ಮಂಡ್ಯ: ರಾಜ್ಯ ಹೆದ್ದಾರಿ ಕಾಮಗಾರಿ ಮಾಡುವ ವೇಳೆ ಸಿಗುವ ಕಲ್ಲುಗಳನ್ನು ಸ್ಫೋಟಿಸುತ್ತಿರುವು ದರಿಂದ ರಸ್ತೆ ಅಕ್ಕಪಕ್ಕದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಎನ್‌ಆರ್ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ತಾಲೂಕಿನ ಮೂಲಕ ಹಾದು ಹೋಗುತ್ತಿರುವ ಕೇರಳ- ಜಲಸೂರು- ಬೆಂಗಳೂರು ರಾಜ್ಯ ಹೆದ್ದಾರಿಯ ರಸ್ತೆ
ಕಾಮಗಾರಿ ವೇಳೆ ಜಾಗಿನಕೆರೆ ಗ್ರಾಮದ ಬಳಿ ರಸ್ತೆಗೆ ಅಡ್ಡಲಾಗಿರುವ ಕಲ್ಲುಗಳನ್ನು 8-10 ಅಡಿ ಆಳಕ್ಕೆ ಕುಳಿ ಕೊರೆದು
ಸ್ಫೋಟಿಸುತ್ತಿರುವುದರಿಂದ ಅಕ್ಕಪಕ್ಕದ ಮನೆಗಳಿಗೆ ತೊಂದರೆ ಉಂಟಾಗುತ್ತಿದೆ. ಕಲ್ಲು ಬ್ಲಾಸ್ಟ್ ಮಾಡುತ್ತಿರುವುದರಿಂದ ಈಗಾಗಲೇ 15 ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಮನೆಗಳು ಯಾವುದೇ ಕ್ಷಣದಲ್ಲಾದರೂ ಬೀಳಬಹುದು ಎಂಬ ಭಯ ಕಾಡುತ್ತಿದೆ ಎಂದು ಕಂಪನಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣ ದಾಖಲು: ಜಾಗಿನಕೆರೆ ಗ್ರಾಮದಲ್ಲಿ ಕಾಮಗಾರಿಗಾಗಿ ರಸ್ತೆಯಲ್ಲಿರುವ ಬಂಡೆಯನ್ನು ಬ್ಲಾಸ್ಟ್ ಮಾಡಿದ್ದಾರೆ. ಇದರ ಪರಿಣಾಮ ಮನೆಗಳ ಗೋಡೆಗಳು ಎಲ್ಲೆಂದರಲ್ಲಿ ಬಿರುಕು ಬಿಟ್ಟಿವೆ. ಮನೆಯಲ್ಲಿ ವಾಸಿಸಲು ನಮಗೆ ಭಯವಾಗುತ್ತಿದೆ. ಸಾಲ ಮಾಡಿ ಈಗಷ್ಟೇ ಮನೆ ಕಟ್ಟಿಕೊಂಡಿದ್ದೇವೆ. ನಮ್ಮ ಮನೆಗಳು ಹಾನಿಯಾಗಿರುವುದಕ್ಕೆ ಕಂಪನಿಯು ಪರಿಹಾರ ನೀಡಬೇಕು ಎಂದು
ಒತ್ತಾಯಿಸಿ, ಸಂತೇಬಾಚಹಳ್ಳಿ ಕೆ.ಆರ್.ಪೇಟೆ ರಸ್ತೆಯಲ್ಲಿ ಪ್ರತಿಭಟನೆ ಮಾಡಿ, ನಂತರ ಪಟ್ಟಣ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಿದ್ದೇವೆ.
ಇದನ್ನೂ ಓದಿ:ಕಾಂಗ್ರೆಸ್ ಪ್ರತಿಭಟನೆಗೆ ಪೊಲೀಸರ ತಡೆ: ಡಿಕೆಶಿ, ಸಿದ್ದರಾಮಯ್ಯ ಪೊಲೀಸ್ ವಶಕ್ಕೆ
ನಮಗೆ ನ್ಯಾಯ ಸಿಗದಿದ್ದರೆ ಹೋರಾಟದ ಮೂಲಕ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಪ್ರತಿಭಟನೆಯಲ್ಲಿ ರಘು, ವನಿತಾ ಶಂಕರೇಗೌಡ, ವಸಂತಮ್ಮ, ರಾಜು, ನಂಜೇಗೌಡ, ನರಸಿಂಹೇಗೌಡ, ಭಾಗ್ಯಮ್ಮ, ಲೋಕೇಶ್, ಚಿಕ್ಕೇಗೌಡ, ಶಿವಣ್ಣ, ವನಜಾಕ್ಷಮ್ಮ, ದೇವಮ್ಮ, ಸುನಂದಮ್ಮ, ಸವಿತಾ, ಮಂಜೇಗೌಡ, ಶಾರದಾ, ಮಂಜೇಗೌಡ, ಅಶ್ವಿನಿ ಹಾಜರಿದ್ದರು.