Advertisement

ಭರವಸೆ ಈಡೇರಿಸಿದೆ ರಾಜ್ಯ ಸರ್ಕಾರ: ಬಿ.ಸಿ. ಪಾಟೀಲ

02:13 PM Dec 06, 2017 | Team Udayavani |

ಹಿರೇಕೆರೂರ: ಆಧುನಿಕ ಬಸವಣ್ಣನಾಗಿ ಸಿಎಂ ಸಿದ್ದರಾಮಯ್ಯನವರು ಸಾಮಾಜಿಕ ಕ್ರಾಂತಿ ಮಾಡಿದ್ದಾರೆ. ಚುನಾವಣೆಗೂ ಮುನ್ನ ನೀಡಿದ್ದ ಭರವಸೆಗಳನ್ನು ಈಡೇರಿಸುವ ಮೂಲಕ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರದ ಗದ್ದುಗೆ ಏರಲಿದೆ ಎಂದು ಮಾಜಿ ಶಾಸಕ ಬಿ.ಸಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಕಾಂಗ್ರೆಸ್‌ ಸಮಿತಿಯಿಂದ ಏರ್ಪಡಿಸಲಾಗಿದ್ದ ಅಭಿನಂದನಾ ಸಮಾರಂಭ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾದ ಮೇಲೆ
ತಾಲೂಕಿನ ಜನತೆಯ ಪ್ರೀತಿಗಾಗಿ ನಾಲ್ಕು ಬಾರಿ ಪಟ್ಟಣಕ್ಕೆ ಆಗಮಿಸಿದ್ದಾರೆ. ತಾಲೂಕಿನ ಅಭಿವೃದ್ಧಿ ಜೊತೆಗೆ ರೈತರ ನೆರವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ದುರ್ಗಾದೇವಿ ಕೆರೆಗೆ, ಮದಗದ ಮಾಸೂರು ಕೆರೆ ತುಂಬಿಸುವುದು ಹಾಗೂ ಅಸುಂಡಿ ಏತ ನೀರಾವರಿ, ಮಡೂರು ಏತ ನೀರಾವರಿ, ಗುಡ್ಡದಮಾದಾಪುರ ಯೋಜನೆ ಮಂಜೂರು ಸೇರಿದಂತೆ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು 325 ಕೋಟಿ ರೂ.ಗಿಂತ ಹೆಚ್ಚು ಅನುದಾನ ನೀಡಿದ್ದಾರೆ. ಜನತೆಯ ಬಹುದಿನಗಳ ಬೇಡಿಕೆಯಾಗಿದ್ದ ರಟ್ಟಿàಹಳ್ಳಿ ತಾಲೂಕು ರಚನೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಯವರ ಕೆಲಸಕ್ಕೆ ಸಂತಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅಭಿವೃದ್ಧಿ ಪರ ಯೋಜನೆಗಳನ್ನು ಸಹಿಸಲಾರದೆ ಬಿಜೆಪಿಯವರು ಹತಾಶರಾಗಿ ಕಾಂಗ್ರೆಸ್‌ ನಾಯಕರ ಬಗ್ಗೆ ಟೀಕೆಗಳನ್ನು ಮಾಡುತ್ತಾ ಸಾಗುತ್ತಿದ್ದಾರೆ ಎಂದು ದೂರಿದರು. ಬಿಜೆಪಿ ನಾಯಕರಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಸಂಸ್ಕೃತಿಯನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ದೂರಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹಿರೇಕೆರೂರ ತಾಲೂಕಿನಿಂದ ಸ್ಪರ್ಧೆ ಮಾಡುವಂತೆ ಸಿಎಂ ಸಿದ್ದರಾಮಯ್ಯನವರಿಗೆ ಬಿ.ಸಿ. ಪಾಟೀಲ ಮನವಿ ಮಾಡಿದರು. ಈ ಭಾಗದಲ್ಲಿ ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತಿದ್ದು, ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ
ಬೆಂಬಲ ಬೆಲೆಯನ್ನು ನಿಗದಿ ಪಡಿಸಬೇಕು ಎಂದು ಸಿಎಂಗೆ ಮನವಿ ಮಾಡಿದರು. 

ಕೆಪಿಸಿಸಿ ಕಾರ್ಯಾಧ್ಯಕ್ಷ ಮಾಜಿ ಸಚಿವ ಎಸ್‌.ಆರ್‌. ಪಾಟೀಲ ಮಾತನಾಡಿ, ದೇಶದ ಭದ್ರತೆ ಐಕ್ಯತೆ ಅಖಂಡತೆ ಸಾರ್ವಭೌಮತ್ವಕ್ಕೆ ಕಾಂಗ್ರೆಸ್‌ ಕೊಡುಗೆ ಅಪಾರ. ಸ್ವತಂತ್ರ ಹೋರಾಟದಲ್ಲಿ ಕಾಂಗ್ರೆಸ್‌ ಪಾಲ್ಗೊಂಡು ಸ್ವತಂತ್ರ ಪಡೆಯುವಲ್ಲಿ ಪಾತ್ರವಹಿಸಿದೆ. ಆದರೆ ದೇಶಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ ಎಂದರು. ಮಾಜಿ ಶಾಸಕ ಬಿ.ಎಚ್‌. ಬನ್ನಿಕೋಡ ಮಾತನಾಡಿ, ಜನರ ಭಾವನೆಗಳಿಗೆ ಸ್ಪಂದಿಸದೆ ಮಾತಿನಲ್ಲೇ ಮಂಟಪ ಕಟ್ಟಿ ಆಳ್ವಿಕೆ ನಡೆಸುವುದು ಬಿಜೆಪಿಯದ್ದಾಗಿದೆ. ಸಿಎಂ ಸಿದ್ದರಾಮಯ್ಯನವರ ಕಾರ್ಯಗಳು ಐತಿಹಾಸಿಕವಾಗಿವೆ ಎಂದು ಬಣ್ಣಿಸಿದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಅವರಿಗೆ ಬೆಳ್ಳಿ ಗದೆ ನೀಡುವ ಮೂಲಕ ಅಭಿನಂದಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ, ಕೆಪಿಸಿಸಿ ಉಪಾಧ್ಯಕ್ಷ ಬೋಸರಾಜ, ಜಯಸಿಂಹ ಆಸ್ಕೊಡ, ಸುನೀಲ ಹಮ್ಮಣ್ಣನವರ, ಶಾಸಕರಾದ ಮನೋಹರ ತಹಶೀಲ್ದಾರ, ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಸದಸ್ಯರಾದ ಎಸ್‌.ಕೆ. ಕರಿಯಣ್ಣವರ, ಪ್ರಕಾಶ ಬನ್ನಿಕೋಡ, ಮಹದೇವಕ್ಕ ಗೋಪಕ್ಕಳ್ಳಿ, ರಾಘವೇಂದ್ರ ತಹಶೀಲ್ದಾರ, ಪ್ರಕಾಶ ಕೋಳಿವಾಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಆರ್‌.ಎನ್‌. ಗಂಗೋಳ, ಕರೇಗೌಡ ಸಣ್ಣಕ್ಕಿ, ಜಿ. ಶಿವನಗೌಡ್ರ, ಡಿ.ಸಿ. ಪಾಟೀಲ, ವನಜಾ ಪಾಟೀಲ, ಸೃಷ್ಟಿ ಪಾಟೀಲ, ಹನುಮಂತಪ್ಪ ಹಡಗದ, ಜಿ.ಪಿ. ಪ್ರಕಾಶ, ಆರ್‌.ವಿ. ಹಳ್ಳಪ್ಪಗೌಡ್ರ, ಸತೀಶ ತಂಬಾಕದ, ಸತೀಶ ಹಳ್ಳಪ್ಪಗೌಡ್ರ, ಶಂಭು ಹಂಸಭಾವಿ, ಬಸವರಾಜ ಕಾಲ್ವಿಹಳ್ಳಿ,
ರಮೇಶ ಹಡಗದ ಇತರರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next