Advertisement

Karnataka: ಆನೆ ಸಂತತಿಯಲ್ಲಿ ನಂ.1- ರಾಜ್ಯದಲ್ಲಿ ಐದು ವರ್ಷಗಳಲ್ಲಿ 346 ಆನೆಗಳು ಏರಿಕೆ

12:31 AM Aug 10, 2023 | Team Udayavani |

ಬೆಂಗಳೂರು: ಹುಲಿ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿ ರುವ ಕರು ನಾಡು, ಆನೆಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 6,395 ಆನೆಗಳಿದ್ದು. ಐದು ವರ್ಷಗಳಲ್ಲಿ 346 ಆನೆಗಳು ಏರಿಕೆಯಾಗಿವೆ.

Advertisement

2017-18ರಲ್ಲಿ ನಡೆದಿದ್ದ ಗಣತಿ ಯಲ್ಲಿ 6,049 ಆನೆಗಳು ಇದ್ದವು. 2022ರಲ್ಲಿ ನಡೆದಿದ್ದ ಗಣತಿ ವೇಳೆ ಮಾದರಿ ಬ್ಲಾಕ್‌ ಎಣಿಕೆ, ಆನೆಗಳ ಸಂಖ್ಯೆ ರಚನೆಯ ಮೌಲ್ಯಮಾಪನ ಆಗಿರಲಿಲ್ಲ. ಹೀಗಾಗಿ ಆ. 12ರಂದು ವಿಶ್ವ ಆನೆಗಳ ದಿನಾಚರಣೆ ಇರುವುದರಿಂದ ಮತ್ತೂಮ್ಮೆ ಸಮೀಕ್ಷೆ ನಡೆಸಲಾಗಿತ್ತು. ಅದರ ವರದಿ ಯನ್ನು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ವಿಕಾಸ ಸೌಧದಲ್ಲಿ ಬಿಡುಗಡೆ ಮಾಡಿದರು.

2017-18ರ ಗಣತಿ ಪ್ರಕಾರ ಕರ್ನಾ ಟಕ ದಲ್ಲಿ 6,049, ಅಸ್ಸಾಂನಲ್ಲಿ 5,719, ಕೇರಳದಲ್ಲಿ 3,054, ತಮಿಳುನಾಡಿನಲ್ಲಿ 2,791 ಹಾಗೂ ಒಡಿಶಾದಲ್ಲಿ 1,966 ಆನೆಗಳು ಲೆಕ್ಕಕ್ಕೆ ಸಿಕ್ಕಿದ್ದವು. ಕಳೆದ ಬಾರಿಯೂ ಕರ್ನಾಟಕವೇ ನಂ.1 ಸ್ಥಾನದಲ್ಲಿತ್ತು.

ಭಾರತೀಯ ವಿಜ್ಞಾನ ಸಂಸ್ಥೆ (ಐಐ ಎಸ್‌ಸಿ)ಯ ಪ್ರೊ| ಆರ್‌.ಸುಕುಮಾರ್‌ ಅವರ ತಾಂತ್ರಿಕ ನೆರವಿನೊಂದಿಗೆ ಅರಣ್ಯ ಇಲಾಖೆಯ 3,400ಕ್ಕೂ ಹೆಚ್ಚು ಸಿಬಂದಿ ರಾಜ್ಯದ 32 ವಿಭಾಗ ಗಳಲ್ಲಿ ಆನೆಗಳ ಗಣತಿ ನಡೆ ಸಿದ್ದು, 23 ವಿಭಾಗಗಳಲ್ಲಿ ಆನೆಗಳು ಕಂಡು ಬಂದಿವೆ. ಸರಾಸರಿ 6,395 ಆನೆ ಗಳು ಕಂಡುಬಂದಿದ್ದು, ಕನಿಷ್ಠ 5914ರಿಂದ ಗರಿಷ್ಠ 6,877 ಆನೆಗಳು ರಾಜ್ಯ ದಲ್ಲಿ ಇರಬಹುದು ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ 5 ಚ.ಕಿ.ಮೀ. ವ್ಯಾಪ್ತಿಯ ಬ್ಲಾಕ್‌ಗಳಲ್ಲಿ ಗಣತಿ ನಡೆಸಿದ್ದು, 2 ಕಿ.ಮೀ. ಉದ್ದದ ಟ್ರಾಂಜಾಕ್ಟ್ ರೇಖೆಗಳಲ್ಲಿ ಆನೆಗಳ ಲದ್ದಿಯನ್ನೂ ಎಣಿಸಲಾಯಿತು. ಆನೆಗಳು ಭೇಟಿ ನೀಡುವ ವಾಟರ್‌ ಹೋಲ್‌ ಮತ್ತಿತರ ಸ್ಥಳಗಳಲ್ಲೂ ಗಣತಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next