Advertisement

ಆರೋಪಿಗಳ ಸ್ಥಳಾಂತರದಲ್ಲಿ ಅಧಿಕಾರಿ ಕೈವಾಡ

02:00 PM Apr 25, 2020 | mahesh |

ಮೈಸೂರು: ಕೋವಿಡ್ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಗಂಭೀರತೆ ಇಲ್ಲ. ಪಾದರಾಯನಪುರ ಆರೋಪಿಗಳನ್ನು ರಾಮನಗರ ಜೈಲಿಗೆ ಕಳುಹಿಸಿ ಎಡವಟ್ಟು ಮಾಡಿದೆ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಕಿಡಿಕಾರಿದರು. ನಗರದ ವಿದ್ಯಾರಣ್ಯ ಆಸ್ಪತ್ರೆಗೆ ಭೇಟಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ್ದ ಶ್ರೀರಂಗಪಟ್ಟಣ ತಾಲೂಕು ಹುರುಳಿ ಕ್ಯಾತನಹಳ್ಳಿಯ ಆಶಾ ಕಾರ್ಯಕರ್ತೆ ಮೀನಾಕ್ಷಮ್ಮ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಮನಗರ ಗ್ರೀನ್‌ ಝೊನ್‌ನಲ್ಲಿತ್ತು. ಈಗ ಪಾದರಾಯನಪುರದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸದೆ ರಾಮನಗರ ಜೈಲಿನಲ್ಲಿ ಇಟ್ಟಿದ್ದರಿಂದ ಹಲವರಿಗೆ ಸೋಂಕು ತಗುಲಿದೆ ಎಂದರು.

Advertisement

ಬಂದಿಖಾನೆ ಎಡಿಜಿಪಿ ಅಲೋಕ್‌ ಮೋಹನ್‌ ನನ್ನ ಮೇಲಿನ ದ್ವೇಷಕ್ಕೆ ಈ ರೀತಿ ಮಾಡಿದ್ದಾರೆ ಅನ್ನಿಸುತ್ತದೆ. ನನ್ನ ಮೇಲಿನ ಕೋಪಕ್ಕೆ ನನ್ನ ಜನರಿಗೆ ತೊಂದರೆ ಕೊಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು. ನಾನೀಗಲೇ ಸಿಎಂ, ಗೃಹ ಸಚಿವರಿಗೆ ಹೇಳಿದ್ದೇನೆ. ನಾನು ಸಿಎಂ ಆಗಿದ್ದ ಅವಧಿಯಲ್ಲಿ ಅಲೋಕ್‌ ಮೋಹನ್‌ ಬೆಂಗಳೂರು ನಗರ ಆಯುಕ್ತರ ಹುದ್ದೆ ಮೇಲೆ ಕಣ್ಣಿಟ್ಟಿದ್ದರು. ಈ ವ್ಯಕ್ತಿಯ ಇತಿಹಾಸ ತಿಳಿದೇ ನಾನು ಅವಕಾಶ ಕೊಟ್ಟಿರಲಿಲ್ಲ. ಇಂತಹ ಅಧಿಕಾರಿಗಳಿಂದಲೇ ಸರ್ಕಾರ ಸಾರ್ವಜನಿಕವಾಗಿ ಪದೇ ಪದೇ ಮುಜುಗರ ಅನುಭವಿಸುತ್ತದೆ. ಇದು ಹೀಗೆಯೇ ಮುಂದುವರಿದರೆ ಸರ್ಕಾರಕ್ಕೆ ನೀಡಿರುವ ಬೆಂಬಲ ನಿಲ್ಲಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಅಧಿಕಾರಿಗಳು ಸಂತ್ರಸ್ತೆಯನ್ನು ದೂರು ಕೊಡದಂತೆ ತಡೆಯಲು ಮುಂದಾಗಿದ್ದರು. ತಪ್ಪಿತಸ್ಥರ ವಿರುದಟಛಿ ಕ್ರಮ ಜರುಗಿಸದೆ ರಾಜಿ ನಡೆಸಲು ಏಕೆ ಮುಂದಾಗಿದ್ದರು. ಇಡೀ
ಪ್ರಕರಣದಲ್ಲಿ ರಾಜಕಾರಣ ಸುಳಿದಿದೆ. ಸದ್ಯ ಸಂತ್ರಸ್ತೆ ಮಾನಸಿಕ ಒತ್ತಡದಿಂದ ಹೊರಗೆ ಬಂದಿಲ್ಲ. ಅವರು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದರು. ಸರ್ಕಾರಗಳ ಆದೇಶ ಕೇವಲ ಮಾತಿನಲ್ಲಿದೆ. ತಪ್ಪಿತಸ್ಥರ ವಿರುದಟಛಿ ಹೆಡೆಮುರಿ ಕಟ್ಟುತ್ತೇವೆ ಎನ್ನುವುದು ಎಲ್ಲಿಗೆ ಹೋಯಿತು? ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ಪ್ರಕರಣ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.

ಮೀನಾಕ್ಷಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ಆದೇಶ ಧಿಕ್ಕರಿಸಲಾಗಿದೆ. ಮೇ 3 ರವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಸೂಚಿಸಲಾಗಿತ್ತು. ಆದರೂ ಠಾಣೆ ಜಾಮೀನಿನ
ಮೇಲೆ ಬಿಡುಗಡೆ ಮಾಡಿರುವುದು ಸರಿಯಲ್ಲ. ಈ ವಿಷಯದಲ್ಲಿ ಸರ್ಕಾರಕ್ಕೆ ಗಂಭೀರತೆ ಇಲ್ಲ ಎನ್ನುವುದು ತೋರುತ್ತದೆ. ವಿರೋಧ ಪಕ್ಷವಾಗಿ ಇಂತಹ ಸಂದರ್ಭದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ
ಸಿಲುಕಿಸಬಾರದು ಎಂದು ಸುಮ್ಮನಿದ್ದೇವೆ. ಆದರೆ ಸರ್ಕಾರ ನಮ್ಮ ನಡೆಯನ್ನು ದೌರ್ಬಲ್ಯ ಎಂದು ಭಾವಿಸಬಾರದು. ಪದೇ ಪದೇ ತಪ್ಪು ಮಾಡಿದರೆ ವಿರೋಧ ಪಕ್ಷವಾಗಿ ಕಠಿಣವಾಗಿ
ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆರೋಪಿಗಳ ಸ್ಥಳಾಂತರ ತಪ್ಪು: ಯತೀಂದ್ರ
ಮೈಸೂರು: ಗ್ರೀನ್‌ ಝೊನ್‌ ಆಗಿರುವ ರಾಮನಗರ ಕಾರಾಗೃಹಕ್ಕೆ ಪಾದರಾಯನಪುರ ಗಲಭೆ ಆರೋಪಿಗಳನ್ನು ಸ್ಥಳಾಂತರ ಮಾಡಿರುವುದು ತಪ್ಪು ಎಂದು ವರುಣ ಕ್ಷೇತ್ರದ ಶಾಸಕ
ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಪಾದರಾಯನಪುರ ಗಲಭೆಕೋರರನ್ನ ರಾಮನಗರ ಕಾರಾಗೃಹಕ್ಕೆ ಸ್ಥಳಾಂತರ ಮಾಡುವ ಮುನ್ನ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿತ್ತು. ಅಲ್ಲದೆ ಸರ್ಕಾರ ಅಂತಹ ಆರೋಪಿಗಳನ್ನ ರೆಡ್‌ ಝೊàನ್‌ ವಲಯದಲ್ಲಿ ಇಟ್ಟಿದ್ದರೂ ಯಾವುದೇ ತೊಂದರೆಯಾಗುತ್ತಿರಲಿಲ್ಲ. ಪಾದರಾಯನಪುರ ಆರೋಪಿಗಳು ಉದ್ದೇಶಪೂರ್ವವಾಗಿ ಗಲಭೆ ಮಾಡಲು ಮುಂದಾಗಿರಲಿಲ್ಲ. ನಮಗೇನಾದರು ಆಗಬಹುದು ಎಂಬ ಆತಂಕದಿಂದ ಈ ರೀತಿ ನಡೆದುಕೊಂಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next