ಹೊಸದಿಲ್ಲಿ: ದೇಶದ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ನಾವೀನ್ಯತೆ (ಇನೋ ವೇಷನ್) ಮತ್ತು ಉದ್ಯಮಶೀಲತೆ ಅಭಿವೃದ್ಧಿಗೆ ಸಹಕಾರದ ಆಧಾರದ ಮೇಲೆ ಅಟಲ್ ಇನೋವೇಷನ್ ರ್‍ಯಾಂಕಿಂಗ್ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಶಿಕ್ಷಣ ಇಲಾಖೆಯಿಂದ ಬಿಡುಗಡೆ ಮಾಡಲಾಗುವ ಈ ರ್‍ಯಾಂಕಿಂಗ್ ಪಟ್ಟಿಯ ಕೇಂದ್ರೀಯ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಆರನೇ ರ್‍ಯಾಂಕ್ ಪಡೆದುಕೊಂಡಿದೆ. ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ನಾವೀನ್ಯತೆ ಗೆ ಐಐಟಿ ಮದ್ರಾಸ್ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ಟಾಪ್ 10ರಲ್ಲಿ ಐಐಟಿ ಬಾಂಬೆ, ದೆಹಲಿ, ಕಾನ್ಪುರವೂ ಸ್ಥಾನ ಪಡೆದಿವೆ. ಬ್ಯಾಂಡ್ ಎಕ್ಸಲೆಂಟ್ ವಿಭಾಗದಲ್ಲಿ ಸುರತ್ಕಲ್‌ನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸ್ಥಾನ ಪಡೆದಿದೆ. ಸರಕಾರಿ ಅಥವಾ ಸರಕಾರಿ ಸ್ವಾಮ್ಯದ ತಾಂತ್ರಿಕ ವಿಶ್ವವಿದ್ಯಾನಿಲಯಗಳ ಪೈಕಿ ಪಂಜಾಬ್ ಮೊದಲ ರ್‍ಯಾಂಕ್ ಪಡೆದು ಕೊಂಡಿದೆ. ಈ ವಿಭಾಗದ ಬ್ಯಾಂಡ್ ಪ್ರಾಮಿಸಿಂಗ್ ವಿಶ್ವವಿದ್ಯಾನಿಲಯಗಳಲ್ಲಿ ಬೆಳಗಾವಿಯ ವಿಶ್ವೇಶ್ವ ರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ(ವಿಟಿಯು) ಸ್ಥಾನ ಪಡೆದಿದೆ.
ಖಾಸಗಿ ವಿಶ್ವವಿದ್ಯಾನಿಲಯಗಳಿಗೆ ಪ್ರಶಸ್ತಿ: ಖಾಸಗಿ ವಿಶ್ವವಿದ್ಯಾನಿಲಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ತಾಂತ್ರಿಕ ವಿಶ್ವವಿದ್ಯಾನಿಲಯವಾಗಿ ಒಡಿ ಶಾದ ಖೋರ್ದಾದ ಕಳಿಂಗ್ ಇನ್‌ಸ್ಟಿಟ್ಯೂಟ್ ಹೊರ ಹೊಮ್ಮಿದೆ. ವಿಭಾಗದ ಬ್ಯಾಂಡ್ ಪರ್ಫಾ ಮರ್ ಪಟ್ಟಿಯಲ್ಲಿ ಬಿಜಾಪುರದ ಬಿಎಲ್‌ಡಿಇ, ಬೆಂಗಳೂರಿನ ಎಂ.ಎಸ್.ರಾಮಯ್ಯ ವಿವಿ ಇದೆ. ಬ್ಯಾಂಡ್ ಪ್ರಾಮಿಸಿಂಗ್ ವಿವಿಗಳಲ್ಲಿ ಬೆಂಗಳೂರಿನ ದಯಾನಂದ ಸಾಗರ ಇನ್‌ಸ್ಟಿಟ್ಯೂಟ್, ಇಂಟರ್ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ ಮತ್ತು ರೆಸಿಡೆನ್ಸಿ ವಿಶ್ವವಿದ್ಯಾನಿಲಯ ವಿದೆ. ಬ್ಯಾಂಡ್ ಬಿಗಿನರ್ ಆಗಿ ಮಂಗಳೂರಿನ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ ಹಾಗೂ ಕೋಲಾರದ ದೇವರಾಜ ಅರಸು ವಿವಿ ಹೊರಹೊಮ್ಮಿವೆ. .
ರಾಜ್ಯದ ಸಂಸ್ಥೆಗಳು: ಸರಕಾರಿ ಮತ್ತು ಸರಕಾರಿ ಸ್ವಾಮ್ಯದ ತಾಂತ್ರಿಕ ಕಾಲೇಜುಗಳಲ್ಲಿ ನಾವೀನ್ಯತೆ ಗೆ ಪುಣೆಯ ಎಂಜಿನಿಯರಿಂಗ್ ಕಾಲೇಜು ಮೊದಲ ಸ್ಥಾನದಲ್ಲಿದೆ. ಅದರಲ್ಲಿ ಬ್ಯಾಂಡ್ ಪರ್ಫಾಮರ್ ಪಟ್ಟಿಗೆ ಬಾಗಲಕೋಟೆಯ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು, ಬೆಂಗಳೂರಿನ ಡಾ|ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹಾಸನದ ಮಲಾ°ಡ್ ಕಾಲೇಜ್ ಆಫ್ ಇಂಜಿನಿಯರಿಂಗ್, ಮಂಡ್ಯದ ಪಿಇಎಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಸೇರಿವೆ. ಅದೇ ವಿಭಾಗದ ಬ್ಯಾಂಡ್ ಪ್ರಾಮಿಸಿಂಗ್ ಪಟ್ಟಿಯಲ್ಲಿ ಬೆಂಗಳೂರಿನ ಡಾ|ಅಂಬೇಡ್ಕರ್ ಇನ್‌ಸ್ಟಿಟ್ಯೂಟ್, ಜ್ಯೋತಿ ನಿವಾಸ ಕಾಲೇಜು, ರಾಜೀವ್ ಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸರಕಾರಿ ಫಾರ್ಮಸಿ ಕಾಲೇಜು ಜತೆಯಲ್ಲಿ ಗುಲ್ಬರ್ಗದ ಪಿ.ಡಿ.ಎ ಎಂಜಿನಿಯರಿಂಗ್ ಕಾಲೇಜು ಸೇರಿವೆ. ವಿಭಾಗದ ಬ್ಯಾಂಡ್ ಬಿಗಿನರ್ ಕಾಲೇಜಲ್ಲಿ ನಾಗಮಂಗಲದ ಸರಕಾರಿ ಫಸ್ಟ್ ಗ್ರೇಡ್ ಕಾಲೇಜು, ಚಿತ್ರದುರ್ಗದ ಸರಕಾರಿ ವಿಜ್ಞಾನ ಕಾಲೇಜು ಕಾಣಿಸಿಕೊಂಡಿವೆ.
ನಾವೀನ್ಯತೆ ಅಳವಡಿಸಿಕೊಂಡ ಖಾಸಗಿ ಕಾಲೇಜುಗಳಲ್ಲಿ ಬೆಂಗಳೂರಿನ ಶ್ರೀ ಕೃಷ್ಣ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿಗೆ ನಾಲ್ಕನೇ ರ್‍ಯಾಂಕ್ ಹಾಗೂ ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿಗೆ 5ನೇ ರ್‍ಯಾಂಕ್ ಸಿಕ್ಕಿದೆ. ಉಳಿದಂತೆ ಈ ವಿಭಾಗದ ಬ್ಯಾಂಡ್ ಎಕ್ಸಲೆಂಟ್, ಬ್ಯಾಂಡ್ ಪ್ರಾಮಿಸಿಂಗ್, ಬ್ಯಾಂಡ್ ಬಿಗಿನರ್, ಬ್ಯಾಂಡ್ ಪರ್ಫಾಮರ್ ಪಟ್ಟಿಯಲ್ಲಿ ಕರ್ನಾಟಕದ ಹಲವು ಕಾಲೇಜುಗಳಿವೆ.