Advertisement

ಜನಮನ ಸೆಳೆದ ರಾಜ್ಯಮಟ್ಟದ ಭಾರಿಗಾಡಾ ಓಡಿಸುವ ಸ್ಪರ್ಧೆ

01:06 PM Jan 18, 2020 | Team Udayavani |

ಲಕ್ಷ್ಮೇಶ್ವರ: ರೈತರು ಪ್ರತಿವರ್ಷ ಮಕರ ಸಂಕ್ರಮಣವನ್ನು ಸುಗ್ಗಿಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ರೈತರ ಒಡನಾಡಿ ಎತ್ತುಗಳನ್ನು ಪೂಜಿಸುವ ಸಂಪ್ರದಾಯ ಮೊದಲಿ ನಿಂದಲೂ ನಡೆದುಕೊಂಡು ಬಂದಿದ್ದು, ವರ್ಷವಿಡಿ ರೈತರು ತಮ್ಮ ಎತ್ತುಗಳ ಆರೋಗ್ಯವೇ ನಮ್ಮ ಭಾಗ್ಯವೆಂದು ಕಾಳಜಿಪೂರ್ವಕವಾಗಿ ನೋಡಿಕೊಳ್ಳುತ್ತಾರೆ ಎಂದು ಹೂವಿನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಸ್ವಾಮೀಜಿ ನುಡಿದರು.

Advertisement

ತಾಲೂಕಿನ ಹೂವಿನಶಿಗ್ಲಿ ಗ್ರಾಮದ ಹೊರ ವಲಯದಲ್ಲಿ ಶ್ರೀಲಕ್ಷ್ಮೀ ದೇವಿ ಭಜನಾ ಮಂಡಳಿ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಭಾರಿ ಗಾಡಾ ಓಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗೆಲುವಿಗಾಗಿ ಮೂಕ ಪ್ರಾಣಿಗಳನ್ನು ಹಿಂಸಿಸದೇ, ಆರೋಗ್ಯಕರ ತರಬೇತಿ ನೀಡುವಂತಾಗಲಿ. ಜನಪದ ಕಲೆಗಳ ಹಾಗೂ ಸ್ಪರ್ಧೆಗಳ ಆಯೋಜನೆ ಬೇಕು. ಆದರೆ ಸ್ಪರ್ಧೆಗಳು ಇತರರಿಗೂ ಮಾದರಿಯಾಗಿ ಇರುವಂತಿರಬೇಕು. ಜಾತ್ರಾ ಮಹೋತ್ಸವ ಅಂಗವಾಗಿ ನಿರಂತರ, ವ್ಯವಸ್ಥಿತವಾಗಿ ಹಮ್ಮಿಕೊಳ್ಳುವ ಗಾಡಾ ಓಡಿಸುವ ಸ್ಪರ್ಧೆ ರಾಜ್ಯಮಟ್ಟದಲ್ಲಿ ಹೆಸರು ಮಾಡಿರುವುದು ಶ್ಲಾಘನೀಯ ಎಂದರು.

ಬಳೂಟಗಿ ಕುಮಾರದೇವರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶ್ರೀಲಕ್ಷ್ಮೀ ದೇವಿ ಭಜನಾ ಮಂಡಳಿ ಅಧ್ಯಕ್ಷ ವಿರೂಪಾಕ್ಷಪ್ಪ ಮಾಗಡಿ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಉಮೇಶ ಮಾಗಡಿ, ಫಕ್ಕೀರಪ್ಪ ಸೊರಟೂರ, ನಬಸವರಾಜ ಕುರಿ, ಶಂಭು ಕುರಿ, ಕಾಂತೇಶ ಹುಲ್ಲೂರ, ರವಿ ಮಾಗಡಿ, ಯಲ್ಲಪ್ಪ ಹುಲ್ಲೂರ, ಮಲ್ಲನಗೌಡ ನಡುವಿನಮನಿ, ಸತೀಶ ಅವಗಾನ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು, ಇತರರು ಇದ್ದರು.

ತಾಲೂಕು ಪಶು ವೈದ್ಯರಾದ ಮಹೇಶ ಸವಣೂರ, ಪಿ.ವೈ. ಬಿಷ್ಟಣ್ಣನವರ ಅವರನ್ನು ಸನ್ಮಾನಿಸಲಾಯಿತು. ಸ್ಪರ್ಧೆ ಸ್ಥಳದಲ್ಲಿ ನೆರೆದಿದ್ದ ಜನರು ಕೇಕೆ, ಸಿಳ್ಳೆಹಾಕಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next