Advertisement

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌

02:03 AM Jul 27, 2024 | Team Udayavani |

ಹೊಸದಿಲ್ಲಿ: ಕೇರಳ, ಪಶ್ಚಿಮ ಬಂಗಾಲ ಸರಕಾರ, ರಾಜ್ಯ ಪಾಲರ ನಡುವಿನ ಜಗಳ ಮತ್ತೆ ಮುನ್ನೆಲೆಗೆ ಬಂದಿದೆ. ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಮತ್ತು ಪಶ್ಚಿಮ ಬಂಗಾಲ ರಾಜ್ಯ ಪಾಲ ಸಿ.ವಿ.ಆನಂದ ಬೋಸ್‌ ಪ್ರಮುಖ ಮಸೂದೆಗಳಿಗೆ ಸಹಿ ಹಾಕದೆ 8 ತಿಂಗಳಿಂದ ಕಡತಗಳನ್ನು ಇರಿಸಿಕೊಂಡಿರುವ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರಕಾರ ಹಾಗೂ ಎರಡೂ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ರಾಜ್ಯಪಾಲರ ಕಾರ್ಯದರ್ಶಿಗಳಿಗೆ ನೋಟಿಸ್‌ ಜಾರಿ ಮಾಡಿದೆ. ಅದಕ್ಕೆ ಉತ್ತರಿಸಲು 3 ವಾರಗಳ ಕಾಲಾವಕಾಶ ನೀಡಿದೆ.

Advertisement

ಕೇರಳ ಸರಕಾರದ ಪರ ಹಿರಿಯ ನ್ಯಾಯವಾದಿ ಕೆ.ಕೆ.ವೇಣುಗೋಪಾಲ್‌, ರಾಜ್ಯಪಾಲರು ಕೆಲವು ಮಸೂದೆ ಗ ಳನ್ನು ರಾಷ್ಟ್ರಪತಿಗಳಿಗೆ ಕಳುಹಿಸಿಕೊಟ್ಟಿದ್ದಾರೆ. 8 ತಿಂಗಳಿಂದ ಅನುಮೋದನೆಗೊಂಡ ಮಸೂ ದೆಗಳಿಗೆ ಸಹಿ ಹಾಕಿಲ್ಲ. ಇದು ಸಂವಿಧಾನ ವಿರೋಧಿ ಎಂದು ಆರೋಪಿಸಿದರು.

ಪಶ್ಚಿಮ ಬಂಗಾಲ ಪರ ವಾದಿಸಿದ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂ Ì, ರಾಜ್ಯಪಾಲ ಆನಂದಬೋಸ್‌ ವಿಧಾನಸಭೆಯಲ್ಲಿ ಅನುಮೋದನೆಗೊಂಡ ಕಡತಗಳಿಗೆ ಸಹಿ ಹಾಕಿಲ್ಲ. ಕೋರ್ಟ್‌ ವಿಚಾರಣೆ ನಡೆದ ಸಂದರ್ಭದಲ್ಲಿ ಮಾತ್ರ ಕೆಲವು ಕಡತಗಳಿಗೆ ಸಹಿ ಬೀಳುತ್ತದೆ ಎಂದು ಟೀಕಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next