Advertisement

ರಾಜ್ಯ ಸರ್ಕಾರಿ ನೌಕರರಿಂದ ಶಾಸಕ-ಪರಿಷತ್‌ ಸದಸ್ಯರಿಗೆ ಸನ್ಮಾನ

02:42 PM Jan 09, 2022 | Team Udayavani |

ಹುಮನಾಬಾದ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಪಟ್ಟಣದ ಶಾಸಕರ ನಿವಾಸದಲ್ಲಿ ಶನಿವಾರ ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್‌ ಸದಸ್ಯರಾದ ಡಾ| ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ ಅವರನ್ನು ಸನ್ಮಾನಿಸಲಾಯಿತು.

Advertisement

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ, ನನ್ನ ಕ್ಷೇತ್ರದಲ್ಲಿ ಸರಕಾರಿ ನೌಕರಸ್ಥರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಂಡು ಬರುತ್ತಿದ್ದೇನೆ. ಇಲ್ಲಿಗೆ ಬರುವ ಬಹುತೇಕ ಸರ್ಕಾರಿ ಅಧಿಕಾರಿಗಳು ಬೇರೆಕಡೆಗೆ ವರ್ಗಾವಣೆ ಮಾಡಿಕೊಂಡು ಹೋಗಲು ಇಚ್ಛಿಸುವುದಿಲ್ಲ. ಇಲ್ಲಿನ ಸೂಕ್ತ ವ್ಯವಸ್ಥೆಗಳು ಸರ್ಕಾರಿ ನೌಕರಸ್ಥರಿಗೆ ಅನುಕೂಲಕರವಾಗಿದೆ. ಸಂಘದ ವಿವಿಧ ಬೇಡಿಕೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ನಾನು ಶಾಸಕನಾಗಿದ್ದು, ಇಬ್ಬರು ಸಹೋದರರು ವಿಧಾನ ಪರಿಷತ್‌ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ. ಕ್ಷೇತ್ರದ ಜನರ ನೀರಿಕ್ಷೆಗೆ ತಕ್ಕತೆ ಕೆಲಸ ಮಾಡಲು ಸಹೋದರರಿಗೂ ತಿಳಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ನೌಕರಸ್ಥರು ಶಾಸಕರಿಗೆ ಮನವಿ ಪತ್ರ ಸಲ್ಲಿಸಿ, ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ, ಭತ್ಯೆಗಳು ಜಾರಿಗೊಳಿಸುವುದು, ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದ್ದು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಕೂಡಲೇ ಭರ್ತಿಗೆ ಕ್ರಮ ವಹಿಸುವಂತೆ, ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ, ಪದವಿ ಪೂರ್ವ ಕಾಲೇಜುಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ನಾಗಶೆಟ್ಟಿ ಡುಮಣಿ, ಕಾರ್ಯದರ್ಶಿ ರೇವಣಸಿದ್ದಯ್ನಾ ಮಠಪತಿ, ಜಿಲ್ಲಾಧ್ಯಕ್ಷ ರಾಜೇಂದ್ರ ಗಂದಗೆ, ರಾಜಕುಮಾರ ಮಂಗಲಗಿ, ಬಸವರಾಜ ಜಕ್ಕಾ, ವೆಂಕಟೇಶ ಹಡಪದ, ಮಾಣಿಕ ನಾಗನಾಯ್ಕ, ಸಂಗಮೇಶ ಜಂಬಗಿ, ಮಲ್ಲಿಕಾರ್ಜುನ ಸಂಗಮಕರ್‌, ಈಶ್ವರ ತೋಟಳಾ, ಗೋರಖನಾಥ, ಶಿವಕುಮಾರ ಕಂಪ್ಲಿ, ಶರದಕುಮಾರ ನಾರಾಯಣಪೇಟಕರ್‌, ಶ್ರೀಶೈಲ ಸ್ವಾಮಿ, ಮಾರುತಿ ಪೂಜಾರಿ, ಸಾರಿಕಾ ಗಂಗಾ, ಶಿವರಾಜ ಕಪಲಾಪೂರೆ, ರಾಜಕುಮಾರ ಬೇಲೂರೆ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next