Advertisement
ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಸೂಕ್ತ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಂಡು ಕೃಷಿ ಸಂಬಂಧಿತ ಕಾರ್ಯಚಟುವಟಿಕೆಗಳನ್ನು ನಡೆಸುವಂತೆ ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.
Related Articles
Advertisement
– ರಸಗೊಬ್ಬರ, ಕ್ರಿಮಿನಾಶಕ, ಬೀಜ ಉತ್ಪಾದನೆ, ವಿತರಣೆ ಹಾಗೂ ಮಾರಾಟಕ್ಕೆ ಅವಕಾಶ.
– ಕಂಬೈನ್ ಹಾರ್ವೆಸ್ಟರ್ ಮಾದರಿಯಲ್ಲಿ ಕೃಷಿ ತೋಟಗಾರಿಕೆ ಯಂತ್ರಗಳ ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲೆ ಸಾಗಾಟಕ್ಕೆ ಅನುಮತಿ.
– ಹಾಲು ಸಂಗ್ರಹ, ಸಂಸ್ಕರಣೆ, ವಿತರಣೆ ಹಾಗೂ ಮಾರಾಟಕ್ಕೆ ಅವಕಾಶ.
– ಹಾಲು, ಹಾಲಿನ ಉತ್ಪನ್ನಗಳ ಸಂಸ್ಕರಣೆ ಹಾಗೂ ಸಾಗಾಟಕ್ಕೆ ಅವಕಾಶ.
– ಕೋಳಿ, ಕುರಿ ಸಾಕಾಣಿಕೆ ಸೇರಿ ಫಾರ್ಮ್ ಗಳ ಕಾರ್ಯನಿರ್ವಹಣೆಗೆ ಅನುಮತಿ.
– ಪಶು ಆಹಾರ ಉತ್ಪಾದನೆ ಹಾಗೂ ಕಚ್ಚಾವಸ್ತುಗಳ ಸಾಗಾಟಕ್ಕೆ ಅವಕಾಶ.
– ಗೋ ಶಾಲೆ ಸಹಿತ ಪಶು ಆಶ್ರಯ ಕೇಂದ್ರಗಳ ಕಾರ್ಯನಿರ್ವಹಣೆಗೆ ಅವಕಾಶ.
– ಟೀ, ಕಾಫಿ ಮತ್ತು ರಬ್ಬರ್ ಪ್ಲಾಂಟೇಶನ್ ಗಳಿಗೆ ಗರಿಷ್ಠ ಶೇ.50ರಷ್ಟು ಕೆಲಸಗಾರರಿಗೆ ಅವಕಾಶ.
– ಟೀ, ಕಾಫಿ, ರಬ್ಬರ್ ಮತ್ತು ಗೋಡಂಬಿ ಪ್ಯಾಕೇಜ್, ಮಾರಾಟ ಹಾಗೂ ಮಾರ್ಕೆಟಿಂಗ್ ಗೆ ಅವಕಾಶ.
ಕರಾವಳಿ ಭಾಗದಲ್ಲಿ ಮೀನುಗಾರಿಕೆ ಚಟುವಟಿಕೆಗಳಿಗೂ ಲಾಕ್ ಡೌನ್ ನಿಂದ ವಿನಾಯಿತಿಯನ್ನು ನೀಡಲಾಗಿದೆ.
– ಮೀನುಗಾರಿಕೆ, ಪ್ಯಾಕೇಜಿಂಗ್, ಮೀನು ಮಾರಾಟ ಮತ್ತು ಮಾರ್ಕೆಟಿಂಗ್ ಗೆ ಅವಕಾಶ.
– ಮೀನು ಉತ್ಪನ್ನಗಳ ಮಾರಾಟ ಹಾಗೂ ನೌಕರರ ಓಡಾಟಕ್ಕೆ ಅವಕಾಶ.