Advertisement
ಬೆಳಿಗ್ಗೆ 10.30ರಿಂದ ಆರಂಭಗೊಂಡ ಚಳವಳಿ ಮಧ್ಯಾಹ್ನ 2 ಗಂಟೆವರೆಗೂ ನಡೆದ ಪರಿಣಾಮ ದೂರದ ಊರುಗಳಿಗೆಪ್ರಯಾಣಿಸಬೇಕಾದ ವಾಹನ ಸವಾರರು ಪರದಾಟ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ, ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ, ವೀರಭದ್ರ ಸ್ವಾಮೀಜಿ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಸಂಚಾರಕ್ಕೆ ಅನುವು ಮಾಡಿ ಪ್ರಯಾಣಿಕ ಪರದಾಟ ತಪ್ಪಿಸಿದರು. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದಪುರಿ ಸ್ವಾಮೀಜಿ ಮಾತನಾಡಿ, ಸೈನಿಕ್ ಹುಳಿನ ಬಾಧೆಯಿಂದ ಈ ಭಾಗದ ರೈತರ ಬದುಕು ಬೀದಿಗೆ ಬಂದಿದೆ. ಜಿಲ್ಲಾಧಿ ಕಾರಿಗಳು ಅತಿವೃಷ್ಟಿ, ಅನಾವೃಷ್ಟಿಗೆ ಪರಿಹಾರ ಕೊಡುತ್ತೀವಿ ಎನ್ನುತ್ತಿದ್ದಾರೆ. ಸೈನಿಕ್ ಹುಳಿನ ಕಾಟ ಅನಾವೃಷ್ಟಿ ಅಲ್ಲವೇ? ರೈತರಿಗೆ ಪರಿಹಾರ ಕೊಡಲು ಅಧಿಕಾರಿಗಳು ಮಾನದಂಡ ಇಟ್ಟುಕೊಳ್ಳಬಾರದು. ಸರ್ಕಾರ ಬಂಡವಾಳಶಾಹಿಗಳಿಗೆ ಪ್ರೋತ್ಸಾಹಿಸುವ
ಬದಲು ದೇಶದ ಬೆನ್ನೆಲುಬು ಅನ್ನದಾತರ ಸಂಕಷ್ಟಕ್ಕೆ ನೆರವಾಗಬೇಕು. ಅಧಿಕಾರಿಗಳು, ಜನಪ್ರತಿನಿ ಧಿಗಳು ಈ ಸೈನಿಕ್ ಹುಳಿವಿನ ಹಾನಿಯನ್ನು ವಿಮೆ ವ್ಯಾಪ್ತಿಯಲ್ಲಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನೀಲಗುಂದ ಗುಡ್ಡದ ವಿರಕ್ತಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ರೈತ ನಾನು ಬೆಳೆದ ಬೆಳೆಗೆ ಬೆಲೆ ನಿಗ ಮಾಡುವ ಹಕ್ಕು ಹೊಂದರಿರುವುದು ಶೋಚನೀಯ ಸ್ಥಿತಿಯಾಗಿದೆ. ಸೈನಿಕ್ ಕೀಟದಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ನಾಶವಾಗಿದೆ. ಈ ವಿಚಾರದಲ್ಲಿ ರಾಜಕಾರಣಿಗಳು ನಿರ್ಲಕ್ಷ ವಹಿಸದೇ ತಕ್ಷಣವೇ ಸ್ಪಂದಿಸಬೇಕು. ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ಘೋಷಿಸಬೇಕೆಂದು ಆಗ್ರಹಿಸಿದರು.
Related Articles
ಸ್ಥಳಕ್ಕೆ ಉಪವಿಭಾಗಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಕçಷಿ ಉಪನಿರ್ದೇಶಕ ಸದಾಶಿವಪ್ಪ, ತಹಶೀಲ್ದಾರ್ ಗುರುಬಸವರಾಜ್ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಆಗಮಿಸಿ ಮನವಿ ಸ್ವೀಕರಿಸಿದರು.
Advertisement
ವಿವಿಧ ಮಠಾಧೀಶರಾದ ಮಲ್ಲಿಕಾರ್ಜುನ ಸ್ವಾಮೀಜಿ, ವೀರಭದ್ರ ಸ್ವಾಮೀಜಿ, ರೈತ ಮುಖಂಡರಾದ ಯಡಿಹಳ್ಳಿ ರಾಜ್‌ಶಂಕರ, ಯಡಿಹಳ್ಳಿ ಶೇಖರಪ್ಪ, ಚಿರಸ್ತಹಳ್ಳಿ ಗ್ರಾಪಂ ಅಧ್ಯಕ್ಷ ಕೆ.ಸಿದ್ದಲಿಂಗಪ್ಪ, ಜಿಪಂ ಮಾಜಿ ಸದಸ್ಯ ಈಶ್ವರಪ್ಪ, ಗುಡಿಹಳ್ಳಿ ಹಾಲೇಶ, ಕಬ್ಬಳ್ಳಿ ಬಸವರಾಜ್, ಕರಿಬಸಪ್ಪ, ತೆಲಿಗಿ ಬಸವರಾಜ್, ಸುರೇಶಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.