Advertisement

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

01:18 AM Dec 28, 2024 | Team Udayavani |

ಬೆಂಗಳೂರು: ಎರಡು ಬಣಗಳ ಜಿದ್ದಾಜಿದ್ದಿಯ ಪೈಪೋಟಿ ನಡುವೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಸಿ.ಎಸ್‌. ಷಡಾಕ್ಷರಿ 507 ಮತಗಳನ್ನು ಪಡೆದು ಜಯಭೇರಿ ಬಾರಿಸಿ ಮರು ಆಯ್ಕೆಯಾದರು.

Advertisement

ವಿರೋಧಿ ಬಣದಿಂದ ರಾಜ್ಯ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವರುದ್ರಯ್ಯ ವಿ.ವಿ. 485 ಮತಗಳನ್ನು ಗಳಿಸಿ ವಿಜಯ ಸಾಧಿಸಿದರು. ಇದರಿಂದಾಗಿ ಎರಡು ಬಣಗಳೂ ಒಂದೊಂದು ಸ್ಥಾನ ತೆಕ್ಕೆಗೆ ಪಡೆಯುವಲ್ಲಿಯಶಸ್ವಿಯಾಗಿವೆ.

ಸಂಘದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಪ್ರಜಾಸತ್ತಾತ್ಮಕ ನೌಕರ ವೇದಿಕೆ ನೇತೃತ್ವದಲ್ಲಿ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ. ಕೃಷ್ಣೇಗೌಡ ಹಾಗೂ ಹಾಲಿ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಸ್‌. ಷಡಾಕ್ಷರಿ ಸ್ಪರ್ಧಿಸಿದ್ದರು. ಈ ಎರಡು ಬಣಗಳ ನಡುವೆ ಪರಸ್ಪರ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಶುಕ್ರವಾರ ಕಬ್ಬನ್‌ ಪಾರ್ಕ್‌ನ ಸಂಘದ ಆವರಣದಲ್ಲಿ ನಡೆದ ಮತದಾನದಲ್ಲಿ ಎರಡೂ ಬಣಗಳ ಅಭ್ಯರ್ಥಿಗಳಿಗೆ ಅನಿರೀಕ್ಷಿತವಾದ ಫ‌ಲಿತಾಂಶ ಲಭಿಸಿದೆ.

ಮತದಾನದಿಂದ ಹೊರಗುಳಿದ 27 ಮಂದಿ
ಬೆಂಗಳೂರಿನ 102 ರಾಜ್ಯಪರಿಷತ್‌ ಸದಸ್ಯರು,193 ತಾಲೂಕುಗಳಲ್ಲಿ ಖಜಾಂಚಿ, ಕಾರ್ಯದರ್ಶಿ, ಅಧ್ಯಕ್ಷರು, ನಿರ್ದೇಶಕರು ಸೇರಿ ತಲಾ ನಾಲ್ಕು ಮಂದಿಗೆ ಹಾಗೂ ಪ್ರತಿ ಜಿಲ್ಲೆಯಲ್ಲಿ ತಲಾ ನಾಲ್ಕು ಮಂದಿ ಪರಿಷತ್‌ ಸದಸ್ಯರಿಗೆ ಮತ ಚಲಾಯಿಸುವ ಹಕ್ಕಿತ್ತು. 964 ಮತದಾರ ಸದಸ್ಯರ ಪೈಕಿ ರಾಜ್ಯಾಧ್ಯಕ್ಷ ಚುನಾವಣೆಯಲ್ಲಿ 949 ಮಂದಿ ಹಕ್ಕು ಚಲಾಯಿಸಿದ್ದು ಉಳಿದಂತೆ 15 ಮಂದಿ ಮತದಾರರು ಗೈರಾಗಿದ್ದರು ಹಾಗೂ ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಟ್ಟು 952 ಮತಗಳ ಚಲಾವಣೆಯಾಗಿದ್ದು 12 ಮಂದಿ ಮತದಾನದಿಂದ ಹೊರಗುಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next