Advertisement

ಬಯಸಿದರೆ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ : ಕೇಂದ್ರ ಸರಕಾರ

07:00 PM Dec 20, 2021 | Team Udayavani |

ನವದೆಹಲಿ : ರಾಜ್ಯ ಸರಕಾರಗಳು ಬಯಸಿದರೆ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಗೆ ಅವಕಾಶ ನೀಡಬಹುದು ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ತಿಳಿಸಿದೆ.

Advertisement

ಕೆಳಮನೆಯಲ್ಲಿ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಶಿಕ್ಷಣ ಸಚಿವೆ ಅನ್ನಪೂರ್ಣ ದೇವಿ, ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಮಕ್ಕಳಿಗೆ ಪ್ರಾದೇಶಿಕ ಭಾಷೆಯ ಶಿಕ್ಷಣವನ್ನು ಕಡ್ಡಾಯಗೊಳಿಸಲಾಗಿದೆ. ಶಿಕ್ಷಣವು (ಸಂವಿಧಾನ) ಸಮಕಾಲೀನ ಪಟ್ಟಿಯಲ್ಲಿ ಬರುತ್ತದೆ. ರಾಜ್ಯಗಳು ಬಯಸಿದರೆ, ಅವರು ಭಗವತ್ಗೀತೆಯನ್ನು ಪಠ್ಯಕ್ರಮದಲ್ಲಿ ಸೇರಿಸಬಹುದು ಎಂದರು.

”ಸಿಬಿಎಸ್‌ಇ ಮಾದರಿಯಡಿ, ಭಗವದ್ಗೀತೆಯನ್ನು ಈಗಾಗಲೇ ವಿವಿಧ ತರಗತಿಗಳಲ್ಲಿ ಕಲಿಸಲಾಗುತ್ತಿದೆ. ರಾಜ್ಯಗಳು ಬಯಸಿದರೆ ಅವರು ಭಗವದ್ಗೀತೆಯನ್ನು ಸೇರಿಸಬಹುದು, ”ಎಂದು ಸಚಿವರು ಪ್ರಶ್ನೋತ್ತರ ಅವಧಿಯಲ್ಲಿ ಸದನಕ್ಕೆ ತಿಳಿಸಿದರು.

ದೇಶಾದ್ಯಂತ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆಗೆ ನಿಬಂಧನೆಗಳನ್ನು ತರಲು ಸರ್ಕಾರವು ಪರಿಗಣಿಸುತ್ತಿದೆಯೇ ಎಂದು ಉತ್ತರ ಮುಂಬೈನ ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಅವರ ಪ್ರಶ್ನೆಗೆ ಸಚಿವೆ ಉತ್ತರಿಸಿದರು.

ಪ್ರಶ್ನೆಯನ್ನು ಕೇಳುವಾಗ, ಗೋಪಾಲ್ ಶೆಟ್ಟಿ ಅವರು ಕಾಂಗ್ರೆಸ್ ಸದಸ್ಯರು ಭಗವದ್ಗೀತೆಯನ್ನು ಓದುವಂತೆ ಸಲಹೆ ನೀಡಿದರು. ಇದರಿಂದ ಅವರು ಒಳ್ಳೆಯ ಕೆಲಸ ಮಾಡುವ ಬುದ್ಧಿವಂತಿಕೆಯನ್ನು ಪಡೆಯುತ್ತಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next