Advertisement

“ರಾಜ್ಯಪಾಲರೇ ಕುಲಾಧಿಪತಿ’ವ್ಯವಸ್ಥೆಯನ್ನು ರಾಜ್ಯಗಳು ಪಾಲಿಸಬೇಕು: ಸಚಿವ ಪ್ರಧಾನ್‌

10:21 PM Jul 04, 2022 | Team Udayavani |

ಹೈದರಾಬಾದ್‌: ರಾಜ್ಯಪಾಲರೇ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಯಾಗಿ ಕಾರ್ಯನಿರ್ವಹಿಸುವಂಥ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದ್ದು, ಎಲ್ಲ ರಾಜ್ಯ ಸರ್ಕಾರಗಳು ಅದನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಸಲಹೆ ನೀಡಿದ್ದಾರೆ.

Advertisement

ಪಶ್ಚಿಮ ಬಂಗಾಳದಲ್ಲಿ ಕುಲಾಧಿಪತಿ ಸ್ಥಾನವನ್ನು ಈಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಲಂಕರಿಸಿದ್ದು, ತೆಲಂಗಾಣ ಸೇರಿದಂತೆ ಇನ್ನೂ ಕೆಲವು ರಾಜ್ಯಗಳೂ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿವೆ. ಈ ಹಿನ್ನೆಲೆಯಲ್ಲಿ ಪ್ರಧಾನ್‌ ಹೇಳಿಕೆ ಮಹತ್ವ ಪಡೆದಿದೆ.

ಹೈದರಾಬಾದ್‌ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಪ್ರಧಾನ್‌, ಆರಂಭದಿಂದಲೂ ರಾಷ್ಟ್ರಪತಿಯವರು ರಾಷ್ಟ್ರೀಯ ಸಂಸ್ಥೆಗಳ ಕುಲಾಧಿಪತಿಗಳಾಗಿಯೂ, ರಾಜ್ಯಪಾಲರು ರಾಜ್ಯ ವಿವಿಗಳ ಕುಲಾಧಿಪತಿಗಳಾಗಿಯೂ ಕಾರ್ಯನಿರ್ವಹಿಸುವ ವ್ಯವಸ್ಥೆ ಇದೆ. ಇದೊಂದು ಸೂಕ್ತ ವ್ಯವಸ್ಥೆಯಾಗಿದ್ದು, ಇದನ್ನು ಬದಲಿಸಲು ಹೋಗಬಾರದು.

ರಾಜ್ಯಗಳು ಕೂಡ ಹಳೆಯ ವ್ಯವಸ್ಥೆಯನ್ನೇ ಪಾಲಿಸಬೇಕು. ರಾಜಕೀಯ ಕಾರಣಕ್ಕಾಗಿ ಕೆಲವರು ಇದನ್ನು ಬದಲಿಸಲು ಹೊರಟಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next