Advertisement
ಚಿಕ್ಕಮಗಳೂರಿನ ಬಾಸಪುರದಲ್ಲಿ ಹೇಳಿಕೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಪೊಲೀಸರ ವಿರುದ್ದ ಹರಿಹಾಯ್ದು, ಆಗಸ್ಟ್ 26 ರಂದು ಎಸ್ ಪಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು, ಎಸ್ ಪಿ ಗೆ ಯಾವ ರೋಗ ಬಂದಿತ್ತು, ಒಂದು ಕಡೆ ಕಪ್ಪು ಬಟ್ಟೆ ಪ್ರದರ್ಶನ ಮಾಡಿದ ನಂತರ ಇನ್ನೂ ಮೂರು ಕಡೆ ತಡೆಯಬಹುದಿತ್ತು. ಸಿಎಂ ಬಂದಾಗ ಈ ರೀತಿಯ ಘಟನೆಯಾದರೆ ಮುನ್ನೆಚ್ಚರಿಕೆಯಿಂದ ಬಂಧಿಲಾಗುತ್ತಿತ್ತು ಎಂದರು.
Related Articles
Advertisement
ಸಿದ್ದರಾಮಯ್ಯ ಅವರಿಗೆ ಇಂದು ಎಸ್ ಪಿ ಉಮಾ ಪ್ರಶಾಂತ್ ಅವರೇ ಬಂದೋಬಸ್ತ್ ನೇತೃತ್ವ ವಹಿಸಿದ್ದು, ವಾಹನದ ಮುಂದೆ ಎಸ್ ಪಿ ವಾಹನ ಎಸ್ಕಾರ್ಟ್ ನೀಡುವ ಮೂಲಕ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕಪ್ಪು ಬಾವುಟ ಪ್ರದರ್ಶನ
ಕೊಪ್ಪ ತಾಲೂಕಿನ ಮಕ್ಕಿಕೊಪ್ಪ ಗ್ರಾಮದಲ್ಲಿ ಸಾವರ್ಕರ್ ಬಗ್ಗೆ ಹೇಳಿಕೆಗೆ ಹಿಂದೂ ಪರ ಸಂಘಟನೆಗಳು ಕಿಡಿಕಾರಿದ್ದು, ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ನಿನ್ನೆ ಗೋ ಬ್ಯಾಕ್ ಸಿದ್ದು ಅಭಿಯಾನ ಆರಂಭಿಸಿದ್ದ ಸಂಘಟನೆಗಳು, ”ಹಿಂದೂ ವಿರೋಧಿ ಸಿದ್ದು ಈ ಪುಣ್ಯ ಭೂಮಿಗೆ ಬರೋದು ಬೇಡ” ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ. ಕಾರಿಗೆ ಮುತ್ತಿಗೆ ಹಾಕುವ ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದು, ಕಪ್ಪು ಬಟ್ಟೆ, ಬಿಜೆಪಿ ಶಾಲು, ಸಾವರ್ಕರ್ ಪೋಟೊ ಹಿಡಿದು ಘೊಷಣೆ ಕೂಗಿ ಆಕ್ರೋಶ ಹೊರ ಹಾಕಲಾಗಿದೆ.
ರಸ್ತೆ ಮಧ್ಯೆ ತಳ್ಳಾಟ ನೂಕಾಟ
ಶೃಂಗೇರಿ ಸಮಿಪದ ಮೆಣಸೆ ಗ್ರಾಮದಲ್ಲಿ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರಿಂದ ಮುತ್ತಿಗೆ ಯತ್ನ ಮಾಡಲಾಗಿದ್ದು, ಕಾಂಗ್ರೆಸ್ ರ್ಯಕರ್ತರು ತಡೆದಿದ್ದಾರೆ. ರಸ್ತೆ ಮಧ್ಯೆ ಎರಡು ಪಕ್ಷದ ಕಾರ್ಯಕರ್ತರ ಮುಖಾಮುಖಿಯಾಗಿದ್ದು, ಎಎಸ್ಪಿ ಎದುರೇ ಎರಡು ಪಕ್ಷದವರಿಂದ ಪರಸ್ಪರ ರಸ್ತೆ ಮಧ್ಯೆ ತಳ್ಳಾಟ ನೂಕಾಟ ನಡೆದಿದೆ.ಹಗ್ಗದ ಮೂಲಕ ಎರಡೂ ಪಕ್ಷದ ಕಾರ್ಯಕರ್ತರನ್ನು ಕೈಕೈ ಮಿಲಾಯಿಸುವುದನ್ನು ತಡೆಯಲು ಯತ್ನಿಸಿದ ಪೊಲೀಸರು.ಬಿಜೆಪಿ ಕಾರ್ಯಕರ್ತರನ್ನು ಅರ್ಥ ಕಿ.ಮೀ.ವರೆಗೆ ತಳ್ಳಿಕೊಂಡು ಬಂದ ಕಾಂಗ್ರೆಸ್ ಕಾರ್ಯಕರ್ತರು.
ಕೆಲ ಹೊತ್ತು ಟ್ರಾಫಿಕ್ ಜಾಮ್ಪೊಲೀಸರು ಪೊಲೀಸ್ ವಾಹನ ಇದ್ದರೂ ಪ್ರತಿಭಟನಾಕಾರರನ್ನು ಬಂಧಿಸಲಿಲ್ಲ.ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.