Advertisement

ಶಿಶುಪಾಲನೆಗಾಗಿ “ವಿಧುರ’ಪುರುಷನಿಗೆ ರಜೆ?

09:56 PM Dec 29, 2022 | Team Udayavani |

ಸುವರ್ಣ ವಿಧಾನಸೌಧ: ಶಿಶುಪಾಲನಾ ರಜೆಯನ್ನು ಸರ್ಕಾರಿ ಮಹಿಳಾ ಅಧಿಕಾರಿಗೆ ನೀಡುವಂತೆ ಪತ್ನಿ ಮೃತಪಟ್ಟ ಪುರುಷರಿಗೂ ಪರಿಗಣಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

Advertisement

ವಿಧಾನ ಪರಿಷತ್ತಿನಲ್ಲಿ ಗುರುವಾರ ಪ್ರಶ್ನೋತ್ತರ ವೇಳೆ ಸದಸ್ಯ ನಸೀರ್‌ ಅಹಮದ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಹಿಳಾ ಸರ್ಕಾರಿ ನೌಕರರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮದನ್ವಯ ಪ್ರಸೂತಿಗೆ ರಜೆಯ ಆರಂಭದ ದಿನದಿಂದ 180 ದಿನಗಳವರೆಗೆ ಮಂಜೂರು ಮಾಡಲು ಅವಕಾಶ ನೀಡಲಾಗಿದೆ. ಇದೇ ನಿಯಮವನ್ನು “ವಿದುರ’ ಅಂದರೆ ಪತ್ನಿ ಮೃತಪಟ್ಟ ಪುರುಷ ಸರ್ಕಾರಿ ನೌಕರರಿಗೂ ಅವಕಾಶ ಕಲ್ಪಿಸಬೇಕು. ಈ ಮೂಲಕ ಶಿಶು ಪಾಲನೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿದರು.

ಪತ್ನಿಯ ಹೆರಿಗೆ ಕಾಲದಲ್ಲಿ ಎರಡು ಮಕ್ಕಳ ಪ್ರಸೂತಿಗೆ ಪ್ರತಿ ಬಾರಿಗೆ 15 ದಿನಗಳ ಪಿತೃತ್ವ ರಜೆಯನ್ನು ನೀಡಲಾಗುವುದು. ಇನ್ನು ಹೆರಿಗೆ ಸಮಯದಲ್ಲಿ ಪತ್ನಿ ಮೃತವಾದರೂ, ಪತಿಗೂ ರಜೆ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಚಾಲ್ತಿಯಲ್ಲಿರುವ ಪ್ರಸೂತಿ ರಜೆಯೊಂದಿಗೆ ಒಟ್ಟು ಸೇವಾವಧಿಯಲ್ಲಿ ಆರು ತಿಂಗಳ ಕಾಲ ಮಕ್ಕಳ ಆರೈಕೆ ರಜೆ ನೀಡಲಾಗಿದೆ. ಶಿಶುಪಾಲನಾ ರಜೆಯನ್ನು ಮಹಿಳಾ ನೌಕರರಿಗೆ ಗರಿಷ್ಠ ಆರು ತಿಂಗಳವರೆಗೆ ಅವರ ಮಕ್ಕಳ ಸಂಖ್ಯೆಯನ್ನು ಪರಿಗಣಿಸಿದೆ. ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಮಾತ್ರ ಮಂಜೂರು ಮಾಡಬಹುದಾಗಿದೆ. ಮಹಿಳೆಯರು ಹೆಚ್ಚಾಗಿ ಮಕ್ಕಳ ಪರೀûಾ ಸಮಯದಲ್ಲೇ ರಜೆ ಪಡೆಯುತ್ತಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next