ಕಾರಟಗಿ: ಪಟ್ಟಣದಿಂದ ಕನಕಗಿರಿವರೆಗಿನ ರಾಜ್ಯ ಹೆದ್ದಾರಿ ಕಾಮಗಾರಿಯನ್ನು ಸೋಮನಾಳ ಬಳಿ ಶಾಸಕ ಬಸವರಾಜ ದಢೇಸುಗೂರು ರವಿವಾರ ವೀಕ್ಷಿಸಿದರು.
ನಂತರ ಮಾತನಾಡಿದ ಅವರು ಕಾರಟಗಿಯಿಂದ 10 ಕಿ.ಮೀ. ರಸ್ತೆ 22 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿದ್ದು ಕಾಮಗಾರಿ ಗುಣಮಟ್ಟ ಸೇರಿದಂತೆ ಕಾಮಗಾರಿಗೆ ಬಳಸುವ ಸಾಮಗ್ರಿಗಳ ಕುರಿತು ಪರಿಶೀಲನೆ ಮಾಡಲಾಗಿದೆ. ಅಲ್ಲದೇ ಸ್ಥಳಕ್ಕೆ ಎಂಜನೀಯರ್ ಹಾಗೂ ಗುತ್ತಿಗೆದಾರರನ್ನು ಕರೆಯಿಸಿ ಕಾಮಗಾರಿ ವೀಕ್ಷಣೆ ಮಾಡಲಾಗಿದೆ. 10 ಕಿ.ಮೀ. ರಸ್ತೆಯುದ್ಧಕ್ಕೂ ಬರುವ ಸೇತುವೆ ಹಾಗೂ ಮುಖ್ಯೆ ರಸ್ತೆಯಿಂದ ಗ್ರಾಮೀಣ ಭಾಗಕ್ಕೆ ಸೇರುವ ರಸ್ತೆಗಳ ಬಗ್ಗೆಯೂ ಗುತ್ತಿಗೆದಾರರ ಬಳಿ ಸಮಗ್ರ ಮಾಹಿತಿ ಪಡೆಯಲಾಗಿದೆ. ಕಾಮಗಾರಿ ಯಾವುದೇ ಕಾರಣಕ್ಕೆ ವಿಳಂಬವಾಗದಂತೆ ನಿಗದಿತ ಸಮಯಕ್ಕೆ ಕಾಮಗಾರಿ ಮುಗಿಸುವ ಬಗ್ಗೆ ಸೂಚಿಸಲಾಗಿದೆ. ಅಲ್ಲದೇ ಕಾಮಗಾರಿಯಲ್ಲಿ ಯಾವುದೇ ಲೋಪ ದೋಷ ಕಂಡುಬಂದರೆ ಪುನಃ ಕಾಮಗಾರಿ ನಡೆಸಬೇಕಾಗುತ್ತದೆ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ. ಇನ್ನು 3-4 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವುದು. ರಸ್ತೆಯ ಮಾರ್ಗದ ಸೇತುವೆ ಕಾಮಗಾರಿ ನಡೆಸುತ್ತಿದ್ದರಿಂದ ಕಾಮಗಾರಿ ನಿಧಾನವಾಗಿ ಸಾಗಿದೆ. ಕಾಮಗಾರಿಯ ಗುಣಮಟ್ಟ ಕಾಪಾಡಿಕೊಂಡು ಕೆಲಸ ನಿರ್ವಹಿಸುವಂತೆ ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಕಾಶಿ ವಿಶ್ವನಾಥ ಬಿಚ್ಚಾಲಿ, ಚಂದ್ರಶೇಖರ ಮುಸಾಲಿ, ಎಂಜನೀಯರ್ ಹಾಗೂ ಗುತ್ತಿಗೆದಾರರು ಇತರರು ಇದ್ದರು.