಿಜಯಪುರ ಕ್ರೀಡಾ ನಿಲಯದ ನಂದೆಪ್ಪ ಸವದಿ (ತೃತೀಯ) ಸ್ಥಾನ ಪಡೆದರು. ಪುರುಷರ 80 ಕಿ.ಮೀ ಮಾಸ್ಡ್ ಸ್ಟಾರ್ಟ್‌: ವಿಜಯಪುರ ಜಿಲ್ಲೆಯ ಯಲಗೂರೇಶ ಗಡ್ಡಿ (ಪ್ರಥಮ), ವಿಜಯಪುರ ಜಿಲ್ಲೆಯ ಶಿವಲಿಂಗಪ್ಪ ಯಳಮೇಲಿ (ದ್ವಿತೀಯ) ಹಾಗೂ ವಿಜಯಪುರ ಜಿಲ್ಲೆಯ ಸಂತೋಷ ಕುರಣಿ (ತೃತಿಯ) ಸ್ಥಾನ ಪಡೆದರು.

ಮಹಿಳೆಯರ 40 ಕಿ.ಮೀ ಮಾಸ್ಡ್ ಸ್ಟಾರ್ಟ್‌: ಗದಗ ಜಿಲ್ಲೆಯ ರೇಣುಕಾ ದಂಡಿನ (ಪ್ರಥಮ), ಬಾಗಲಕೋಟೆ
ಜಿಲ್ಲೆಯ ದಾನಮ್ಮ ಗುರವ (ದ್ವಿತೀಯ) ಹಾಗೂ ವಿಜಯಪುರ ಕ್ರೀಡಾ ನಿಲಯದ ಸೌಮ್ಯ ಅಂತಾಪುರ (ತೃತಿಯ) ಸ್ಥಾನ ಪಡೆದರು 

Advertisement
Advertisement

Udayavani is now on Telegram. Click here to join our channel and stay updated with the latest news.

Next