ಕೊಪ್ಪಳ: ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಸಿಡಬ್ಲ್ಯೂಸಿಯಲ್ಲಿ ನಿರ್ಧರಿಸುತ್ತೆ ಸದ್ಯಕ್ಕೆ ಸಚಿವ ಸಂಪುಟ ಹಾಗೂ ಅಧ್ಯಕ್ಷರ ಬದಲಾವಣೆ ಇಲ್ಲ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಂ ರೇವಣ್ಣ ಹೇಳಿಕೆ ನೀಡಿದ್ದಾರೆ.
ಶನಿವಾರ ಕೊಪ್ಪಳದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಗ್ಯಾರಂಟಿ ಯೋಜನೆಯಿಂದ ಸ್ವಲ್ಪ ಮಟ್ಟಿಗೆ ಅಭಿವೃದ್ದಿಗೆ ಕುಂಠಿತವಾಗಿರಬಹುದು ಆದರೆ ಯಾವುದೇ ಅಭಿವೃದ್ದಿ ಕಾರ್ಯ ನಿಲ್ಲಲ್ಲ, ಯಾವುದು ಕುಂಠಿತವಾಗುವುದಿಲ್ಲ ಅಲ್ಲದೆ ಗ್ಯಾರಂಟಿ ಹಣ ಅಭಿವೃದ್ದಿಯಾಗಿ ಜೆಡಿಪಿ ಹೆಚ್ಚಳವಾಗಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಯಲ್ಲಿ ಸಣ್ಣಪುಟ್ಟ ಬದಲಾವಣೆಯ ಚರ್ಚೆ ನಡೆಯುತ್ತಿದೆ ಆದರೆ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡುತ್ತಿಲ್ಲ ಎಂದು ಹೇಳಿದ ಅವರು ಶಕ್ತಿ ಯೋಜನೆಗೆ, ಸಾರಿಗೆ ನಿಗಮಕ್ಕೆ ಪೂರ್ಣ ಹಣ ಬಿಡುಗಡೆ ಮಾಡಿದೆ, ಗ್ಯಾರಂಟಿ ಬಗ್ಗೆ ಬಿಜೆಪಿ ಸುಳ್ಳು ಹೇಳುತ್ತಿದೆ, ಬಿಜೆಪಿಯವರು ಸುಳ್ಳು ಹೇಳುವದರಲ್ಲಿ ನಿಸ್ಸೀಮರು ಎಂದು ಹೇಳಿದರು.
ಹಾಸನ ಸಿದ್ದರಾಮೋತ್ಸವಕ್ಕೆ ಅನಾಮದೇಯ ಪತ್ರದ ವಿಚಾರವಾಗಿ ಮಾತನಾಡಿದ ಅವರು ಪಕ್ಷದ ಚಿನ್ಹೆಯಡಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಸಾರಿಗೆ ನಿಗಮಕ್ಕೆ 5900 ಕೋಟಿ ರೂಪಾಯಿ ಹಿಂದಿನ ಬಿಜೆಪಿ ಸರಕಾರದಲ್ಲಿ ಕೊರತೆಯಾಗಿದೆ ಅಲ್ಲಿ ಆಡಳಿತಾತ್ಮಕ ತೊಂದರೆಯಾಗಿದೆ ನಾವು ಪಂಚ ಗ್ಯಾರಂಟಿಗಳು ಫಲಾನುಭವಿಗಳಿಗೆ ತಲುಪಿಸಿದ್ದೇವೆ, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ನ ಹೊಸ ಯೋಜನೆ ಅಲ್ಲ ಇಂದಿರಾ ಗಾಂಧಿ ಕಾಲದಿಂದಲೂ ಜನರಿಗೆ ಯೋಜನೆ ಕೊಡುತ್ತಾ ಬಂದಿದೆ. ಹಿಂದೆ ಗರೀಬಿ ಹಠಾವೊ ಕಾರ್ಯಕ್ರಮ ತಂದಿದೆ, 20 ಅಂಶಗಳು ಕಾರ್ಯಕ್ರಮಗಳು ಜಾರಿಗೆ ತಂದಿದೆ, ಉದ್ಯೋಗ ಖಾತ್ರಿ ಯೋಜನೆ ತಂದಿದೆ. ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 168 ಭರವಸೆ ನೀಡಿದ್ದರು, ಅನ್ನಭಾಗ್ಯದಿಂದ ಸಿದ್ದರಾಮಯ್ಯನವರ ಹೆಸರು ಅನ್ನರಾಮಯ್ಯ ಎಂದಾಗಿದೆ. ನಾವು ಕೊಟ್ಟ ಯೋಜನೆ ಬಿಜೆಪಿ ಕಿತ್ತುಕೊಂಡಿದ್ದಾರೆ. ನಾವು ಗ್ಯಾರಂಟಿ ಕಾರ್ಡ್ ಕೊಟ್ಟ ಪರಿಣಾಮ 136 ಸ್ಥಾನಗಳಲ್ಲಿ ಗೆದ್ದಿದ್ದೇವೆ, 336 ಕೋಟಿ ಮಹಿಳೆಯರು ಶಕ್ತಿ ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಈ ಯೋಜನೆಯಡಿ 8142 ಕೋಟಿ ಖರ್ಚಾಗಿದೆ ಈ ಹಣವನ್ನು ವಿವಿಧ ನಿಗಮಕ್ಕೆ ನೀಡಿದ್ದೇವೆ. ಗೃಹಲಕ್ಷ್ಮಿಯಡಿ ಶೇ. 98 ರಷ್ಟು ಪ್ರಗತಿ ಕಂಡಿದೆ, ಗೃಹಜ್ಯೋತಿಯಡಿ 1.64 ಕೋಟಿ ಕುಟುಂಬಕ್ಕೆ ಮನೆಗೆ ಜೀರೋ ವಿದ್ಯುತ್ ಬಿಲ್ಲು ಬಂದಿದೆ, ನಮ್ಮ ಯೋಜನೆಗಳು ಮದ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ತಲುಪಿವೆ. ಯುವನಿಧಿ ಯೋಜನೆಯಡಿ 1.80 ಫಲಾನುಭವಿಗಳಿದ್ದಾರೆ ಅವರಿಗಡ ಕೌಶಲ್ಯಾಭಿವೃದ್ದಿ ತರಬೇತಿ ನೀಡಲಾಗಿದೆ. ಇದರ ನಡುವೆ ಪ್ರಧಾನಿ ಮೋದಿಯವರು ಗ್ಯಾರಂಟಿ ಯೋಜನೆಗಳಿಂದ ದಿವಾಳಿ ಆಗುತ್ತೆ ಎಂದರು ಆದರೆ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಯೋಜನೆಗೆ 52 ಸಾವಿರ ಕೋಟಿ ರೂ. ಮೀಸಲಿಟ್ಟಿದೆ ಉಳ್ಳವರು ಹಾಗು ವಿರೋಧ ಪಕ್ಷದವರು ನಮ್ಮ ಗ್ಯಾರಂಟಿ ಬಗ್ಗೆ ಮಾತನಾಡುತ್ತಿದ್ದಾರೆ.
ಗ್ಯಾರಂಟಿಗೆ ಎಸ್ ಸಿಪಿ ಹಾಗು ಟಿಎಸ್ ಪಿ ಹಣ ಬಳಕೆ ನಾವು ಮಾಡಿಲ್ಲ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರ್ಕಾರ ಗ್ಯಾರಂಟಿ ಗೆ ಬಳಕೆ ಮಾಡಿದ ಹಣ ಪತ್ರ ಬಿಡುಗಡೆ ಮಾಡಲಿದೆ ಎಂದು ಹೇಳಿದರು.
ಇದನ್ನೂ ಓದಿ: ತನಿಖೆಗೆ ನನ್ನ ಸಹಕಾರವಿದೆ… ಈ ವಿಚಾರದಲ್ಲಿ ಪತ್ನಿ ಹೆಸರು ತರಬೇಡಿ: ರಾಜ್ ಕುಂದ್ರಾ